ಮೀನು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಮೀನಿನಲ್ಲೂ ಅನೇಕ ರೀತಿಯ ವಿಧಗಳಿವೆ. ಅದರಲ್ಲೂ ಎಲ್ಲಾ ಥರದ ಮೀನಗಳನ್ನು ತಿನ್ನುವಂತಿಲ್ಲ. ಕೆಲವು ಬಗೆಯ ಮೀನುಗಳು ಆರೋಗ್ಯಕ್ಕೆ ಅತ್ಯುತ್ತಮ. ಮಕ್ಕಳು, ಹಿರಿಯರು ಮತ್ತು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮೀನು ಹೇಳಿ ಮಾಡಿಸಿದ ಔಷಧಿ. ಮೀನಿನಲ್ಲಿ ವಿಟಮಿನ್ ಎ, ವಿಟಮಿನ್ ಡಿ, ರಂಜಕ, ಮೆಗ್ನೀಸಿಯಮ್, ಸೆಲೆನಿಯಮ್ ಮತ್ತು ಅಯೋಡಿಯನ್ ಇವೆ. ಮಾತ್ರವಲ್ಲ ಪ್ರೋಟೋನ್ ಕೂಡ ಹೇರಳವಾಗಿದೆ. ಇದು ದೇಹಕ್ಕೆ ಅಗತ್ಯ ಖನಿಜಗಳು ಮತ್ತು ಜೀವಸತ್ವಗಳ ಒಂದು ಗಣಿ.
ಮೀನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ. ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಕೊಬ್ಬಿನಾಮ್ಲದಿಂದ ಕೂಡಿದ ಮೀನನ್ನು ಸೇವಿಸುವುದು ಒಳ್ಳೆಯದು. ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿದುಬಂದಿದೆ. ಮೀನನ್ನು ಹೆಚ್ಚು ಎಣ್ಣೆಯಲ್ಲಿ ಫ್ರೈ ಮಾಡಿ ಸೇವಿಸದಿರಿ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಮೀನಿನ ಸಾರು ಮಾಡಿ ಸೇವಿಸಿದರೆ ಬಹಳ ಒಳ್ಳೆಯದು. ಹೆಚ್ಚಿನ ಒಮೆಗಾ -3 ಕೊಬ್ಬಿನಾಮ್ಲದ ಅಂಶದಿಂದಾಗಿ ಕೊಬ್ಬಿನ ರೀತಿಯ ಮೀನುಗಳು ಹೃದಯದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಂಶೋಧಕರು ನಂಬಿದ್ದಾರೆ.
ಆದರೆ, ಸಣ್ಣ ಮೀನು ಅಥವಾ ಹುಲಿ ಮೀನುಗಳು ( ಫಾರ್ಮ್ ಮೀನು) ಹೆಚ್ಚು ಪೌಷ್ಠಿಕ ನೀಡುತ್ತದೆ ಎಂದು ಹೇಳುವುದು ತಪ್ಪು. ಯಾಕೆಂದರೆ ಫಾರ್ಮ್ ಚುಚ್ಚುಮದ್ದು ನೀಡಿ ಬೆಳೆಸುತ್ತಾರೆ. ಇದು ದೇಹಕ್ಕೆ ತುಂಬ ಹಾನಿಕಾರಕವಾಗಿದೆ. ಕೊಲೆಸ್ಟ್ರಾಲ್ ಮತ್ತು ಹೃದಯ ಕಾಯಿಲೆಗಳನ್ನು ಸಹ ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಟಿಲಾಪಿಯಾದಲ್ಲಿ ಹೆಚ್ಚು ಹಾನಿಕಾರಕ ಮತ್ತು ಕೊಬ್ಬು ಹೆಚ್ಚಾಗಿದೆ. ಇದು ಕೊಲೆಸ್ಟ್ರಾಲ್ ಮತ್ತು ಹೃದಯ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಇದು ಡೈಬ್ಯುಟಿಲೀನ್ ಎಂಬ ರಾಸಾಯನಿಕವನ್ನು ಸಂಗ್ರಹಿಸುತ್ತದೆ. ಇದರಿಂದ ಆಸ್ತಮಾ, ಬೊಜ್ಜು ಮತ್ತು ಅಲರ್ಜಿ ಬರಬಹುದು. ಇದಲ್ಲದೆ, ಡಯಾಕ್ಸಿನ್ ಎಂಬ ವಿಷಕಾರಿ ವಸ್ತುವೂ ಇದರಲ್ಲಿ ಕಾಣಿಸುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹುಲಿ ಮೀನುಗಳು ನೀರಿನಲ್ಲಿ ಬೀಳುವ ಕೈಗಾರಿಕಾ ಮತ್ತು ಕೃಷಿ ತ್ಯಾಜ್ಯವನ್ನು ತಿನ್ನುತ್ತವೆ. ಆದ್ದರಿಂದ ಇವು ಸಂಪೂರ್ಣ ಕಲುಷಿತ. ಇದರಲ್ಲಿರುವ ಪಾದರಸ (ಮರ್ಕ್ಯುರಿ) ಮಟ್ಟ ಮನುಷ್ಯನ ದೇಹಕ್ಕೆ ಸಹಿಸಲಾಗದ್ದು. ಪಾದರಸದಿಂದ ನರವ್ಯೂಹ ಸಮಸ್ಯೆಗಳು, ಮೆದುಳಿನ ಹಾನಿ ಬರಬಹುದು. ವಿಶೇಷವಾಗಿ ಗರ್ಭಿಣಿಯರು ಮತ್ತು ಮಕ್ಕಳು ಇಂತಹ ಮೀನನ್ನು ತಪ್ಪಿಸಬೇಕು ಎಂದು ವರದಿ ಇದೆ.
(ವಿವಿಧ ವರದಿಗಳಿಂದ)


