MIRROR FOCUS

ದೇಶೀ ಆಹಾರ ಸೇವನೆಯಿಂದ  ಆರೋಗ್ಯ ವೃದ್ಧಿ | ಡಾ.ಖಾದರ್‌ ಅಭಿಪ್ರಾಯ |

Share

ದೇಶೀ ಆಹಾರ ಸಂಪೂರ್ಣವಾಗಿ ಆರೋಗ್ಯವನ್ನು ತಂದು ಕೊಡುತ್ತದೆ. ಸಂಪತ್ತನ್ನು ಗಳಿಸುವುದಕ್ಕಿಂತ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮೈಸೂರಿನ ಪದ್ಮಶ್ರೀ ಡಾ. ಖಾದರ್ ಯಾದಗಿರಿಯಲ್ಲಿ ತಿಳಿಸಿದ್ದಾರೆ.

Advertisement

ಯಾದಗಿರಿ ನಗರದ ಲಕ್ಷ್ಮಿ ದೇವಸ್ಥಾನದಲ್ಲಿ ಹಮ್ಮಿಕೊಂಡದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸ್ವರ್ಣ ಜಯಂತಿ, ವಿಕಾಸ ಅಕಾಡೆಮಿ, ಭಾರತ ವಿಕಾಸ ಸಂಗಮ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೋಗ ಬಂದ ಮೇಲೆ ಆಹಾರ ಪದ್ಧತಿಯನ್ನು ಬದಲಾವಣೆ ಮಾಡುವ ಬದಲು ರೋಗ ಬರುವುದಕ್ಕೆ ಮೊದಲೇ ಆಹಾರ ಪದ್ದತಿಯನ್ನು ಬದಲಾಯಿಸಿ. ಅಕ್ಕಿ, ಗೋಧಿ, ಸಕ್ಕರೆಯಿಂದ ರೋಗಗಳು ಬರುತ್ತಿವೆ. ಪ್ಲಾಸ್ಟಿಕ್ ಕಣಗಳು ದೇಹವನ್ನು ಸೇರಿ ಲವಣಾಂಶಗಳು ಜೀವಸತ್ವಗಳನ್ನು ಹೀರುವ ಶಕ್ತಿಯನ್ನು ನಾಶಪಡಿಸಿ ಡಯಾಬಿಟಿಸ್, ಕ್ಯಾನ್ಸರ್ ನಂತಹ ಮಾರಕ ರೋಗಗಳು ಬಾಧಿಸುತ್ತಿವೆ ಎಂದರು. ನಮ್ಮ ಪೂರ್ವಜರು ನವಣೆ, ಸಾಬಿ, ಸಜ್ಜಿ, ಕೊರಲೇ, ಹುಚ್ಚೆಳ್ಳು, ಕೊಬ್ಬರಿಯಂತಹ ಸಿರಿಧಾನ್ಯಗಳನ್ನು ಆಹಾರ ಪದ್ದತಿಯಲ್ಲಿ ಬಳಸುತ್ತಿದ್ದರು. ಅವರ ಆರೋಗ್ಯವು ಸಧೃಡವಾಗಿ ಇರುತ್ತಿತ್ತು. ಹಿಂದಿನ ಪದ್ಧತಿ, ಜೀವನ ಶೈಲಿ ಮರೆಯಾಗಿದೆ. ವಿಷವರ್ತುಲದಿಂದ ಹೊರಬಂದು ಅಮೂಲಾಗ್ರವಾಗಿ ಆಹಾರ ಪದ್ಧತಿಯನ್ನ ಬದಲಾಯಿಸಿ. ಸಿರಿಧಾನ್ಯಗಳನ್ನು ಬೆಳೆಸುವುದು ಸರಳವಾಗಿದೆ. ಒಣಭೂಮಿ ಬೇಸಾಯದಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದು. ಇದರ ಸೇವೆಯಿಂದ ರೋಗಮುಕ್ತ ಜೀವನ ನಡೆಸಬಹುದು ಎಂದರು.

According to Dr. Khadar, diseases can be caused by rice, wheat, and sugar. He explained that plastic particles can enter the body, disrupt the absorption of vitamins, and potentially lead to serious illnesses such as diabetes and cancer. Khader also emphasized the negative impact of these substances on health.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…

56 minutes ago

ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |

ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…

1 hour ago

ಹೊಸರುಚಿ | ಗುಜ್ಜೆ ಕಡಲೆ ಗಸಿ

ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…

1 hour ago

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …

2 hours ago

ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ನ  ಹಣಕಾಸು ನೀತಿ ಸಮಿತಿ ಹಲವು  ಮಹತ್ವದ ನಿರ್ಧಾರಗಳನ್ನು…

2 hours ago

ಪಾರಂಪರಿಕ ಮಾಗಿ ಉಳುಮೆ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲ | ಕೃಷಿ ಇಲಾಖೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವರ್ಷದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವುರಿಂದ, ಪಾರಂಪರಿಕ ಮಾಗಿ…

2 hours ago