ಹೌದು, ಪಾನಿಪುರಿ ತಿನ್ನುವವರಿಗೆ ಇದು ಸಂತೋಷದ ವಿಷಯ. ಯಾರಾದಾದರೂ ನಿಮ್ಮಲ್ಲಿ ಪಾನಿಪುರಿ ತಿನ್ನಬೇಡಿ ಅದು ಆರೋಗ್ಯಕರವಲ್ಲ ಅಂದರೆ ಅವರಿಗೆ ಸ್ವಲ್ಪ ಈ ವಿಷಯವನ್ನು ತಿಳಿಸಿ.
ಇದೊಂದು ಜಂಕ್‌ಫುಡ್ ಅನ್ನೋ ಭಾವನೆ ಪ್ರತಿಯೊಬ್ಬರ ತಲೆಯಲ್ಲೂ ಇದೆ. ಆದರೆ ಈ ಸ್ವೀಟ್ ಫುಡ್ ಆರೋಗ್ಯನಿಧಿಯೂ ಹೌದು. ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ಮಾತ್ರವಲ್ಲ ಮಧುಮೇಹ ರೋಗಿಗಳು ಸಹ ಯಾವುದೇ ಹೆದರಿಕೆ ಇಲ್ಲದೆ ಪಾನಿಪುರಿಯನ್ನು ಸೇವಿಸಬಹುದು. ಈ ಪಾನಿಪುರಿಯಲ್ಲಿ ಬಳಸುವ ಪದಾರ್ಥಗಳೆಲ್ಲ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ.
ಮೂತ್ರದ ಸಮಸ್ಯೆಗಳು, ಬೊಜ್ಜು ಕಡಿಮೆ ಮಾಡುವಲ್ಲಿ, ಅಸಿಡಿಟಿ ಸಮಸ್ಯೆಗಳಿಗೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಹಾಗೂ ಬಾಯಿ ಹುಣ್ಣಿಗೆ ಸಹ ಇದು ಬೆಸ್ಟ್ ಮದ್ದಾಗಿದೆ. ಪಾನಿಪುರಿಗೆ ಬಳಸುವ ವಸ್ತುಗಳಾದ ಶುಂಠಿ, ಜೀರಿಗೆ, ಪುದಿನಾ, ಬ್ಲಾಕ್ ಸಾಲ್ಟ್, ಕೊತ್ತಂಬರಿ ಸೊಪ್ಪುಗಳಲ್ಲಿ ಮೆಗ್ನೀಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಪೋಲೇಟ್, ಸತು ಮತ್ತು ವಿಟಮಿನ್ ಎ,ಬಿ-6, ಬಿ-12,ಸಿ ಮತ್ತು ಡಿ ಇರುತ್ತದೆ. ಇದು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಯಾವುದೇ ಒಂದು ವಸ್ತುವಾಗಲಿ ಅತೀಯಾದರೆ ಅಮೃತವೂ ವಿಷ ಎಂಬ ಗಾದೆ ಮಾತು ಗೊತ್ತೆ ಇದೆ. ಹಾಗಾಗಿ ಪಾನಿಪುರಿ ಆರೋಗ್ಯದಾಯಕವಾದರೆ ಅತಿಯಾದ ಸೇವನೆಯೂ ಆರೋಗ್ಯಕ್ಕೆ ಒಳಿತಲ್ಲ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…