ಒಬ್ಬ ಅತಿಯಾದ ಶ್ರಿಮಂತ(Rich man) ಇದ್ದ. ಅವನು ಧರ್ಮದ(Dharma) ಮೇಲೆ ನಂಬಿಕೆಯನ್ನೂ ಇಟ್ಟಿದ್ದ. ಅವನಿಗೆ 10-15 ಕಂಪೆನಿ(Company)ಹಾಗೂ ಬೇರೆ ಬೇರೆ ವ್ಯವಹಾರ(Business) ಇತ್ತು. ಸಾವಿರಾರು ಜನರು, ಅವನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಕಾರಿನಲ್ಲಿ ಹೋಗುವಾಗ, ರೇಡಿಯೋದಲ್ಲಿ(Radio) ಯಾರೋ ಸ್ವಾಮಿಗಳು, “ಸತ್ತಾಗ, ಮೇಲೆ ಹೋಗುವಾಗ, ಮನುಷ್ಯ(Human), ಅವನ ಸಂಪತ್ತನ್ನು(Wealth) ಮೇಲೆ ಕೊಂಡು ಹೋಗಲು ಸಾಧ್ಯ ಇಲ್ಲ” ಹೇಳುವುದನ್ನು ಕೇಳಿದ. ಹಾಗೆ, ಅವನ ಕಚೇರಿ(Office) ತಲುಪುತ್ತಲೇ, ಅವನಿಗೆ ಒಂದು ಉಪಾಯ ಹೊಳೆಯಿತು.
ತನ್ನ ಎಲ್ಲಾ ಕಂಪೆನಿಯ ನೋಟೀಸ್ ಬೋರ್ಡ್ ನಲ್ಲಿ, ಹೀಗೆ ಬರೆದು ಹಾಕಿದ “ನನಗೆ ಯಾರಾದರೂ, ನನ್ನ ಸಂಪತ್ತನ್ನು, ಸತ್ತಾಗ, ಮೇಲೆ ಸ್ವರ್ಗಕ್ಕೆ ಕೊಂಡು ಹೋಗುವ ಉಪಾಯ ತಿಳಿಸಿದರೆ, ಅವರಿಗೆ 5 ಕೋಟಿ ರುಪಾಯಿ ಬಹುಮಾನ ಕೊಡುವೆನು.” ತಿಂಗಳು ಕಳೆದರೂ, ಯಾರೂ ಉಪಾಯ ಹೇಳಲು ಬರಲಿಲ್ಲ. ಶ್ರೀಮಂತನಿಗೆ ನಿರಾಶೆ ಆಯಿತು. ಆದರೆ, ಒಂದು ದಿನ, ಒಬ್ಬ ಭಿಕ್ಷುಕ(Bugger), ಅವನ ಕಚೇರಿಗೆ ಬಂದು, ತಾನು ಉಪಾಯ ತಿಳಿಸುತ್ತೇನೆ ಎಂದು ಹೇಳಿದ. ಶ್ರೀಮಂತನಿಗೆ ತುಂಬಾ ಆತುರ ಆಯಿತು. ಭಿಕ್ಷುಕ, ಶ್ರೀಮಂತನಿಗೆ ಕೇಳಿದ, ಒಡೆಯಾ, ನೀವು ಅಮೇರಿಕಾ, ಇಂಗ್ಲೆಂಡ್ ಅಥವಾ ಜಪಾನಿಗೆ ಹೋದಾಗ, ಅಲ್ಲಿ, ಭಾರತದ ರುಪಾಯಿ ಉಪಯೋಗಿಸುವಿರಾ ? ಶ್ರಿಮಂತ ಉತ್ತರಿಸಿದ, ಇಲ್ಲ. ಅಮೇರಿಕಾದಲ್ಲಿ ಡಾಲರ್, ಇಂಗ್ಲೆಂಡ್ನಲ್ಲಿ ಪೌಂಡ್, ಜಪಾನಿನಲ್ಲಿ ಯೆನ್ನ್ ಉಪಯೋಗ ಮಾಡ ಬೇಕಾಗುವುದು. ಅಲ್ಲಿಯ ಹಣ(ಕರೆನ್ಸಿ) ಬೇರೆ.
ಭಿಕ್ಷುಕ ಹೇಳಿದ, ಹಾಗಾದರೆ, ಭಾರತದಲ್ಲಿ ಉಪಯೋಗಿಸಿದ ರೂಪಾಯಿಯನ್ನು , ಸ್ವರ್ಗ ಲೋಕದಲ್ಲಿ ಉಪಯೋಗಿಸಲು ಸಾಧ್ಯವೇ ? ಅದು ಕೂಡಾ, ಬೇರೆಯೇ ಲೋಕ. ಸ್ವರ್ಗದ ಕರೆನ್ಸಿಯೇ ಬೇರೆ. ನಿಮ್ಮ ಸಂಪತ್ತನ್ನು, ಆ ಕರೆನ್ಸಿಯಲ್ಲಿ ಬದಲಾವಣೆ ಮಾಡಿ, ಸಾಯುವಾಗ, ತೆಗೆದು ಕೊಂಡು ಹೋಗ ಬೇಕಲ್ಲವೇ ? ಶ್ರೀಮಂತನಿಗೆ, ಕುತೂಹಲ ಇನ್ನೂ ಹೆಚ್ಚಾಯಿತು. ಅವನು ಭಿಕ್ಷುಕನಿಗೆ ಹೇಳಿದ, ಸುಮ್ಮನೆ ಸಮಯ ವ್ಯರ್ಥ ಮಾಡಬೇಡ, ಬೇಗ, ಸ್ವರ್ಗದ ಕರೆನ್ಸಿ ಏನು ಎಂದು ಹೇಳು.
ಭಿಕ್ಷುಕ ಹೇಳಿದ, ಸ್ವರ್ಗದಲ್ಲಿ, “ಪುಣ್ಯ” ಎಂಬ ಕರೆನ್ಸಿ ನಡೆಯುವುದು. ಭೂಮಿಯಲ್ಲಿ, ನಿನ್ನ ಸಂಪತ್ತಿನಿಂದ ಪುಣ್ಯವನ್ನು ಸಂಪಾದಿಸು, ಅದರಿಂದ ನೀನು ಸ್ವರ್ಗದಲ್ಲಿ ಸಂತೋಷವಾಗಿ ವ್ಯವಹರಿಸಬಹುದು. ನಿನ್ನ ಸಂಪತ್ತನ್ನು “ಪುಣ್ಯ” ಆಗಿ ಬದಲಾವಣೆ ಮಾಡಿಕೊಳ್ಳು. ಶ್ರೀಮಂತನ ಮನಸ್ಸು ಹಾಗು ಆತ್ಮ ಎರಡೂ ಬಾಗಿಲು ತೆಗೆಯಿತು. ಭೀಕ್ಷುಕನಿಗೆ ಹೇಳಿದ ಬಹುಮಾನ ಕೊಟ್ಟು ಕಳುಹಿಸಿದ. ಆ ದಿನದಿಂದಲೇ, ತನ್ನ ಸಂಪತ್ತನ್ನು ಬಡವರಿಗೆ, ಕಷ್ಟದಲ್ಲಿರುವವರಿಗೆ ಧಾನ ಮಾಡಲು ಪ್ರಾರಂಭ ಮಾಡಿದ. ಅವನ ಸಂಪತ್ತು “ಪುಣ್ಯ”ಎಂಬ ಕರೆನ್ಸಿ ಗೆ ಬದಲಾವಣೆ ಆಗಲು ಪ್ರಾರಂಭ ಆಯಿತು.
ಪುಣ್ಯವೇ ಸ್ವರ್ಗದ ಕರೆನ್ಸಿ…
(ಸಂಗ್ರಹ : ಡಿಜಿಟಲ್ ಮೀಡಿಯಾ )
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…