ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸತತ ಭಾರೀ ಮಳೆಯಾಗುತ್ತಿದೆ. ಕಲ್ಮಕಾರು, ಕೊಲ್ಲಮೊಗ್ರ ಪ್ರದೇಶದಲ್ಲಿ ಸಂಜೆ ಆರಂಭವಾದ ಭೀಕರ ಮಳೆ ರಾತ್ರಿಯವರೆಗೂ ಸುರಿದಿದೆ. ಹೊಳೆಯಲ್ಲಿ ಭಾರೀ ನೀರು ಉಕ್ಕಿ ಹರಿಯುತ್ತಿದೆ. ಕೊಲ್ಲಮೊಗ್ರದ ಸೇತುವೆ ಮುಳುಗಡೆಯಾಗಿದೆ. ಕೆಲವು ಮನೆಗಳಿಗೂ ನೀರು ನುಗ್ಗಿದೆ. ಸಂಜೆಯ ವೇಳೆಗೆ ಜನರು ಮನೆಗೆ ತೆರಳಲು ಪರದಾಟ ನಡೆಸುವಂತಾಯಿತು.
ಕೊಲ್ಲಮೊಗ್ರದಲ್ಲಿ ಮೂರನೇ ದಿನವೂ ಭಾರೀ ಮಳೆ | ಮುಳುಗಿದ ಸೇತುವೆ |#sulliarains #sullia #rain #HeavyRain #ಮಳೆ #ruralmirror pic.twitter.com/FD8oQ8H5Xp
— theruralmirror (@ruralmirror) August 3, 2022
ಈ ನಡುವೆ ರಸ್ತೆಯೂ ಸಮಸ್ಯೆ, ನೆಟ್ವರ್ಕ್ ಸಮಸ್ಯೆ ಕೂಡಾ ಕಾಡುತ್ತಿದೆ. ಮೊಬೈಲ್ ಸಿಗ್ನಲ್ ಸಿಗದೆ ಮಾಹಿತಿ ನೀಡುವುದಕ್ಕೂ ಕಷ್ಟವಾಗಿದೆ. ಕೊಲ್ಲಮೊಗ್ರದ ಯುವಕರ ತಂಡ ಅತಂತ್ರ ಸ್ಥಿತಿಯಲ್ಲಿ ಜನರಿಗೆ ನೆರವಾದರು. ಯುವಕರು ನಿರಂತರವಾಗಿ ಶ್ರಮ ವಹಿಸುತ್ತಿದ್ದಾರೆ. ತಡರಾತ್ರಿವರೆಗೂ ಸೇವೆಯಲ್ಲಿ ತೊಡಗಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel