#HeavyRain | ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪರೀಕ್ಷೆ ಬರೆಯಲು ಮಕ್ಕಳ ಸರ್ಕಸ್….‌ ! | ನದಿ ದಾಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು |

July 24, 2023
1:22 PM
ಭಾರೀ ಮಳೆಯ ನಡುವೆ ಕಾಲೇಜು ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ನದಿ ದಾಟಿ ತೆರಳಿದ್ದಾರೆ. ಅಪಾಯದ ನಡುವೆ ವಿದ್ಯಾರ್ಥಿಗಳು ನದಿಯಲ್ಲಿ ತೆರಳಿರುವುದು ಆಡಳಿತ ಗಮನಿಸಬೇಕಾಗಿದೆ.

ಸುಳ್ಯ ತಾಲೂಕು, ಕಡಬ ತಾಲೂಕುಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಇದೇ ವೇಳೆ ಘಟ್ಟ ಪ್ರದೇಶಗಳಲ್ಲೂ ಭಾರೀ ಮಳೆ ಹಿನ್ನೆಲೆಯಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ.  ಹೀಗಾಗಿ  ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ಬಳಿ ಹೆದ್ದಾರಿ ಜಲಾವೃತಗೊಂಡಿದ್ದು ಪದವಿ ವಿದ್ಯಾರ್ಥಿಗಳು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸಿ ಪರೀಕ್ಷೆಗೆ ಹಾಜರಾಗಬೇಕಾದ ಸ್ಥಿತಿ ಉಂಟಾಗಿತ್ತು.

ಕುಮಾರಧಾರಾ ನದಿ ದಾಟುತ್ತಿರುವ ವಿದ್ಯಾರ್ಥಿಗಳು : Photo Credit : Shiva Bhat

ಮಂಗಳೂರು ಯುನಿವರ್ಸಿಟಿ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿದ್ದು, ಮಳೆ ಕಾರಣ ಪರೀಕ್ಷೆ ಮುಂದೂಡಿಕೆ ಆಗಿರಲಿಲ್ಲ. ಪರಿಣಾಮ ಪಂಜ ಭಾಗದಿಂದ ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜಿಗೆ ಪರೀಕ್ಷೆ ಹಾಜರಾಗಲು ಬರುವ ವಿದ್ಯಾರ್ಥಿಗಳು ಜಲಾವೃತಗೊಂಡ ರಸ್ತೆಯಲ್ಲೇ ಸಂಚರಿಸಿ ಪರೀಕ್ಷಾ ಕೇಂದ್ರಗಳತ್ತ ಬಂದಿದ್ದಾರೆ.  ಬೆಳಗ್ಗೆ ಹಾಗೂ ಮಧ್ಯಾಹ್ನ ಪರೀಕ್ಷೆಗಳು ನಡೆಯಿತ್ತಿವೆ. ಕೊಡಗು ಜಿಲ್ಲೆಯಲ್ಲಿ ಸೆಮಿಸ್ಟರ್ ಪರೀಕ್ಷೆ ಮುಂದೂಡಲಾಗಿತ್ತು. ಇಲ್ಲಿ ಮುಂದೂಡಿಕೆ ಆಗಿರಲಿಲ್ಲ.

ಕುಮಾರಧಾರಾ ನದಿ ದಾಟುತ್ತಿರುವ ವಿದ್ಯಾರ್ಥಿಗಳು : Photo Credit : Shiva Bhat

 

ಭಾರೀ ಮಳೆ ಹಿನ್ನೆಲೆಯಲ್ಲಿ ಶಾಲೆ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡುತ್ತದೆ. ಆದರೆ ಗ್ರಾಮೀಣ ಭಾಗದ ಪರಿಸ್ಥಿತಿ ಭಾರೀ ಮಳೆಯಾದರೆ ಯಾವತ್ತೂ ಸಂಕಷ್ಟದಲ್ಲಿರುತ್ತದೆ. ಮಳೆಗಾಲ ಸರಿಯಾದ ಸಂಪರ್ಕ ವ್ಯವಸ್ಥೆ ಇರುವುದಿಲ್ಲ, ನದಿ, ಹೊಳೆ ದಾಟಿ ಬರಬೇಕಾದ ಸ್ಥಿತಿ ಇರುತ್ತದೆ. ಆದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆಯಾಗಿ ಕುಮಾರಧಾರಾ ನದಿ ಉಕ್ಕಿ ಹರಿಯುವ ವೇಳೆ ಅಪಾಯ ಸಂದರ್ಭದಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಆಗಮಿಸಿದ್ದು ಈಗ ಚರ್ಚೆಗೆ ಕಾರಣವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವಿಶ್ವದ ಶೇ.79ರಷ್ಟು ನದಿಗಳಲ್ಲಿ ಆಮ್ಲಜನಕ ಕುಸಿತ- ಉಷ್ಣವಲಯದ ನದಿಗಳಿಗೆ ಹೆಚ್ಚು ಅಪಾಯ
September 23, 2026
9:41 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-09-2026 | ಸೆ.30 ರಿಂದ ಮತ್ತೆ ಬದಲಾಗಲಿದೆ ಹವಾಮಾನ..!
September 23, 2026
1:58 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಎಲ್ಲೆಲ್ಲಾ ರೆಡ್‌ ಎಲರ್ಟ್..?‌ ಯಾವಾಗ..?
September 23, 2026
9:18 AM
by: ದ ರೂರಲ್ ಮಿರರ್.ಕಾಂ
₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’
September 22, 2026
8:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror