ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಶನಿವಾರ ಮಳೆಯಾಗಿದೆ. ಭಾನುವಾರ 9 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿ(RMC) ಮಾಹಿತಿ ನೀಡಿದೆ. ಇಲಾಖೆಯ ಮುನ್ಸೂಚನೆಯಂತೆ, ತಮಿಳುನಾಡಿನಲ್ಲಿ ಸೋಮವಾರದವರೆಗೆ ಇದೇ ಹವಾಮಾನ ಮುಂದುವರಿಯಲಿದೆ.
ಭಾನುವಾರ ಚೆಂಗಲ್ಪಟ್ಟು, ತಿರುವಣ್ಣಾಮಲೈ, ನಮಕ್ಕಲ್, ಕಲ್ಲಕುರಿಚಿ, ವಿಲ್ಲುಪುರಂ, ತಂಜಾವೂರು, ರಾಮನಾಥಪುರಂ, ಕಡಲೂರು ಹಾಗೂ ಸೇಲಂ ಸೇರಿ ಒಟ್ಟು 9 ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಚೆನ್ನೈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಿದೆ. ಮೆಡವಾಕ್ಕಂ, ಪಲ್ಲಿಕರಣೈ, ಮಾಮಲ್ಲಾಪುರಂ, ಪೆರುಂಗುಡಿ, ವೇಲಚೇರಿ, ನುಂಗಂಬಕ್ಕಂ ಮುಂತಾದ ಕಡೆಗಳಲ್ಲಿ ಸುಮಾರು 1 ಸೆಂ.ಮೀ ಮಳೆ ದಾಖಲಾಗಿದೆ.
ಮಳೆ ಹಾಗೂ ಮೋಡ ಕವಿದ ವಾತಾವರಣದ ಕಾರಣ ಚೆನ್ನೈ, ತಿರುಚಿ ಹಾಗೂ ಸೇಲಂನಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚು ದಾಖಲಾಗಿದ್ದು, ಕೊಯಂಬತ್ತೂರು ವಿಮಾನ ನಿಲ್ದಾಣದಲ್ಲಿ 18.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಹವಾಮಾನ ತಜ್ಞರ ಪ್ರಕಾರ, ತಮಿಳುನಾಡು–ಶ್ರೀಲಂಕಾ ಕರಾವಳಿಯ ಬಳಿ ಬಂಗಾಳಕೊಲ್ಲಿಯ ದಕ್ಷಿಣ ಪಶ್ಚಿಮ ಭಾಗದಲ್ಲಿ ನಿರ್ಮಾಣವಾದ ಪೂರ್ವ ದಿಕ್ಕಿನ ಗಾಳಿಯ ಚಲನೆ ಮಳೆಗೆ ಕಾರಣವಾಗಿದೆ. ಜನವರಿ 1 ರಿಂದ ತಮಿಳುನಾಡಿನಲ್ಲಿ 26 ಮಿ.ಮೀ ಮಳೆಯಾಗಿದೆ, ಇದು ಸರಾಸರಿ 10.8 ಮಿ.ಮೀ ಗಿಂತ ಹೆಚ್ಚಾಗಿದೆ.
ಚೆನ್ನೈ ಸೇರಿ ಹಲವಾರು ಜಿಲ್ಲೆಗಳಲ್ಲೂ ಹೆಚ್ಚುವರಿ ಮಳೆಯಾಗಿದೆ. ಚೆನ್ನೈನಲ್ಲಿ ಭಾನುವಾರ ಸಾಧಾರಣ ಮಳೆಯ ಜೊತೆಗೆ ಕೆಲವೆಡೆ ಗುಡುಗು ಸಹಿತ ಮಳೆಯ ಸಂಭವವೂ ಇದೆ ಎಂದು ಇಲಾಖೆ ತಿಳಿಸಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




