ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಚಿಕ್ಕೋಡಿ ತಾಲ್ಲೂಕಿನಲ್ಲಿ ವೇದ ಗಂಗಾ ಹಾಗೂ ದೂಧ ಗಂಗಾ ನದಿಗಳು ಅಪಾಯದ ಮಟ್ಟವನ್ನ ಮೀರಿ ಹರಿಯುತ್ತಿವೆ.ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ತಾಲ್ಲೂಕಿನ ಸದಲಗಾ ಪಟ್ಟಣದ ದೂಧಗಂಗಾ ನದಿ ದಡದಲ್ಲಿ ಬೀಡು ಬಿಟ್ಟಿದ್ದು, ಪ್ರವಾಹದ ಅಪಾಯ ಪರಿಸ್ಥಿತಿ ನಿಯಂತ್ರಣಕ್ಕೆ ಸಿದ್ದವಾಗಿದೆ. ಯಾವುದೇ ಅಪಾಯ ಪರಿಸ್ಥಿತಿ ಉಂಟಾದಲ್ಲಿ ತುರ್ತು ನಿರ್ವಹಣೆಗೆ ಸ್ಥಳದಲ್ಲಿ 30 ಸದಸ್ಯರ ತಂಡ ಸಿದ್ದವಾಗಿವೆ. ಅಗತ್ಯವೆನಿಸಿದರೆ, ಸ್ಥಳೀಯ ಜಿಲ್ಲಾಡಳಿತ, ರಕ್ಷಣಾ ತಂಡ ಸೇರಿದಂತೆ ಇತರೆ ಐದು ತಂಡಗಳು ಪರಿಹಾರ ಕಾರ್ಯದಲ್ಲಿ ತೊಡಗಲಿವೆ ಎಂದು NDRF ಇನ್ಸ್ಪೆಕ್ಟರ್ ಬಬ್ಲು ಬಿಸ್ವಾಸ್ ಹೇಳಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

