ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

September 7, 2026
7:59 AM
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು ಜೈವಿಕ ಇದ್ದಿಲು ತಯಾರಿಸಲಾಗುತ್ತಿದ್ದು, ಘಟಕವು ತಿಂಗಳಿಗೆ ಸುಮಾರು 2,000 ಟನ್ ತ್ಯಾಜ್ಯವನ್ನು ಸಂಸ್ಕರಿಸುತ್ತಿದೆ. ಇಲ್ಲಿ ತಯಾರಾದ ಜೈವಿಕ ತೈಲವು ಪ್ರಯೋಗಾಲಯ ಪರೀಕ್ಷೆಯ ಜತೆಗೆ ವಾಣಿಜ್ಯ ಹಡಗುಗಳ ನೈಜ ಸಮುದ್ರ ಪರೀಕ್ಷೆಯಲ್ಲೂ ಮೌಲ್ಯೀಕರಣಗೊಂಡಿದ್ದು, ಕರಾವಳಿಯ ಕೃಷಿ–ಸಂಸ್ಕರಣಾ ತ್ಯಾಜ್ಯಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಮೌಲ್ಯ ಸೃಷ್ಟಿಸುವ ಸಾಧ್ಯತೆಯನ್ನು ತೋರಿಸಿದೆ.

ಗೋಡಂಬಿ ಸಂಸ್ಕರಣೆಯ ನಂತರ ಉಳಿಯುವ ತ್ಯಾಜ್ಯಕ್ಕೆ ಸಾಮಾನ್ಯವಾಗಿ ತ್ಯಾಜ್ಯವೆಂಬ ದೃಷ್ಟಿಯಿಂದಲೇ ನೋಡಲಾಗುತ್ತದೆ. ಆದರೆ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಇದೇ ತ್ಯಾಜ್ಯ ಈಗ ಜೈವಿಕ ಇಂಧನದ ಕಚ್ಚಾ ವಸ್ತುವಾಗಿ ರೂಪಾಂತರಗೊಳ್ಳುತ್ತಿದೆ. ತಿಂಗಳಿಗೆ ಸುಮಾರು 2,000 ಟನ್ ಗೋಡಂಬಿ ಸಂಸ್ಕರಣಾ ತ್ಯಾಜ್ಯವನ್ನು ಸಂಸ್ಕರಿಸುವ ಘಟಕದಲ್ಲಿ ತಯಾರಾದ ಜೈವಿಕ ತೈಲವು ಪ್ರಯೋಗಾಲಯ ಪರೀಕ್ಷೆಯ ಜತೆಗೆ ವಾಣಿಜ್ಯ ಹಡಗುಗಳ ನೈಜ ಸಮುದ್ರ ಪರೀಕ್ಷೆಯಲ್ಲೂ ಗಮನಸೆಳೆದಿದೆ.

2023ರ ಏಪ್ರಿಲ್‌ನಲ್ಲಿ ಹೆಬ್ರಿ ಸಮೀಪ ಆರಂಭವಾದ ಈ ಘಟಕವು ಮೊದಲಿಗೆ ಒಂದು ಯಂತ್ರದೊಂದಿಗೆ ಕಾರ್ಯಾರಂಭಿಸಿ, ಇದೀಗ ನಾಲ್ಕು ಯಂತ್ರಗಳವರೆಗೆ ವಿಸ್ತರಿಸಿದೆ ಎಂದು ವರದಿ ತಿಳಿಸಿದೆ. ಗೋಡಂಬಿ ಸಂಸ್ಕರಣಾ ಘಟಕಗಳಿಂದ ನೇರವಾಗಿ ತ್ಯಾಜ್ಯ ಸಂಗ್ರಹಿಸಿ ಜೈವಿಕ ಇಂಧನ ಮತ್ತು ಜೈವಿಕ ಇದ್ದಿಲು ಉತ್ಪಾದಿಸಲಾಗುತ್ತಿದೆ.

ಗೋಡಂಬಿ ತ್ಯಾಜ್ಯದಿಂದ ಹಡಗು ಇಂಧನ : ಇಲ್ಲಿಯವರೆಗೆ ಗೋಡಂಬಿ ಸಂಸ್ಕರಣೆಯ ತ್ಯಾಜ್ಯವೆಂದರೆ ಸಮಸ್ಯೆ ಎಂಬ ದೃಷ್ಟಿಕೋನ ಸಾಮಾನ್ಯವಾಗಿತ್ತು. ಈಗ ಅದೇ ತ್ಯಾಜ್ಯವು ಸಂಸ್ಕರಣೆಗೊಂಡು ಜೈವಿಲ ತೈಲವಾಗಿ ಇಂಧನವಾಗಿ ಹೊಸ ಮೌಲ್ಯ ಪಡೆಯುತ್ತಿದೆ. ಉತ್ಪಾದನೆಯಾಗುವ ಜೈವಿಕ ತೈಲವನ್ನು ಹಡಗು ಸಾಗಣೆ ಸೇರಿದಂತೆ ಹೆಚ್ಚಿನ ಇಂಧನ ಅಗತ್ಯವಿರುವ ಕೈಗಾರಿಕೆಗಳಲ್ಲಿ ಬಳಸುವ ಸಾಧ್ಯತೆಯಿದೆ. ಜೊತೆಗೆ ಉತ್ಪಾದನೆಯಾಗುವ ಜೈವಿಕ ಇದ್ದಿಲನ್ನು ಮಣ್ಣಿನ ಗುಣಮಟ್ಟ ಸುಧಾರಿಸಲು ಮತ್ತು ತೇವಾಂಶ ಉಳಿಸಿಕೊಳ್ಳಲು ಬಳಸಬಹುದು.

ತಿಂಗಳಿಗೆ 2,000 ಟನ್ ತ್ಯಾಜ್ಯ ಸಂಸ್ಕರಣೆ : ಹೆಬ್ರಿ ಸಮೀಪದ ಘಟಕವು ಈಗ ಸುಮಾರು 2,000 ಮೆಟ್ರಿಕ್ ಟನ್ ಗೋಡಂಬಿ ಉಳಿಕೆಯನ್ನು ಪ್ರತಿ ತಿಂಗಳು ಸಂಸ್ಕರಿಸುತ್ತಿದೆ. ಘಟಕ ಆರಂಭವಾದ ನಂತರ ಇದುವರೆಗೆ 7,000 ಟನ್‌ಗೂ ಹೆಚ್ಚು ಜೈವಿಕ ದ್ರವ್ಯವನ್ನು ಸಂಸ್ಕರಿಸಿದ್ದು, ಸುಮಾರು 1,050 ಟನ್ ಜೈವಿಕ ಇಂಧನ ಮತ್ತು 2,900 ಟನ್ ಜೈವಿಕ ಇದ್ದಿಲು ಉತ್ಪಾದಿಸಲಾಗಿದೆ ಎಂದು ವರದಿ ತಿಳಿಸಿದೆ. ಇದು ಒಂದು ಸಣ್ಣ ತಂತ್ರಜ್ಞಾನ ಪ್ರಯೋಗದಿಂದ ವಾಣಿಜ್ಯ ಮಟ್ಟದ ತ್ಯಾಜ್ಯ ಮೌಲ್ಯವರ್ಧನೆಯತ್ತ ಸಾಗುತ್ತಿರುವ ಪ್ರಯತ್ನ ಎಂಬುದನ್ನು ಸೂಚಿಸುತ್ತದೆ.

ಹೆಬ್ರಿಯಲ್ಲೇ ಘಟಕ ಏಕೆ? : ಉಡುಪಿ ಜಿಲ್ಲೆಯಲ್ಲಿ ಹಲವು ಗೋಡಂಬಿ ಸಂಸ್ಕರಣಾ ಘಟಕಗಳಿವೆ. ಹೀಗಾಗಿ ಸಂಸ್ಕರಣೆಯ ನಂತರ ದೊರೆಯುವ ತ್ಯಾಜ್ಯವನ್ನು ದೂರ ಸಾಗಿಸುವ ಬದಲು ತ್ಯಾಜ್ಯ ಉತ್ಪತ್ತಿಯಾಗುವ ಪ್ರದೇಶದ ಸಮೀಪದಲ್ಲೇ ಸಂಸ್ಕರಿಸುವ ವ್ಯವಸ್ಥೆ ರೂಪಿಸಲಾಗಿದೆ. ಸ್ಥಳೀಯ ಸಂಸ್ಕರಣಾ ಘಟಕಗಳಿಂದ ಗೋಡಂಬಿ ತ್ಯಾಜ್ಯವನ್ನು ನೇರವಾಗಿ ಸಂಗ್ರಹಿಸಿ ಜೈವಿಕ ಇಂಧನ ಉತ್ಪಾದನೆಗೆ ಬಳಸಲಾಗುತ್ತಿದೆ. ಇದರ ಮತ್ತೊಂದು ಪ್ರಯೋಜನವೆಂದರೆ ತ್ಯಾಜ್ಯದ ಸಾಗಾಟ ಮತ್ತು ವಿಲೇವಾರಿ ಸಮಸ್ಯೆಯನ್ನು ಕಡಿಮೆ ಮಾಡುವ ಅವಕಾಶ.

ತ್ಯಾಜ್ಯ ಮಾತ್ರವಲ್ಲ, ಮಣ್ಣಿಗೂ ಉತ್ಪನ್ನ : ಈ ಯೋಜನೆಯ ಕುತೂಹಲಕಾರಿ ಭಾಗವೆಂದರೆ ಇಂಧನದ ಜೊತೆಗೆ ಜೈವಿಕ ಇದ್ದಿಲು ಉತ್ಪಾದನೆಯಾಗುವುದು. ಜೈವಿಕ ಇದ್ದಿಲನ್ನು ಮಣ್ಣಿನಲ್ಲಿ ಬಳಸುವುದರಿಂದ ಮಣ್ಣಿನ ಗುಣಮಟ್ಟ, ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮತ್ತು ಬೆಳೆ ಬೆಳವಣಿಗೆಗೆ ನೆರವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಹೀಗಾಗಿ ಒಂದೇ ಕೃಷಿ–ಸಂಸ್ಕರಣಾ ತ್ಯಾಜ್ಯದಿಂದ ಇಂಧನ ಹಾಗೂ ಮಣ್ಣಿಗೆ ಗೊಬ್ಬರವಾಗಿಯೂ ಬಳಕೆಯಾಗುತ್ತದೆ.

ಹೆಬ್ರಿ ಸಮೀಪದ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ತಯಾರಿಸಿದ ಜೈವಿಕ ತೈಲವು ಈಗ ಕೇವಲ ಪ್ರಯೋಗಾಲಯದ ಮಟ್ಟದಲ್ಲಿಲ್ಲ. ವಾಣಿಜ್ಯ ಹಡಗುಗಳ ನೈಜ ಸಮುದ್ರಯಾನದಲ್ಲೂ ಪರೀಕ್ಷಿಸಲಾಗಿದೆ. ಜೈವಿಕ ತೈಲದ ಕಾರ್ಯಕ್ಷಮತೆಯನ್ನು ಪ್ರಯೋಗಾಲಯ ಪರೀಕ್ಷೆಗಳಲ್ಲೂ ಪರಿಶೀಲಿಸಲಾಗಿದ್ದು, ಸಮುದ್ರ ಪರೀಕ್ಷೆಯಲ್ಲೂ ಗುಣಮಟ್ಟದಿಂದ ಕೂಡಿದೆ ಎಂದು ವರದಿ ಹೇಳಿದೆ.  ಇದು ಕರಾವಳಿಯ ಒಂದು ಸ್ಥಳೀಯ ಕೃಷಿ–ಸಂಸ್ಕರಣಾ ತ್ಯಾಜ್ಯವನ್ನು ಜಾಗತಿಕ ಸಾಗಣೆ ಕ್ಷೇತ್ರದ ಪರ್ಯಾಯ ಇಂಧನದೊಂದಿಗೆ ಸಂಪರ್ಕಿಸುವ ಪ್ರಯತ್ನವಾಗಿದೆ.

ಹಡಗುಗಳಿಗೆ ಪರ್ಯಾಯ ಇಂಧನ ಏಕೆ ಬೇಕು? :  ಸಮುದ್ರ ಸಾಗಣೆ ಕ್ಷೇತ್ರದಲ್ಲಿ ಇಂಧನ ಪರಿವರ್ತನೆ ದೊಡ್ಡ ಸವಾಲಾಗಿದೆ. ಸಾವಿರಾರು ಕಿಲೋಮೀಟರ್‌ಗಳ ಸಮುದ್ರಯಾನಕ್ಕೆ ಹೆಚ್ಚಿನ ಶಕ್ತಿಯ ಸಾಂದ್ರತೆಯ ಇಂಧನ ಬೇಕಾಗುತ್ತದೆ. ಹೀಗಾಗಿ ಭಾರೀ ಹಡಗುಗಳಿಗೆ ಕಡಿಮೆ ಹೊರಸೂಸುವಿಕೆಯ ಪರ್ಯಾಯ ಇಂಧನ ಹುಡುಕುವುದು ಜಾಗತಿಕವಾಗಿ ಪ್ರಮುಖ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿ ಮತ್ತು ಆಹಾರ ಸಂಸ್ಕರಣಾ ತ್ಯಾಜ್ಯದಿಂದ ಇಂಧನ ತಯಾರಿಸುವ ಪ್ರಯತ್ನಗಳಿಗೆ ಹೆಚ್ಚಿನ ಮಹತ್ವ ಬಂದಿದೆ.

ಕೃಷಿಕರಿಗೆ ಏನು ಸಂದೇಶ..? : ರೈತನ ಹೊಲದಲ್ಲಿ ಉಳಿಯುವ ಗೋಡಂಬಿ ತ್ಯಾಜ್ಯವಲ್ಲ. ಇದೂ ಮೌಲ್ಯಪಡೆದಿದೆ ಎನ್ನುವ ಸಂದೇಶ ಇಲ್ಲಿದೆ.  ಹೀಗಾಗಿ  ಕೃಷಿ ಉತ್ಪನ್ನದ ತ್ಯಾಜ್ಯವೆಂದರೆ ನಷ್ಟವಲ್ಲ; ಸರಿಯಾದ ತಂತ್ರಜ್ಞಾನ ಇದ್ದರೆ ಅದು ಮತ್ತೊಂದು ಉತ್ಪನ್ನದ ಕಚ್ಚಾ ವಸ್ತುವಾಗಬಹುದು. ಇದು ಗೋಡಂಬಿ ಮಾತ್ರವಲ್ಲ. ತೆಂಗು, ಅಡಿಕೆ, ಕಾಫಿ, ಕಬ್ಬು, ಭತ್ತ ಸೇರಿದಂತೆ ಹಲವು ಕೃಷಿ–ಸಂಸ್ಕರಣಾ ವಲಯಗಳಲ್ಲಿ ಉತ್ಪತ್ತಿಯಾಗುವ ಉಳಿಕೆಗಳಿಗೆ ಹೊಸ ಮೌಲ್ಯ ಹುಡುಕುವ ಅವಕಾಶವಿದೆ. ಈ ಬಗ್ಗೆ ಗಮನ ಅಗತ್ಯ ಇದೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

A facility near Hebri in Udupi is converting cashew-processing residues into biofuel and biochar, with the plant now processing nearly 2,000 metric tonnes of residues every month. Since starting operations in April 2023, the facility has processed more than 7,000 tonnes of biomass and produced around 1,050 tonnes of biofuel and 2,900 tonnes of biochar, according to the report. The refined bio-oil has undergone laboratory validation as well as real-world ocean trials on commercial vessels. The project highlights how a local agricultural-processing waste stream can be transformed into higher-value products for energy and soil improvement.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!
September 7, 2026
7:44 AM
by: ಮಿರರ್‌ ಡೆಸ್ಕ್‌
ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ
September 6, 2026
2:52 PM
by: ಸಾಯಿಶೇಖರ್ ಕರಿಕಳ
ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?
September 6, 2026
12:28 PM
by: ದ ರೂರಲ್ ಮಿರರ್.ಕಾಂ
ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!
September 6, 2026
11:11 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror