Advertisement
ಆರೋಗ್ಯ

ಎಸಿಡಿಟಿ ಸಮಸ್ಯೆಗೆ ಇದೆಯೇ… ? ಏನಿದೆ ಪರಿಹಾರ…? ಇಲ್ಲಿದೆ ಟಿಪ್ಸ್…‌ |

Share

ಆಸಿಡಿಟಿ ಸಮಸ್ಯೆ ಇಂದಿನ ದಿನಗಳಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ಬಿಟ್ಟಿದೆ..!.ಹೌದು , ಆಸಿಡಿಟಿ ಸಮಸ್ಯೆ ಈಗ ಎಲ್ಲರಿಗೂ  ಸಮಸ್ಯೆಯಾಗಿ ಬಿಟ್ಟಿದೆ.

Advertisement
Advertisement
Advertisement
Advertisement

ಇದಕ್ಕೆ ಪ್ರಮುಖ ಕಾರಣ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೇ ಇರುವುದು, ಹೆಚ್ಚು ಮಸಾಲೆಯುಕ್ತ ಅಥವಾ ಖಾರವಾಗಿರುವ ಆಹಾರ -ಪದಾರ್ಥಗಳ ಸೇವನೆ ಮಾಡುವುದು, ಎಣ್ಣೆಯಾಂಶ ಹೆಚ್ಚಿರುವ ಜಂಕ್‌ ಫುಡ್‌ಗಳ ಸೇವನೆ, ಪ್ರತಿದಿನ ಮೂರು-ನಾಲ್ಕು ಬಾರಿ ಕಾಫಿ ಕುಡಿಯವುದು, ಸರಿಯಾಗಿ ನೀರು ಕುಡಿಯದೇ ಇರುವುದು, ಹೀಗೆ ಇಂತಹ ಕೆಲವು ಕೆಟ್ಟ ಅಭ್ಯಾಸಗಳಿಂದಾಗಿ ದೇಹದಲ್ಲಿರುವ ಪಿಎಚ್ ಪ್ರಮಾಣ ದಲ್ಲಿ ವ್ಯತ್ಯಾಸ ಉಂಟಾಗಿ ಮೊದಲು ಕಾಡುವ ಸಮಸ್ಯೆಯೇ ಈ ಆಸಿಡಿಟಿ ಇಲ್ಲಾಂದ್ರೆ ಹುಳಿತೇಗು. ಈ ಸಮಸ್ಯೆಗೆ ಏನೆಲ್ಲಾ ಆಯುರ್ವೇದ ಮನೆಮದ್ದುಗಳು ಇವೆ ಎನ್ನುವುದನ್ನು ನೋಡೋಣ…

Advertisement

ಆಸಿಡಿಟಿ ನಿಯಂತ್ರಣಕ್ಕೆ ಬರಬೇಕೆಂದರೆ, ಮೊದಲಿಗೆ ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸ ಮಾಡಬೇಕು. ಕೆಲವೊಮ್ಮೆ ಕೆಲಸದ ಒತ್ತಡದಿಂದ ಅಥವಾ ಪ್ರತಿ ದಿನದ ಜಂಜಾಟದ ಜೀವನ ಶೈಲಿಯಿಂದಾಗಿ, ಸರಿ ಯಾದ ಸಮಯಕ್ಕೆ ಊಟ-ತಿಂಡಿ ಮಾಡದೇ, ತಮಗೆ ಸಮಯ ಸಿಕ್ಕಾಗಿ ಊಟ-ತಿಂಡಿ ಮಾಡುತ್ತಾ ಬಂದರೆ, ಆಸಿಡಿಟಿ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಬಗ್ಗೆ ತಜ್ಞರು ಹೇಳುವ ಪ್ರಕಾರ ಹಸಿವು ಶುರುವಾದ ಸಮಯದಲ್ಲಿ ಕೂಡಲೇ ಟೀ-ಕಾಫಿ ಕುಡಿಯುವ ಬದಲು ಊಟ ಅಥವಾ ಆರೋಗ್ಯಕರ ತಿಂಡಿಗಳನ್ನು ಸೇವನೆ ಮಾಡುವುದರಿಂದ ಆಸಿಡಿಟಿಯನ್ನು ನಿಯಂತ್ರಿಸಬಹುದಾಗಿದೆ.

Advertisement

ಹಾಲಿನ ಉಪ ಉತ್ಪನ್ನವಾದ ಮೊಸರು ಮಜ್ಜಿಗೆ ಆರೋಗ್ಯಕ್ಕೆ ಬಹಳ ಒಳ್ಳೆಯ ಆಹಾರ ಪದಾರ್ಥ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಪ್ರತಿದಿನ ಊಟದ ಬಳಿಕ ಪ್ರತಿದಿನ ಒಂದು ಲೋಟ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು.

ಪ್ರಮುಖವಾಗಿ ಮಜ್ಜಿಗೆಯಲ್ಲಿ ಕಂಡುಬರುವ ಆರೋಗ್ಯಕಾರಿ ಅಂಶಗಳು ಆಸಿಡಿಟಿಗೆ ಕಾರಣವಾಗುವ ಆಮ್ಲೀಯತೆ ಪ್ರಭಾವವನ್ನು ಹೋಗಲಾಡಿಸಿ ಹುಳಿ ತೇಗು ಎದೆಯುರಿ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟಿಕ್ ಸಮಸ್ಯೆಗೆ ಕಡಿವಾಣ ಹಾಕುತ್ತದೆ.​

Advertisement

ಶುಂಠಿ ಮತ್ತು ಉಪ್ಪು ಆಸಿಡಿಟಿಗೆ ಸಮಸ್ಯೆಗೆ ಒಳ್ಳೆಯ ಮನೆ ಮದ್ದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಪದೇ ಪದೇ ಆಸಿಡಿಟಿ ಸಮಸ್ಯೆ ಎದುರಿಸುವವರು ಊಟ ಮಾಡುವ ಹತ್ತು ನಿಮಿಷದ ಮೊದಲು, ಚಿಟಿಕೆ ಯಷ್ಟು ಉಪ್ಪಿನ ಜೊತೆಗೆ ಸಣ್ಣ ತುಂಡು ಹಸಿಶುಂಠಿ ಅಗೆಯಿರಿ ಹಾಗೂ ಇದರ ರಸವನ್ನು ನಿಧಾನಕ್ಕೆ ನುಂಗುತ್ತಾ ಬನ್ನಿ. ಹೀಗೆ ವಾರದಲ್ಲಿ ಮೂರು-ನಾಲ್ಕು ಬಾರಿ ಮಾಡುತ್ತಾ ಬಂದರೆ, ಆಸಿಡಿಟಿ, ಹುಳಿತೇಗು ಹಾಗೂ ಅಜೀರ್ಣದಂತಹ ಸಮಸ್ಯೆಗಳು ಬಹಳ ಬೇಗನೇ ದೂರವಾ ಗುತ್ತದೆ.​

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಅಲ್ಪಾವಧಿ ಬೆಳೆ ಸಾಲ – ಹಾಗೆಂದರೇನು..? | ರೈತರಿಗೆ ಪ್ರಯೋಜನ ಏನು..?

ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…

1 day ago

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |

‌ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್‌…

2 days ago

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

3 days ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

3 days ago