ಇವರು “ಕರುಣಾಮಯಿ ತಾಯಿ ” | ಬಂಜೆತನ ನಿವಾರಣೆಗೆ ನಾಟಿ ಔಷಧಿ ನೀಡುವ ವಿಜಯಲಕ್ಷ್ಮಿ ಕರುವಜೆ

September 20, 2025
7:54 AM
ಸಂತಾನವಿಲ್ಲದ ದಂಪತಿಗಳಿಗೆ ಔಷಧಿ ನೀಡುವ ಮೂಲಕ ಗಮನಸೆಳೆದಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಳಲಂಬೆಯ ವಿಜಯಲಕ್ಷ್ಮಿ ಕರುವಜೆ. ಅವರ ಅಧಿಕೃತ ದಾಖಲೆಗಳ ಪ್ರಕಾರ 450 ಕ್ಕೂ ಅಧಿಕ ದಂಪತಿಗಳು ಮಕ್ಕಳಾಗಿವೆ. ಸುಮಾರು 600 ಅಧಿಕ ಮಂದಿಗೆ ಸಂತಾನಪ್ರಾಪ್ತಿಯಾಗಿದೆ. 

ಸಂತಾನ ಭಾಗ್ಯವನ್ನು ಪಡೆಯಲು ಅನೇಕ ದಂಪತಿಗಳು ಸಂಕಷ್ಟ ಪಡುತ್ತಿರುತ್ತಾರೆ. ವಿವಿಧ ಔಷಧಿ ಬಳಿಕವೂ ಫಲಕಾರಿಯಾಗದೇ ಇರುವುದು ಕಂಡುಬರುತ್ತದೆ. ಅಂತಹ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಪಡೆಯಲು ಇಲ್ಲೊಬ್ಬರು ನಾಟಿ ಔಷಧಿ ಮೂಲಕ ಪರಿಣಾಮಕಾರಿ ಔಷಧಿಯನ್ನು ನೀಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಳಲಂಬೆಯ ವಿಜಯಲಕ್ಷ್ಮಿ ಕರುವಜೆ ಅವರು ಸಂತಾನ ಭಾಗ್ಯ ಪಡೆಯಲು ಬಯಸುವವರಿಗೆ ಈಗ “ಕರುಣಾಮಯಿ ತಾಯಿ”ಯಾಗಿದ್ದಾರೆ.

ಸುಳ್ಯ ತಾಲೂಕಿನ ಗುತ್ತಿಗಾರಿನ ವಳಲಂಬೆಯ ಆಂಗೀರಸ ವೇದಸದನದಲ್ಲಿರುವ ವೇ.ಮೂ.ಕರುವಜೆ ಕೇಶವ ಜೋಯಿಸ ಅವರ ಪತ್ನಿಯಾಗಿರುವ ವಿಜಯಲಕ್ಷ್ಮಿ ಅವರು ಕಳೆದ ಹಲವಾರು ವರ್ಷಗಳಿಂದ ನಾಟಿ ಔಷಧಿ ನೀಡುತ್ತಿದ್ದಾರೆ. ಬಾಲ್ಯದಲ್ಲಿ ತನ್ನ ತಾಯಿ ಹಾಗೂ ಅಜ್ಜಿಯ ಅವರ ಮೂಲಕ ಈ ಔಷಧಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ವಿವಾಹದ ಬಳಿಕ ಪತಿಯ ಒಪ್ಪಿಗೆ ಪಡೆದು ಔಷಧಿ ನೀಡಲು ಪ್ರಾರಂಭಿಸಿದ್ದರು. ಸಂತಾನವಿಲ್ಲದ ದಂಪತಿಗಳಿಗೆ ಔಷಧಿ ನೀಡುವ ಮೂಲಕ ಗಮನಸೆಳೆದಿದ್ದಾರೆ. ಈಗಾಗಲೇ ಇರುವ ಅವರ ಅಧಿಕೃತ ದಾಖಲೆಗಳ ಪ್ರಕಾರ 450 ಕ್ಕೂ ಅಧಿಕ ದಂಪತಿಗಳು ಮಕ್ಕಳಾಗಿವೆ. ಸುಮಾರು 600 ಅಧಿಕ ಮಂದಿಗೆ ಸಂತಾನಪ್ರಾಪ್ತಿಯಾಗಿದೆ ಎನ್ನುತ್ತಾರೆ ವಿಜಯಲಕ್ಷ್ಮಿ.

ಕಾಡಿಗೆ ತೆರಳಿ ಔಷಧಿ ಗಿಡಗಳು ಹಾಗೂ ಬೇರುಗಳನ್ನು ತಂದು ಅದನ್ನು ಹುಡಿ ಮಾಡುವ ಮಿಶ್ರಣವೇ ಈ ಔಷಧಿ, ಇತರ ಯಾವುದೇ ಕಲಬೆರಕೆ ಇಲ್ಲಿಲ್ಲ.  ಔಷಧಿ ನೀಡುವ ಮೊದಲು ದಂಪತಿಗಳ ಜೊತೆ ಮಾತುಕತೆ ಕಡ್ಡಾಯ ಹೀಗಾಗಿ ದಂಪತಿಗಳೇ ಔಷಧಿಗೆ ಬರಬೇಕು. ಪ್ರಯೋಗಾಲಯದ ವರದಿಗಳನ್ನು ಗಮನಿಸಿ ನಂತರ ಔಷಧಿಯನ್ನು ಇವರು ನೀಡುತ್ತಾರೆ. ಅದರ ಮೊದಲು ಜ್ಯೋತಿಷ್ಯದ ಮೂಲಕ ಜಾತಕ ವಿಮರ್ಶೆ- ದೋಷ ಪರಿಹಾರದ ಬಗ್ಗೆಯೂ ನೋಡಿದ ಬಳಿಕ ಮಾಹಿತಿಯನ್ನು ನೀಡಿ ಔಷಧಿ ಕೊಡುತ್ತಾರೆ. ವೈದ್ಯಕೀಯ ಲೋಕದಲ್ಲಿ ಸಂತಾನ ಸಾಧ್ಯವೇ ಇಲ್ಲ, ಪ್ರನಾಳ ಶಿಶುವೇ ಪರಿಹಾರ ಎಂದಿರುವ ಕೆಲವು ಪ್ರಕರಣಗಳಲ್ಲೂ ದಂಪತಿಗಳಿಗೆ ಮಕ್ಕಳಾಗಿವೆ ಎಂದು ವಿಜಯಲಕ್ಷ್ಮಿ ಹೇಳುತ್ತಾರೆ. ಅಂದರೆ ನಾಟಿ ಔಷಧಿಯಲ್ಲಿ ಶ್ರದ್ಧೆ ಹಾಗೂ ನಂಬಿಕೆ ಅಗತ್ಯ ಇದೆ. ಎಲ್ಲವೂ ಯಶಸ್ಸಾಗುತ್ತದೆ ಎನ್ನಲು ಸಾಧ್ಯವಿಲ್ಲ. ದೇವರ ಮೇಲಿನ ನಂಬಿಕೆ ಹಾಗೂ ದೋಷಗಳ ನಿವಾರಣೆಯೂ ಅಗತ್ಯ ಇದೆ. ಪ್ರಯತ್ನ ನಮ್ಮದು ಫಲ ದೇವರು ಎನ್ನುವ ಪಾಲಿಸಿ ವಿಜಯಕ್ಕ ಅವರದು. ಸಂತಾನ ಭಾಗ್ಯಕ್ಕೆ ಕರ್ಮಫಲವೂ ಕಾರಣವಾಗುತ್ತದೆ. ಅದಕ್ಕಾಗಿ ಜಾತಕ ವಿಮರ್ಶೆ ಮಾಡಿದ ಬಳಿಕ ಚಿಕಿತ್ಸೆ ನೀಡಬೇಕಾಗುತ್ತದೆ. ಒಂದು ವೇಳೆ ಪೂರ್ವಜನ್ಮದ ದೋಷ ಇದ್ದರೆ ಮೊದಲು ಅದಕ್ಕಾಗಿ ಪರಿಹಾರ ಮಾಡಬೇಕಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಸಂತಾನಭಾಗ್ಯ ಪಡೆಯಬೇಕೆಂದು ಔಷಧಿಗೆ ಬರುವ ಯಾರಿಗೂ ನಮ್ಮಲ್ಲಿ ಜಾತಿ ಮತ ಬೇಧವಿಲ್ಲ. ಭಾರತದ ವಿವಿದೆಡೆಯಿಂದ ಮಾತ್ರವಲ್ಲದೆ ಆಸ್ಟ್ರೇಲಿಯಾ, ಇರಾಕ್‌, ದುಬೈ ಮೊದಲಾದ ದೇಶಗಳಿಂದ  ಅಲ್ಲಿ ವಾಸವಾಗಿರುವ ಇಲ್ಲಿನ ನಿವಾಸಿಗಳು ಬಂದಿದ್ದಾರೆ. ಅವರಿಗೂ ಯಶಸ್ಸಾಗಿದೆ. ದೇವರ ಮುಂದೆ ಪ್ರಾರ್ಥಿಸಿಯೇ , ಔಷಧಿಯನ್ನು ನೀಡುತ್ತೇನೆ ಎನ್ನುತ್ತಾರೆ ವಿಜಯಕ್ಕ.

ಹೀಗೆ, ಔಷಧಿ ನೀಡುವುದಕ್ಕೆ ಯಾವುದೇ ದರವನ್ನು ನಿಗದಿ ಮಾಡುವುದಿಲ್ಲ, ಹಾಗೆಂದು ಸಂಪೂರ್ಣ ಉಚಿತವೂ ಅಲ್ಲ. ಸೇವಾ ರೂಪದ ಕೆಲಸ. ಆದರೆ ಕೆಲವು ಔಷಧಿ ಬೇರುಗಳನ್ನು, ಹುಡಿಗಳನ್ನು ಅಂಗಡಿಗಳಿಂದ ತರಬೇಕಾಗುತ್ತದೆ. ಇದಕ್ಕೆ ವೆಚ್ಚವಾಗುತ್ತದೆ. ಈ ವೆಚ್ಚವನ್ನು ಭರಿಸಬೇಕಾಗುತ್ತದೆ. ಇಂದು ಕಾಡು ನಾಶವಾಗುತ್ತಿದೆ, ಹೀಗಾಗಿ ಬೇರು, ಸೊಪ್ಪುಗಳ ಲಭ್ಯತೆಯೂ ಕಡಿಮೆಯಾಗುತ್ತದೆ. ಅನೇಕ ಔಷಧೀಯ ಗಿಡಗಳು ನಾಶವಾಗುತ್ತಿದೆ. ಇದಕ್ಕಾಗಿ ತೀರಾ ಅಗತ್ಯ ಹಾಗೂ ಅಪರೂಪದ ಗಿಡಗಳನ್ನು ಸಂರಕ್ಷಿಸಲು ನಾವೇ ಸುಮಾರು ಒಂದೂವರೆ ಎಕ್ರೆ ಪ್ರದೇಶದಲ್ಲಿ ಔಷಧೀಯ ಗಿಡಗಳನ್ನು ನೆಟ್ಟಿದ್ದೇವೆ ಎಂದು ಹೇಳುತ್ತಾರೆ ವಿಜಯಲಕ್ಷ್ಮಿ ಕರುವಜೆ. …… ಮುಂದೆ ಓದಿ……

Advertisement

ಕಳೆದ 25 ವರ್ಷಗಳಿಂದ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುತ್ತಾ ಬಂದಿರುವ ಇವರು, ಬಗೆ-ಬಗೆಯ ಕಾಯಿಲೆಗಳಿಗೆ ಚಿಕಿತ್ಸೆ ಫಲಕಾರಿಯಾದ ನಿದರ್ಶನಗಳು ಕಾಣಿಸುತ್ತವೆ. ಪ್ರಮುಖವಾಗಿ ಕಾಲುಗಳಲ್ಲಿ ಕಂಡುಬರುವ ಆಣಿ, ಕೆಡು ಸೇರಿದಂತೆ ದುರ್ಮಾಂಸಗಳ ನಿವಾರಣೆ, ಚರ್ಮ ರೋಗಗಗಳು ಹಾಗೂ ಮಕ್ಕಳ ಸಮಸ್ಯೆಗಳಿಗೂ ಔಷಧಿ ನೀಡುತ್ತಾರೆ. ಸ್ತ್ರೀಯರ ದೈಹಿಕವಾದ ಎಲ್ಲಾ ಸಮಸ್ಯೆಗಳಿಗೆ  ಔಷಧಿಯನ್ನು ನೀಡುತ್ತಿದ್ದಾರೆ. ಆದರೆ ಇಂದು ಕೆಲವು ಔಷಧಿ ಗಿಡಗಳು ಲಭ್ಯವಿಲ್ಲದ ಕಾರಣ ಔಷಧಿ ನೀಡಲಾಗುತ್ತಿಲ್ಲ ಎನ್ನುತ್ತಾರೆ ವಿಜಯಲಕ್ಷ್ಮಿ. ವಿಜಯಲಕ್ಷ್ಮಿಯವರನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆ: ‌8762129003 – ಅವರ ಸಂದರ್ಶನದ ವಿಡಿಯೋ ಇಲ್ಲಿದೆ….  ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಅಡಿಕೆ ತೋಟಕ್ಕೆ ನೀರು ಹೇಗೆ ಹಾಕಬೇಕು…? ಉಚಿತ ವಿದ್ಯುತ್‌ ಇದೆ ಎಂದು ನೀರು ಸುರಿಯಬೇಡಿ..!
January 5, 2026
7:41 AM
by: ರೂರಲ್‌ ಮಿರರ್ ಸುದ್ದಿಜಾಲ
ಹವಾಮಾನ ವರದಿ | 04.01.2026 | ಸದ್ಯ ಬಿಸಿಲು -ಮೋಡ |ಜ.8ರಿಂದ ಕೆಲವು ಕಡೆ ಮಳೆ ಸಾಧ್ಯತೆ- ಕಾರಣ ಏನು..?
January 4, 2026
12:02 PM
by: ಸಾಯಿಶೇಖರ್ ಕರಿಕಳ
ಪಾಕಿಸ್ತಾನದಲ್ಲಿ ಕೃಷಿ ನೀತಿಗಳು ವೈಫಲ್ಯ | ಹವಾಮಾನ ಆಘಾತ- ಸಂಕಷ್ಟದಲ್ಲಿ ಕೃಷಿ
January 4, 2026
10:00 AM
by: ದ ರೂರಲ್ ಮಿರರ್.ಕಾಂ
ಭಾರತದ ಸೂಪರ್‌ಫುಡ್‌ಗಳ ಪುನರುಜ್ಜೀವನ | ಜಾಗತಿಕ ಆಹಾರಕ್ರಮದಲ್ಲಿ ಹಲಸು, ನುಗ್ಗೆ | ಆದಾಯ ತರಬಲ್ಲ ಕೃಷಿಯತ್ತ ಚಿತ್ತ |
January 4, 2026
8:15 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror