ಶುಭ ಸಮಾರಂಭಗಳಿಗೆ ತಾಂಬೂಲ ತುಂಬಾ ಭಾರ..! ವೀಳ್ಯದೆಲೆ ಒಂದು ಕಟ್ಟಿಗೆ ಒಂದುನೂರ ಐವತ್ತು ರೂಗಳಷ್ಟುಏರಿದ ದರ. ಇನ್ನು ದಿನಂಪ್ರತಿ ಎಲೆಅಡಿಕೆ ಹಾಕಿಕೊಳ್ಳುವವರ ನಾಲಿಗೆಗಿಂತ ಕಣ್ಣೇ ಕೆಂಪಾಗಿಸುತ್ತೆ ವೀಳ್ಯದೆಲೆ. ಇನ್ನು ಮುಂಗಾರು ಮಳೆ ಆರಂಭಗೊಳ್ಳುವವರೆಗೂ ದರ ಇಳಿಯುವುದು ಅನುಮಾನವೇ.
ಹೌದು ಸಮಾರಂಭ ಯಾವುದೇ ಇರಲಿ, ಪೂಜಾ ಕಾರ್ಯಕ್ರಮಗಳೇ ಇರಲಿ ವೀಳ್ಯದೆಲೆ ಬೇಕೇಬೇಕು. ಆದರೆ ಈ ವೀಳ್ಯದೆಲೆಯ ಬೆಲೆ ನೋಡಿದರೆ ಮುಗಿಲೆತ್ತರಕ್ಕೇರಿದೆ. ಹತ್ತುರೂಗೆ, ಇಪ್ಪತ್ತು ರೂಪಾಯಿಗಳಿಗೆ ವಿಳ್ಯದೆಲೆ ಕೊಡಿ ಎಂದರೆ ಇಲ್ಲಾ ರೀ..ಬರೋದಿಲ್ಲ, ಯಾಕಪ್ಪಾ ಎಂದರೆ ಸ್ವಾಮಿ ಒಂದು ಕಟ್ಟು ವಿಳ್ಯದೆಲೆ ನೂರೈವತ್ತು ರೂಪಾಯಿ ಎಂದಾಗ ದಿನವೂ ಎಲೆಅಡಿಕೆ ಜಗಿಯುವವರಿಗೆ ಹಾಗೆ ಎಲೆಅಡಿಕೆ ತಲೆಗೆರುತ್ತೆ. ಮಳೆಗಾಲ ಕೊನೆಯಾಗಿ ಚಳಿಗಾಲದ ಆರಂಭದೊತ್ತಿಗೆ ವಿಳ್ಳೆದೆಲೆ ಬಳ್ಳಿಯಲ್ಲಿ(ಅಂಬು) ಚಿಗುರುವುದಿಲ್ಲ. ಈ ಕಾರಣ ವಿಳ್ಳೆದೆಲೆಯ ಬೆಲೆ ಹೆಚ್ಚಾಗುತ್ತಿದೆ. ಜೊತೆಗೆ ಕಳೆದ ಎರಡು ವರ್ಷಗಳಿಂದ ಹೆಚ್ಚು ಮಳೆಯಾಗಿದ್ದು ವಿಳ್ಯದೆಲೆ ತೋಟದಲ್ಲಿ ನೀರು ನಿಂತುಕೊಂಡಿದ್ದರ ಪರಿಣಾಮ, ಸಾಕಷ್ಟು ತಂಗಾಳಿ ಬೀಸಿರುವುದರಿಂದ ಸಾಕಷ್ಟು ಎಲೆಬಳ್ಳಿಗಳು ಕೊಳೆತುಹೋಗಿವೆ. ಹಾಗಾಗಿ ಮಾರುಕಟ್ಟೆಗೆ ಯಥೇಚ್ಛಾ ವೀಳ್ಯದೆಲೆ ದಾಸ್ತಾನು ಆಗುತ್ತಿಲ್ಲ.
ನಿಮ್ಮ ಮನೆ ಕೈ ತೋಟದಲ್ಲಿ ಒಂದು ಬಳ್ಳಿ ನೆಟ್ಟಿದ್ದರೆ ಬಚಾವ್. ಇಲ್ಲಾಂದ್ರೆ ಎಲೆ ಹಾಕದೆ ಬರೀ ಅಡಿಕೆಯಲ್ಲಿ ಬಾಯಿ ಅಲ್ಲಾಡಿಸ ಬೇಕಷ್ಟೆ.
ಅಕ್ರಮವಾಗಿ ಸುಮಾರು 68 ಟನ್ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…
ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…
ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…