#HimachalPradesh | ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ | ಗ್ರಾಮದ ಜನರು ತತ್ತರ |

August 14, 2023
10:30 AM
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇದೀಗ ಹಲವು ಕಡೆ ಭೂಕುಸಿತ ಆರಂಭವಾಗಿದೆ. ಗ್ರಾಮವೊಂದರಲ್ಲಿ ಮೇಘಸ್ಫೋಟಕ್ಕೆ 7 ಮMದಿ ಬಲಿಯಾಗಿದ್ದಾರೆ.
Advertisement

ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸುತ್ತಿದೆ.  ಹಲವು ಕಡೆ  ರಸ್ತೆಗಳು ಕೊಚ್ಚಿಹೋಗಿವೆ ಮತ್ತು ವ್ಯಾಪಕ ಹಾನಿಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಶಿಮ್ಲಾ-ಚಂಡೀಗಢ ರಸ್ತೆಯನ್ನು ಬಸ್‌ಗಳು ಮತ್ತು ಟ್ರಕ್‌ಗಳಿಗೆ ಸ್ಥಗಿತಗೊಳಿಸಲಾಗಿದೆ. ಸೋಲನ್‌ನ ಕಂದಘಾಟ್ ಪ್ರದೇಶದ ಜಡೋನ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದೆ. ಮಳೆಯ ನೀರು ಏಕಾಏಕಿ ಹರಿದು ಬಂದ ಪರಿಣಾಮ ಎರಡು ಮನೆಗಳು ಹಾಗೂ ಗೋಶಾಲೆ ಕೊಚ್ಚಿ ಹೋಗಿದೆ. 7 ಮಂದಿ ಬಲಿಯಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.ದುರಂತದ ನಂತರ ಐದು ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.

Advertisement

ಭಾನುವಾರ, ಭಾರೀ ಗಾಳಿ ಮಳೆಯ ಕಾರಣದಿಂದ ಮರವೊಂದು ವಾಹನದ ಮೇಲೆ ಬಿದ್ದು ಖಾಸಗಿ ಬಸ್ ಕಂಡಕ್ಟರ್ ಗಾಯಗೊಂಡಿದ್ದರು. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಭಾರೀ ಮಳೆಯಿಂದಾಗಿ ಹಿಮಾಚಲ ರಾಜ್ಯದಾದ್ಯಂತ  621 ರಸ್ತೆಗಳನ್ನು ಮುಚ್ಚಲಾಗಿದೆ.  ಹವಾಮಾನ ಮುನ್ಸೂಚನೆಯ ಪ್ರಕಾರ ಆಗಸ್ಟ್ 17 ರವರೆಗೆ ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆ, ಗುಡುಗು ಮತ್ತು ಮಿಂಚು ಮುಂದುವರಿಯಲಿದೆ.

Advertisement
Advertisement

ನಿರಂತರ ಮಳೆಯ ಕಾರಣದಿಂದ ಹಿಮಾಚಲ ಪ್ರದೇಶದ  ರಾಜ್ಯದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆಯನ್ನು  ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಘೋಷಿಸಿದರು.

Advertisement

ಜೂನ್ 24 ರಂದು ಮುಂಗಾರು ಪ್ರಾರಂಭವಾದಾಗಿನಿಂದ, ಹಿಮಾಚಲ ಪ್ರದೇಶವು ₹ 7,020 ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದೆ ಮತ್ತು ಮಳೆ ಸಂಬಂಧಿತ ಘಟನೆಗಳು ಮತ್ತು ರಸ್ತೆ ಅಪಘಾತಗಳಿಂದ 257 ಸಾವುಗಳು ವರದಿಯಾಗಿದೆ.

Advertisement

Source: ANI

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚೀನಾವನ್ನು ಸೈಡ್‌ಲೈನ್‌ ಮಾಡಿದ ಯುಎಸ್‌ | ಯುಎಸ್‌ನ ವಾಲ್‌ಮಾರ್ಟ್‌ಗೆ ಭಾರತದಿಂದ ಚಿಲ್ಲರೆ ವಸ್ತುಗಳ ರಫ್ತು | ಈ ವರ್ಷ ವಾಲ್‌ಮಾರ್ಟ್‌ ಆಮದು ಮಾಡಿಕೊಂಡ ವಸ್ತು ಎಷ್ಟು..? |
December 1, 2023
2:10 PM
by: The Rural Mirror ಸುದ್ದಿಜಾಲ
ಲೆಮನ್​ ಗ್ರಾಸ್​ ಬೆಳೆಯ ಮೂಲಕ ಬದುಕು ಬದಲಾಯಿಸಿದ ಕುಟುಂಬ | ನಕ್ಸಲ್‌ ಪೀಡಿತ ಪ್ರದೇಶದ ರೈತ ದಂಪತಿಯ ಯಶೋಗಾಥೆ
December 1, 2023
1:25 PM
by: The Rural Mirror ಸುದ್ದಿಜಾಲ
ತುರಿಗಜ್ಜಿ (ಸ್ಕೇಬಿಸ್) ಎಂದರೇನು? | ಹೋಮಿಯೋಪತಿಯಲ್ಲಿದೆ ಪರಿಣಾಮಕಾರಿ ಚಿಕಿತ್ಸೆ |
December 1, 2023
12:55 PM
by: The Rural Mirror ಸುದ್ದಿಜಾಲ
ಪಾಕಿಸ್ತಾನದ ಆರ್ಥಿಕ ಸಮಸ್ಯೆ ಹಲವು ದೇಶಗಳಿಗೆ ಹೊಡೆತ…! | ಹೊರ ದೇಶಗಳಿಂದ ಆಮದಾಗುತ್ತಿದ್ದ ಗೋಧಿಯ ಮೇಲೆ ನಿಷೇಧ ಹೇರಿದ ಪಾಕ್‌ |
December 1, 2023
12:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror