Advertisement
ಸುದ್ದಿಗಳು

ಮೀಸಲು ಅರಣ್ಯದಲ್ಲಿರುವ ಮಸೀದಿ ಕಟ್ಟಡ ತೆರವಿಗೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ | ನ್ಯಾಯಾಲಯದ ಆದೇಶ ಪಾಲನೆಗೆ ಒತ್ತಾಯ |

Share

ಗೂನಡ್ಕದ ಮೀಸಲು ಅರಣ್ಯದಲ್ಲಿ ಅರಣ್ಯ ಒತ್ತುವರಿ ಮೂಲಕ ಮಸೀದಿ ಕಟ್ಟಡ ನಿರ್ಮಾಣ ಮಾಡಿರುವುದನ್ನು ತೆರವು  ಮಾಡಬೇಕೆಂಬ ನ್ಯಾಯಾಲಯದ ಆದೇಶ ಪಾಲನೆಯಾಗಿಲ್ಲ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮೆರವಣಿಗೆ ಹಾಗೂ ಸುಳ್ಯ ಅರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಗೂ ಮುನ್ನ ಹಿಂಜಾವೇ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ನಂತರ  ಅರಣ್ಯ ಇಲಾಖಾಯಲ್ಲಿ ಪ್ರತಭಟನಾ ಸಭೆ ನಡೆಸಿದರು.  2018 ರಲ್ಲಿ ಗೂನಡ್ಕ ರಕ್ಷಿತಾರಣ್ಯದಲ್ಲಿರುವ ಮಸೀದಿ ಕಟ್ಟಡ ತೆರವಿಗೆ ಆದೇಶವಾದರೂ ಇದುವರೆಗೂ ಅರಣ್ಯ ಇಲಾಖಾ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಇದೀಗ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆಯಾಗಿದೆ, ಇದಕ್ಕೆ ಕಾರಣ ಅರಣ್ಯ ಇಲಾಖೆ. ಇಲಾಖಾ ಅಧಿಕಾರಿಗಳು ಸೂಕ್ತ ದಾಖಲೆ ನೀಡದೇ ಇದ್ದುದು ಕಾರಣ ಎಂದು ಆರೋಪಿಸಿದರು. ಇದೀಗ ತಕ್ಷಣವೇ ಸೂಕ್ತ ಕ್ರಮವಾಗಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ, ಭಜರಂಗದಳ ಪ್ರಾಂತ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಮಾತೃಸುರಕ್ಷಾ  ಮಂಡಳಿ ಸಂಚಾಲಕ ಗಣಪತಿ ಭಟ್‌ ಕೆದಿಲ,  ತಾಲೂಕು ಸಂಚಾಲಕ ಮಹೇಶ್‌ ಉಗ್ರಾಣಿಮನೆ, ಹಿಂಜಾವೇ  ಪ್ರಮುಖರಾದ ಅಜಿತ್‌ ರೈ ಹೊಸಮನೆ, ಸಂಘಟನಾ ಕಾರ್ಯದರ್ಶಿ ಚಿನ್ಮಯ್‌ ಈಶ್ವರಮಂಗಲ ಜಗದೀಶ್‌, ಲತೀಶ್‌ ಗುಂಡ್ಯ, ನಿಕೇತ್‌ ಉಬರಡ್ಕ ಮೊದಲಾದವರಿದ್ದರು.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ

ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…

5 hours ago

ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…

6 hours ago

ಜಾನುವಾರುಗಳ ಮೇವಿಗಾಗಿ ₹25 ಕೋಟಿ ಬಿಡುಗಡೆ

ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…

12 hours ago

ಬೆಂಗಳೂರಿನ ಐಐಎಂನಲ್ಲಿ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’ ಅಧ್ಯಯನ ವರದಿ ಬಿಡುಗಡೆ

ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…

12 hours ago

ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ

ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…

20 hours ago

ಅಡಿಕೆ ಕ್ಷೇತ್ರಕ್ಕೆ ಬೇಕಿದೆ ಹೊಸ ರಾಷ್ಟ್ರೀಯ ಸಮನ್ವಯ ಮಾದರಿ

ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…

20 hours ago