#Hindu |ಹಿಂದೂಗಳ ಸಮಸ್ಯೆಗಳಿಗೆ ಒಂದೇ ಪರಿಹಾರ “ಹಿಂದೂರಾಷ್ಟ್ರ” | ಸನಾತನ ಸಂಸ್ಥೆ ಅಭಿಮತ |

September 11, 2022
8:54 PM

ಹಿಂದೂ ಜನಜಾಗೃತಿ ಸಮಿತಿಯ ದ್ವಿದಶಕ ವರ್ಧಂತ್ಯೋತ್ಸವದ ಪ್ರಯುಕ್ತ ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ. ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನದ ನಿಮಿತ್ತ ಪುತ್ತೂರಿನ ಶಾರದಾ ಭಜನಾ ಮಂದಿರ ಶನಿವಾರದಂದು ಪ್ರವಚನ ನಡೆಯಿತು.

Advertisement
Advertisement

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಚೇತನ್ ರಾಜಹಂಸ ಮಾತನಾಡಿ ಸಮಾಜದಲ್ಲಿ ಇಂದು ಭ್ರಷ್ಟಾಚಾರ, ಮತಾಂತರ, ಲವ್ ಜಿಹಾದ್,ಗೋಹತ್ಯೆ ಮುಂತಾದವುಗಳು ತಾಂಡವವಾಡುತ್ತಿದೆ. ಇದಕ್ಕೆ ಕಾನೂನಿನಲ್ಲಿ ತಡೆಹಿಡಿಯುವ ಅವಕಾಶವಿದ್ದರೂ ವ್ಯವಸ್ಥೆ ಸರಿಯಿಲ್ಲದ ಕಾರಣ ಇದರ ತೊಂದರೆಯನ್ನು ಪ್ರತಿಯೊಬ್ಬರು ಅನುಭವಿಸುತ್ತಿದ್ದಾರೆ. ಕಾನೂನಿನ ಮುಖಾಂತರ ಹೋರಾಟ ಮಾಡಲು ಕೋರ್ಟಿನಲ್ಲಿ ಸುಮಾರು 3 ಕೋಟಿಯಷ್ಟು ಕೇಸ್ ಗಳು (ಅರ್ಜಿಗಳು) ಇತ್ಯರ್ಥ ಆಗದೆ ಬಾಕಿ ಉಳಿದಿದೆ. ಇದರಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗಲೂ ಸಾಧ್ಯವಿದೆಯೇ? ಈ ಎಲ್ಲಾ ಸಮಸ್ಯೆಗಳಿಗೆ ಪ್ರತಿಯೊಬ್ಬ ಹಿಂದೂಗಳಲ್ಲಿ ಹಿಂದೂರಾಷ್ಟ್ರ ಸ್ಥಾಪನೆಯ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಇದಕ್ಕಾಗಿ ಧರ್ಮಾದಿಷ್ಠಿತ ಹಿಂದೂರಾಷ್ಟ್ರ ಸ್ಥಾಪನೆಯೊಂದೇ ಗುರಿ ಎಂದು ಹೇಳಿದರು.

Advertisement

ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್ ಗೌಡ ಮಾತನಾಡಿ, ಹೇಗೆ ಸೂರ್ಯೋದಯ ಆಗುವಾಗ ಕತ್ತಲೆ ತನ್ನಷ್ಟಕ್ಕೆ ದೂರವಾಗುತ್ತದೆಯೋ ಅದೇ ರೀತಿ ಹಿಂದೂರಾಷ್ಟ್ರ ಸ್ಥಾಪನೆಯಾದರೆ ತನ್ನಷ್ಟಕ್ಕೇ ಭ್ರಷ್ಟಾಚಾರ, ಲವ್ ಜಿಹಾದ್, ಮತಾಂತರ, ಗೋಹತ್ಯೆ ಇದು ನಿಲ್ಲಲಿಕ್ಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ “ಹಿಂದೂ ರಾಷ್ಟ್ರ” ಸ್ಥಾಪನೆಯ ಪ್ರತಿಜ್ಞೆಯನ್ನು ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಚಂದ್ರ ಮೊಗೇರ ಮತ್ತು ಧರ್ಮಪ್ರೆಮಿಗಳಾದ  ದಿನೇಶ್ ಜೈನ್, ನವೀನ್ ಕುಲಾಲ್, ಹರಿಪ್ರಸಾದ್ ಶೆಟ್ಟಿ, ಕರುಣಾಕರ ಪುಣಚ, ಅಶೋಕ ಶಾಂತಡ್ಕ ಮತ್ತಿತರರು ಉಪಸ್ತಿತರಿದ್ದರು.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ : ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು
April 25, 2024
3:13 PM
by: The Rural Mirror ಸುದ್ದಿಜಾಲ
ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ : ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ
April 25, 2024
3:00 PM
by: The Rural Mirror ಸುದ್ದಿಜಾಲ
ಬರಗಾಲ ಎಫೆಕ್ಟ್‌ : ಗಗನಕ್ಕೇರಿದ ತರಕಾರಿ ದರ : ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ ಯಾವುದೂ ಮುಟ್ಟುವಂಗಿಲ್ಲ..
April 25, 2024
2:39 PM
by: The Rural Mirror ಸುದ್ದಿಜಾಲ
ಕರಾವಳಿ ಜಿಲ್ಲೆಯ ಕೃಷಿ ಕ್ಷೇತ್ರದ ಕಡೆಗೆ ಗಮನ | ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಯತ್ನ | ಮಂಗಳೂರು ಬಿಜೆಪಿ ಅಭ್ಯರ್ಥಿ ಭರವಸೆ |
April 25, 2024
2:00 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror