ಹಿಂದೂ ಜನಜಾಗೃತಿ ಸಮಿತಿಯ ದ್ವಿದಶಕ ವರ್ಧಂತ್ಯೋತ್ಸವದ ಪ್ರಯುಕ್ತ ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನ. ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನದ ನಿಮಿತ್ತ ಪುತ್ತೂರಿನ ಶಾರದಾ ಭಜನಾ ಮಂದಿರ ಶನಿವಾರದಂದು ಪ್ರವಚನ ನಡೆಯಿತು.
ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಚೇತನ್ ರಾಜಹಂಸ ಮಾತನಾಡಿ ಸಮಾಜದಲ್ಲಿ ಇಂದು ಭ್ರಷ್ಟಾಚಾರ, ಮತಾಂತರ, ಲವ್ ಜಿಹಾದ್,ಗೋಹತ್ಯೆ ಮುಂತಾದವುಗಳು ತಾಂಡವವಾಡುತ್ತಿದೆ. ಇದಕ್ಕೆ ಕಾನೂನಿನಲ್ಲಿ ತಡೆಹಿಡಿಯುವ ಅವಕಾಶವಿದ್ದರೂ ವ್ಯವಸ್ಥೆ ಸರಿಯಿಲ್ಲದ ಕಾರಣ ಇದರ ತೊಂದರೆಯನ್ನು ಪ್ರತಿಯೊಬ್ಬರು ಅನುಭವಿಸುತ್ತಿದ್ದಾರೆ. ಕಾನೂನಿನ ಮುಖಾಂತರ ಹೋರಾಟ ಮಾಡಲು ಕೋರ್ಟಿನಲ್ಲಿ ಸುಮಾರು 3 ಕೋಟಿಯಷ್ಟು ಕೇಸ್ ಗಳು (ಅರ್ಜಿಗಳು) ಇತ್ಯರ್ಥ ಆಗದೆ ಬಾಕಿ ಉಳಿದಿದೆ. ಇದರಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗಲೂ ಸಾಧ್ಯವಿದೆಯೇ? ಈ ಎಲ್ಲಾ ಸಮಸ್ಯೆಗಳಿಗೆ ಪ್ರತಿಯೊಬ್ಬ ಹಿಂದೂಗಳಲ್ಲಿ ಹಿಂದೂರಾಷ್ಟ್ರ ಸ್ಥಾಪನೆಯ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಇದಕ್ಕಾಗಿ ಧರ್ಮಾದಿಷ್ಠಿತ ಹಿಂದೂರಾಷ್ಟ್ರ ಸ್ಥಾಪನೆಯೊಂದೇ ಗುರಿ ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್ ಗೌಡ ಮಾತನಾಡಿ, ಹೇಗೆ ಸೂರ್ಯೋದಯ ಆಗುವಾಗ ಕತ್ತಲೆ ತನ್ನಷ್ಟಕ್ಕೆ ದೂರವಾಗುತ್ತದೆಯೋ ಅದೇ ರೀತಿ ಹಿಂದೂರಾಷ್ಟ್ರ ಸ್ಥಾಪನೆಯಾದರೆ ತನ್ನಷ್ಟಕ್ಕೇ ಭ್ರಷ್ಟಾಚಾರ, ಲವ್ ಜಿಹಾದ್, ಮತಾಂತರ, ಗೋಹತ್ಯೆ ಇದು ನಿಲ್ಲಲಿಕ್ಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ “ಹಿಂದೂ ರಾಷ್ಟ್ರ” ಸ್ಥಾಪನೆಯ ಪ್ರತಿಜ್ಞೆಯನ್ನು ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಚಂದ್ರ ಮೊಗೇರ ಮತ್ತು ಧರ್ಮಪ್ರೆಮಿಗಳಾದ ದಿನೇಶ್ ಜೈನ್, ನವೀನ್ ಕುಲಾಲ್, ಹರಿಪ್ರಸಾದ್ ಶೆಟ್ಟಿ, ಕರುಣಾಕರ ಪುಣಚ, ಅಶೋಕ ಶಾಂತಡ್ಕ ಮತ್ತಿತರರು ಉಪಸ್ತಿತರಿದ್ದರು.
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…