ಪರಿಸರದಲ್ಲಿ ಜೇನುಹುಳಗಳ ಪಾತ್ರ ಬಹುಮುಖ್ಯವಾಗಿದೆ.ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳಲ್ಲಿಯೂ ಜೇನುನೊಣಗಳ ಬಗ್ಗೆ ಪವಿತ್ರ ವಾಕ್ಯಗಳು ಅನೇಕ ವರ್ಷಗಳಿಂದ ಇದೆ. ಅಂದರೆ ಶತಮಾನಗಳಿಂದಲೂ ಮಾನವ ಸಮಾಜಗಳಿಗೆ ಅವುಗಳ ಮಹತ್ವವನ್ನು ಎತ್ತಿ ತೋರಿಸುತ್ತವೆ. ಅನೇಕ ಸಸ್ಯಗಳ ಅಭಿವೃದ್ಧಿಗೆ ಮಹತ್ವದ ಪಾತ್ರ ನೀಡುವ, ಪರಿಸರದ ಮಹತ್ವದ ಕೊಡುಗೆಯಾಗಿರುವ ಜೇನು ಕುಟುಂಬವೇ ಈಗ ಕಡಿಮೆಯಾಗುತ್ತಿದೆ. ವಿಶ್ವದಾದ್ಯಂತ ಜೇನು ಕುಟುಂಬದ ಬಗ್ಗೆ, ಜೇನು ಹುಳಗಳ ಬಗ್ಗೆ ಗಂಭೀರವಾದ ಚಿಂತನೆ ನಡೆಯುತ್ತಿದೆ. ಭವಿಷ್ಯದಲ್ಲಿ ಕೃಷಿಯ ಇಳುವರಿಯ ಬಗ್ಗೆ, ಆಹಾರ ಭದ್ರತೆಯ ಮೇಲೂ ಪರಿಣಾಮ ಬೀರುವ ಬಗ್ಗೆಯೂ ಆತಂಕ ಎದುರಾಗಿದೆ. ವಿಶ್ವದ ಹೂಬಿಡುವ ಸಸ್ಯಗಳಲ್ಲಿ ಮುಕ್ಕಾಲು ಭಾಗ ಮತ್ತು ವಿಶ್ವದ ಆಹಾರ ಬೆಳೆಗಳಲ್ಲಿ ಸುಮಾರು 35 ಶೇಕಡಾ ಸಂತಾನೋತ್ಪತ್ತಿ ಮಾಡಲು ಜೇನುನೊಣಗಳು ಕಾರಣವಾಗಿದೆ. ನಮ್ಮ ಪರಿಸರ ವ್ಯವಸ್ಥೆಯಲ್ಲಿ ಜೇನುನೊಣಗಳೇ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.ಈ ಕಾರಣದಿಂದ ಜೇನು ಕುಟುಂಬ, ಜೇನು ಹುಳಗಳ ರಕ್ಷಣೆಯ ಬಗ್ಗೆ ಅಭಿಯಾನ ಆರಂಭವಾಗುತ್ತಿದೆ. ……..ಮುಂದೆ ಓದಿ…..
ಈಚೆಗೆ ಎಲ್ಲೆಡೆಯೂ ಕಾಡುಜೇನು ಕಡಿಮೆಯಾಗುತ್ತಿದೆ, ಕಾಡಿನಲ್ಲಿ ಜೇನುಗಳ ಕುಟುಂಬಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ತಾಪಮಾನದ ಆತಂಕದ ನಡುವೆ ಫಲವಸ್ತುಗಳು ಕೊರತೆ, ಕೃಷಿಯಲ್ಲಿ ಇಳುವರಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಆರಂಭವಾಗಿದೆ. ಈ ನಡುವೆ ಸಹಜವಾಗಿ ಆಗಬೇಕಾದ ಪರಾಗಸ್ಪರ್ಶ ಮತ್ತು ಕೃಷಿಯಲ್ಲಿ ಇಳುವರಿ ಕೊರತೆ ಇದರಲ್ಲಿ ಜೇನುನೊಣಗಳ ಪಾತ್ರ ಬಹುಮುಖ್ಯವಾಗಿ ಕಾಡಲು ಆರಂಭವಾಗಿದೆ. ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಕಾರ, ಅವನತಿಯ ಇತಿಹಾಸದಲ್ಲಿ ಹಾದಿಯಲ್ಲಿ ಜೇನುನೊಣಗಳು ಇವೆ. ಜೇನುನೊಣಗಳು ಕಾಡು ಹೂವುಗಳು ಮತ್ತು ಮರಗಳನ್ನು ಮಾತ್ರವಲ್ಲದೆ ಹಲವಾರು ಆಹಾರ ಬೆಳೆಗಳನ್ನು ಪರಾಗಸ್ಪರ್ಶ ಮಾಡುತ್ತವೆ. ವಿಶ್ವದ ಪ್ರಮುಖವಾದ 107 ಬೆಳೆಗಳಲ್ಲಿ ಸುಮಾರು 70% ಗೆ ಬೆಳೆಗಳು ಜೇನುನೊಣಗಳಂತಹ ಪರಾಗಸ್ಪರ್ಶ ಕ್ರಿಯೆಗಳು ಅತ್ಯಗತ್ಯವಾಗಿದೆ , ಇದು ಹಣ್ಣುಗಳು, ತರಕಾರಿಗಳು ಮತ್ತು ಬೀಜಗಳು ಸೇರಿದಂತೆ ಜಾಗತಿಕ ಆಹಾರ ಪೂರೈಕೆಯ ಸರಿಸುಮಾರು ಮೂರನೇ ಒಂದು ಭಾಗದ ಪೂರೈಕೆಯೂ ಹೌದು. ಈಗ ಪರಾಗಸ್ಪರ್ಶದ ಕೊರತೆಯಿಂದ ಫಲಗಳೂ ಕಡಿಮೆಯಾಗಿ ಮುಂದೆ ಕೃಷಿ ವಸ್ತುಗಳ ಬೆಲೆಗಳು ಸೇರಿದಂತೆ ಎಲ್ಲಾ ಬೆಳೆಗಳ ಬೆಲೆ ಏರಿಕೆಗೂ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದೆ.
ಪ್ರಪಂಚದ ಎಲ್ಲಾ ಕಡೆಯೂ ಪರಿಸರದಲ್ಲಿ ಇರಬೇಕಾದ, ಇರುವ ಒಂದು ಪ್ರಮುಖವಾದ ಪರಿಸರದ ಕೊಡುಗೆ ಜೇನುನೊಣ.ಕಳೆದ ಸುಮಾರು 100 ಮಿಲಿಯನ್ ವರ್ಷಗಳಿಂದಲೂ ವಿಕಾಸವಾಗಿರುವುದು ಜೇನುನೊಣಗಳಂತಹ ಪರಿಪೂರ್ಣ ಪರಾಗಸ್ಪರ್ಶದ ಕಾರಣದಿಂದಲೇ. ಸಸ್ಯಗಳೊಂದಿಗಿನ ಅವುಗಳ ಸಂಬಂಧವು ಅವು ಯಾವ ಹೂವುಗಳನ್ನು ಮುತ್ತಬೇಕು, ಯಾವಾಗ ಮುತ್ತಬೇಕು, ಏಕೆ ಮುತ್ತಬೇಕು ಎನ್ನುವುದನ್ನು ಪರಿಸರವೇ ಅವುಗಳಿಗೆ ಹೇಳಿಕೊಡುತ್ತವೆ. ಆದರೆ ಇಡೀ ಪ್ರಪಚಂದಲ್ಲಿ ಇಂದು ಜೇನುನೊಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಈ ಕಾರಣದಿಂದ ಅವು ಆಹಾರ ಭದ್ರತೆ ಮತ್ತು ಜೀವವೈವಿಧ್ಯದ ಮೇಲೆ ಗಂಭೀರ ಪರಿಣಾಮವನ್ನು ನೀಡುತ್ತಿವೆ. ಪರಾಗಸ್ಪರ್ಶದಲ್ಲೂ ಕುಸಿತವಾಗುತ್ತಿದೆ, ಹೀಗಾಗಿ ಚಿಂತನೆಗಳು ಆರಂಭವಾಗಿದೆ. ಆರೋಗ್ಯಕರ ಜೇನುನೊಣಗಳ ಸಂಖ್ಯೆಯು ಸಮತೋಲಿತ ಪರಿಸರವನ್ನು ಸೂಚಿಸುತ್ತದೆ. ಅವುಗಳ ಕುಸಿತವು ಕೀಟನಾಶಕಗಳ ಅತಿಯಾದ ಬಳಕೆಯ ಸಮಸ್ಯೆಗಳನ್ನು ಸೂಚಿಸುತ್ತದೆ. ಪರಿಸರ ವಿಜ್ಞಾನವನ್ನೂ ಮೀರಿ, ಜೇನುನೊಣಗಳು ಕೃಷಿಗೆ, ಕೃಷಿ ಬೆಳವಣಿಗೆಗೆ ಪೂರಕ. ಅವುಗಳ ಪರಾಗಸ್ಪರ್ಶವನ್ನು ಆರ್ಥಿಕವಾಗಿ ಗಮನಿಸಿದರೆ ವಿಶ್ವದಾದ್ಯಂತ ಅದೆಷ್ಟೋ ಡಾಲರ್ ಮೌಲ್ಯ…! .
ಅಮೆರಿಕದಲ್ಲಿ, 2025 ರಲ್ಲಿ ಜೇನುನೊಣಗಳ ಕುಟುಂಬ ದಾಖಲೆ ಪ್ರಮಾಣದಲ್ಲಿ ನಷ್ಟವಾಗಿದೆ. ಹೀಗಾಗಿ ಈ ಬಾರಿ ದಾಖಲೆಯ ನಷ್ಟವನ್ನು ಎದುರಿಸ ಲಿವೆ, ವಿಜ್ಞಾನಿಗಳು ಕೃಷಿ ಉತ್ಪಾದನೆಯ ಮೇಲೆ ಇದರ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ. ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ ಕೀಟಶಾಸ್ತ್ರಜ್ಞರು ವಾರ್ಷಿಕವಾಗಿ ಜೇನುನೊಣಗಳ ನಷ್ಟವು ಈ ಬಾರಿ 60 ರಿಂದ 70% ತಲುಪಬಹುದು ಎಂದು ಹೇಳಿದ್ದಾರೆ. ಈ ಹಿಂದೆ ಅಷ್ಟೊಂದು ಪ್ರಮಾಣದಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ. ಈ ವರ್ಷ ಏಕೆ ನಷ್ಟವಾಗಿದೆ ಎಂದು ನಿಖರವಾಗಿ ತಿಳಿಯಲು ಪ್ರಯತ್ನ ಆರಂಭವಾಗಿದೆ.ಪ್ರಮುಖವಾಗಿ ಪರಾಗಸ್ಪರ್ಶದ ವೇಳೆ ವಿಷಮಯವಾಗಿರುವ ಹೂವುಗಳು, ಪೌಷ್ಠಿಕಾಂಶದ ಕೊರತೆಗಳು, ಹುಳಗಳ ಬಾಧೆ, ವೈರಲ್ ರೋಗಗಳು ಮತ್ತು ಪರಾಗಸ್ಪರ್ಶ ವೇಳೆ ಕೀಟನಾಶಕಗಳಿಗೆ ಜೇನುನೊಣ ಒಡ್ಡಿಕೊಳ್ಳುವುದು ಪ್ರಮುಖವಾದ ಕಾರಣ ಎಂದು ಅಂದಾಜಿಸಿದ್ದಾರೆ.
ನಮ್ಮ ಪರಿಸರ ವ್ಯವಸ್ಥೆಯಲ್ಲಿ ಜೇನುನೊಣಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ಮಾನವರಿಗೆ ಬೇಕಾದ ಆಹಾರ ಪದಾರ್ಥಗಳು, ಫಸಲಿನ ಪರಾಗಸ್ಪರ್ಶ ಮಾಡುತ್ತವೆ ಮತ್ತು ಆಹಾರವನ್ನು ಒದಗಿಸುತ್ತವೆ. ಅವುಗಳ ಅವನತಿ ಆಹಾರ ಭದ್ರತೆ ಮತ್ತು ಜೀವವೈವಿಧ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಜೇನುನೊಣಗಳು ಮಾನವ, ಪ್ರಾಣಿ, ಸಸ್ಯ ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯದ ನಡುವಿನ ನಿರ್ಣಾಯಕ ಕೊಂಡಿಯಾಗಿದೆ.ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ಬೀಜಗಳಂತಹ ಬೆಳೆಗಳಿಗೆ ಅತ್ಯುತ್ತಮ ಇಳುವರಿ ಮತ್ತು ಗುಣಮಟ್ಟಕ್ಕಾಗಿ ಜೇನುನೊಣಗಳು ಬೇಕಾಗುತ್ತವೆ ಕೂಡಾ.
ಅನೇಕ ದೇಶಗಳಲ್ಲಿ, ಈ ನೈಸರ್ಗಿಕ ಪರಾಗಸ್ಪರ್ಶಕಗಳು ಕೀಟನಾಶಕಗಳ ಬಳಕೆಯಿಂದ ನಾಶವಾಗುತ್ತಿವೆ, ಹವಾಮಾನ ಬದಲಾವಣೆ ಮತ್ತು ರೋಗಗಳಿಂದ ಸಮಸ್ಯೆ ಎದುರಿಸುತ್ತವೆ. ಇದರರ್ಥ ಕಡಿಮೆ ಪರಾಗಸ್ಪರ್ಶವಾಗಿ ಕೃಷಿ ಇಳುವರಿ ಮೇಲೆ ಪರಿಣಾಮ ಬೀರುತ್ತಿದೆ. ಜೇನುನೊಣಗಳ ಸಂಖ್ಯೆಯ ನಷ್ಟವನ್ನು ಸರಿದೂಗಿಸಲು ರಾಸಾಯನಿಕ ಪರಾಗಸ್ಪರ್ಶ ಅಥವಾ ಹೆಚ್ಚಿನ ಕೀಟನಾಶಕಗಳ ಬಳಸುವಂತಹ ಪರ್ಯಾಯ ಆಯ್ಕೆಗಳು ಜೀವವೈವಿಧ್ಯತೆ ಮತ್ತು ಮಣ್ಣಿನ ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಪರಿಸರ ಇನ್ನಷ್ಟು ಹಾನಿಯಾಗುತ್ತಿದೆ.
ಜೇನುನೊಣಗಳು ಪರಿಸರ ವ್ಯವಸ್ಥೆಯ ಸಸ್ಯಗಳ ಸಂತಾನೋತ್ಪತ್ತಿಗೆ ಕೊಡುಗೆ ನೀಡುತ್ತವೆ, ಪಕ್ಷಿಗಳು ಮತ್ತು ಕೀಟಗಳು ಸೇರಿದಂತೆ ಇತರ ಪ್ರಭೇದಗಳಿಗೆ ಆಹಾರವನ್ನು ಒದಗಿಸುತ್ತವೆ. ಕೀಟನಾಶಕಗಳ ವ್ಯಾಪಕ ಬಳಕೆಯು ಜೇನುನೊಣಗಳ ಮೇಲೆ ಮತ್ತು ಅವುಗಳ ಸಂತಾನೋತ್ಪತ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ಅಧ್ಯಯನ ಹೇಳಿದೆ. ಜೇನುನೊಣಗಳಿಲ್ಲದೆ, ಜೀವವೈವಿಧ್ಯತೆ ಮತ್ತು ಕೃಷಿ ಉತ್ಪಾದಕತೆಯನ್ನು ಬೆಂಬಲಿಸುವ ಪರಾಗಸ್ಪರ್ಶ ಜಾಲವು ಅಪಾಯದಲ್ಲಿದೆ, ಇದು ಇಡೀ ಪರಿಸರ ವ್ಯವಸ್ಥೆಯ ಸ್ಥಿರತೆಗೂ ಅಪಾಯವನ್ನುಂಟುಮಾಡುತ್ತದೆ. ಜೇನುನೊಣಗಳ ಅವನತಿಯು ಸಸ್ಯ ವೈವಿಧ್ಯತೆಯನ್ನು ಕಡಿಮೆ ಮಾಡಲು ಕಾರಣವಾಗಬಹುದು, ಇದು ಸಂಪೂರ್ಣ ಪರಿಸರ ವ್ಯವಸ್ಥೆಗಳು ಮತ್ತು ಪರಿಸರ ಬದಲಾವಣೆಗಳಿಗೆ ಕಾರಣವಾಗುತ್ತಿದೆ, ಹೀಗಾಗಿ ಜೇನುಕುಟುಂಬ ರಕ್ಷಣೆಗೆ ಅಭಿಯಾನಗಳು ಆರಂಭವಾಗಲೇಬೇಕಿದೆ. ಪರಿಸರದ ಅವಿಭಾಜ್ಯ ಅಂಗ, ಕೃಷಿಕರ ಮಿತ್ರ, ನಮ್ಮೆಲ್ಲರ ಗೆಳೆಯ ಜೇನು ನೊಣವನ್ನು, ಜೇನು ಕುಟುಂಬವನ್ನು ಉಳಿಸಿ ಬೆಳೆಸೋಣ.
ಜೇನುನೊಣ-ಕುಟುಂಬ ರಕ್ಷಣೆಗೆ ಏನೇನು ಮಾಡಬಹುದು..? :
ಶಿವಮೊಗ್ಗದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಸಂದರ್ಭದಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ…
ಕಳೆದ ಎರಡು ದಿನಗಳಿಂದ ದಾವಣಗೆರೆ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ತೋಟಗಾರಿಕೆ…
ಮಲೆನಾಡು-ಕರಾವಳಿ ಸೇರಿದಂತೆ ರಾಜ್ಯದ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹಲಸಿನ ಕಾಯಿ ದೋಸೆ ಹಿಟ್ಟಿನ ಪಡ್ಡು ಮಾಡುವ ವಿಧಾನ : ದೋಸೆ ಹಿಟ್ಟು,…
19.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…