ಸುಳ್ಯದಲ್ಲೊಂದು ಗುಡಿಸಲು ಮನೆ | ಪುತ್ತಿಲ ಪರಿವಾರದ ಸುಳ್ಯ ಘಟಕದಿಂದ ಮನೆ ಕನಸಿಗೆ ನೆರವು | ಸಹೃದಯಿಗಳು ನೆರವು ನೀಡಿ |

January 3, 2024
10:16 PM
ಚಿಕ್ಕದಾದ ಗುಡಿಸಲು ಮನೆಯಲ್ಲಿರುವ ಮಹಿಳೆಯೊಬ್ಬರ ಮನೆಯ ಕನಸಿಗೆ ನೆರವಾಗಿ...

ಸುಳ್ಯ ತಾಲೂಕಿನ ಕಸಬಾ ಗ್ರಾಮದ ಶಾಂತಿನಗರದಲ್ಲಿ ತೀರಾ ಚಿಕ್ಕದಾದ ಗುಡಿಸಲು ಮನೆಯಲ್ಲಿರುವ ಮಹಿಳೆಯೊಬ್ಬರ ಮನೆಯ ಕನಸಿಗೆ ಪುತ್ತಿಲ ಪರಿವಾರದ ಸುಳ್ಯ ಘಟಕವು ಈಗ ನೆರವಿಗೆ ಇಳಿದಿದೆ. ಇವರ ಜೊತೆ ಸಹೃದಯಿಗಳು ಕೈಜೋಡಿಸಬಹುದು.  ಈ ಮಹಿಳೆ ಸುಮತಿ ಅವರ ಪರಿಸ್ಥಿತಿ ತೀರಾ ಸಂಕಷ್ಟದಿಂದ ಕೂಡಿದೆ.

ಮಹಿಳೆಯ ಪತಿ ಗಣೇಶ ಅಸೌಖ್ಯದ ಕಾರಣದಿಂದಾಗಿ ಇಹಲೋಕ ತ್ಯಜಿಸಿ ಹಲವು ವರ್ಷಗಳಾಗಿವೆ. ಮೂವರು ಮಕ್ಕಳೊಂದಿಗೆ ಮಹಿಳೆಯ ವಾಸ. ಆದರೆ ಮೂರು ಮಕ್ಕಳಲ್ಲಿ ಒಬ್ಬಾತನಿಗೆ ದೃಷ್ಟಿ ದೋಷವಿದ್ದು ಇನ್ನೊಬ್ಬ ಕೂಲಿ ಕೆಲಸ ಮಾಡುತ್ತಿದ್ದಾನೆ. ಮತ್ತೊಬ್ಬ  ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಕೂಲಿ ಮಾಡಿ ಬಂದ ಹಣ ಜೀವನ ನಿರ್ವಹಣೆಗೇ ಸಾಲುತ್ತಿಲ್ಲ. ಹಾಗಿದ್ದರೂ ಪುಟ್ಟ ಮನೆಯೊಂದನ್ನು ಕಟ್ಟುವ ಹಂಬಲ ಸುಮತಿ ಅವರದಾಗಿತ್ತು. ಪುತ್ತಿಲ ಪರಿವಾರದ ಸುಳ್ಯ ಘಟಕದ ಸಹೃದಯಿಗಳು ಸುಮತಿ ಅವರ ಮನೆಯ ಪರಿಸ್ಥಿತಿ ಗಮನಿಸಿ ಮನೆ ಕಟ್ಟುವ ಕನಸಿಗೆ ಆಸರೆಯಾದರು. ಇದರ ಜೊತೆಗೆ ಸ್ಥಳೀಯಾಡಳಿತ , ಪ್ರತಿನಿಧಿಗಳನ್ನೂ ಮಾತನಾಡಿಸಿದರು. ಈಗ ಮಹಿಳೆ ಸುಮತಿ ಅವರ  ಪುಟ್ಟ ಮನೆ ಕಟ್ಟುವ ಕನಸಿಗೆ ಕಲ್ಲು, ಸಿಮೆಂಟು, ಹೊಯಿಗೆ, ಕಬ್ಬಿಣ…, ಹೀಗೆ  ಸಹಾಯ ಮಾಡಿದರೆ ಮನೆ ಸುಲಭದಲ್ಲಿ ನಿರ್ಮಾಣವಾದೀತು. ಅದಕ್ಕಾಗಿ ನೆರವು ಅಗತ್ಯ ಇದೆ.

The Sullia Unit of Puttila Parivar has now come to help a woman living in a very small hut in Shantinagar, Kasaba village of Sullia taluk. Friends can join hands with them. Sumathi’s situation is very difficult.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ
August 10, 2026
3:32 PM
by: ಸಾಯಿಶೇಖರ್ ಕರಿಕಳ
ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ
August 10, 2026
6:20 AM
by: ದ ರೂರಲ್ ಮಿರರ್.ಕಾಂ
ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು
August 10, 2026
6:05 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ
August 9, 2026
12:36 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror