Advertisement
ಸುದ್ದಿಗಳು

ಯಾರಿಗಾಗಿ ಅಡಿಕೆ ಬೆಳೆ ಉಳಿಯಬೇಕು…? | ಅಡಿಕೆ ಅಥವಾ ಅಡಿಕೆ ಬೆಳೆಗಾರರ ರಕ್ಷಣೆ ಮಾಡುವರು ಯಾರು…?

Share

ಅಡಿಕೆ ಬೆಳೆಯುವ ಕ್ಷೇತ್ರದಲ್ಲಿ ಇಂದು ಕೇವಲ ಇಪ್ಪತ್ತು ಪ್ರತಿಶತ ಮಾತ್ರ ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಕ್ಷೇತ್ರದ ಅಡಿಕೆ ಬೆಳೆ ಇರುವುದು.  ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಅತಿ ಹೆಚ್ಚು ನಿಸರ್ಗದ ಜೊತೆಗೆ ಹೋರಾಡಿ ಬೆಳೆ ಪಡಿಯಬೇಕಾಗಿರುತ್ತದೆ. ಚಾನಲ್ ಹಾಗೂ ಬೋರ್ ವೆಲ್ ಅಡಿಕೆ ಬೆಳೆಗಾರರಿಗೆ ಹೋಲಿಸಿದರೆ ಸಾಂಪ್ರದಾಯಿಕ ಕ್ಷೇತ್ರದ ಅಡಿಕೆ ಬೆಳೆಗಾರರಿಗೆ ಇಳುವರಿ ತೀರಾ ಕಡಿಮೆ ಮತ್ತು ಅಡಿಕೆ ಉತ್ಪನ್ನ ಕ್ಕೆ ಖರ್ಚು ಅತಿ ಹೆಚ್ಚು…!! ಎಲೆಚುಕ್ಕಿ ಹಳದಿಎಲೆ , ಅಡಿಕೆ ಕೊಳೆ ರೋಗ ಇತರೆ ಗಂಭೀರ ಸಮಸ್ಯೆ ಗಳೊಂದಿಗೆ ಸಾಂಪ್ರದಾಯಿಕ ಕ್ಷೇತ್ರದ ಅಡಿಕೆ ಬೆಳೆಗಾರ ಹೋರಾಡುತ್ತಿದ್ದಾನೆ…!!!

Advertisement
Advertisement
Advertisement
Advertisement

ಇದೆಲ್ಲಾ ಹೋರಾಟದ ಜೊತೆಗೆ ಅಡಿಕೆ ಕ್ಯಾನ್ಸರ್ ಕಾರಕ, ವಿದೇಶಿ ಅಕ್ರಮ ಆಮದು ಮತ್ತು ಅಡಿಕೆ ನಿಷೇಧ ಮಾಡಿ ಎಂಬ ಸವಾಲಿಗೂ ಇದೇ ಸಾಂಪ್ರದಾಯಿಕ ಕ್ಷೇತ್ರದ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರು ಮತ್ತು ಬೆಳೆಗಾರ ಸಹಕಾರಿ ಸಂಸ್ಥೆಗಳು ಮೇಲಿಂದ ಮೇಲೆ ಸಂಭಂದಿಸಿದ ಇಲಾಖೆಗಳು, ಸಚಿವರುಗಳ ಬೇಟಿ ಮತ್ತು ನ್ಯಾಯಾಲಯದಲ್ಲಿ ಅಡಿಕೆ ಪರ ವಾದ ಇತರೆ ವಿಚಾರದಲ್ಲಿ ಹೋರಾಟ ಮಾಡುತ್ತಿದೆ. ನಿಜಕ್ಕೂ ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರ ಕ್ಷೇತ್ರದಲ್ಲಿ ದಿನ ದಿನಕ್ಕೂ ಅಡಿಕೆ ಯ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆಯಾ…?

Advertisement

ಯಾರಿಗಾಗಿ ಅಡಿಕೆ ಬೆಳೆ ಉಳಿಯಬೇಕು…? : ಮೂರು ಮತ್ತು ನಾಲ್ಕನೇ ತಲೆಮಾರಿನ ಪೀಳಿಗೆಗೆ ಊರಲ್ಲಿ ನಾಮಕಾವಸ್ಥೆ ಅಡಿಕೆ ತೋಟ ಇದ್ದರಾಯಿತು. ಮೂಟೆಗಟ್ಟಲೇ ಇಳುವರಿ ಅವರಿಗೆ ಬೇಕಿಲ್ಲ. ಕನಿಷ್ಠ ವೃದ್ದ ಅಪ್ಪ ಅಮ್ಮ ಊರಲ್ಲೇ ಉಳಿಯಲಿ ಎಂದು ಅಡಿಕೆ ಬೆಳೆ ಉಳಿಯಲಿ ಎನ್ನಬಹುದೇನೋ…? ಪಟ್ಟಣದ ದೊಡ್ಡ ದೊಡ್ಡ ಐಟಿ ಬಿಟಿ ಇತರೆ ದೊಡ್ಡ ಸಂಬಳದ ನೌಕರಸ್ಥ ರಾಗಿರುವ ಅಡಿಕೆ ಬೆಳೆಗಾರರ ಮಕ್ಕಳಿಗೆ ಅದೆಷ್ಟೇ ಅಡಿಕೆ ಉತ್ಪತ್ತಿ ಬಂದರೂ, ಬೆಲೆ ಹೆಚ್ಚಾದರೂ ಅಡಿಕೆ ಕೃಷಿ ಮಾಡಲು ಹಳ್ಳಿಗೆ ಬಂದು ಅಪ್ಪ ಅಮ್ಮ ರ ಅಡಿಕೆ ಕೃಷಿ ಮುಂದುವರಿಸೋಲ್ಲ…!! ಮಲೆನಾಡು ಕರಾವಳಿಯ ಮದ್ಯಮ ವರ್ಗ ಮತ್ತು ದೊಡ್ಡ ಬೆಳೆಗಾರರ ಬಹುತೇಕ ಮನೆಯಲ್ಲಿ ಐವತ್ತು ದಾಟಿದವರೇ ಇರುವುದು‌. ಇವರು ತೋಟಕ್ಕೆ ಹೋದರೆ ಎಲೆಚುಕ್ಕಿ ಬಂದು ಹಣ್ಣಾದ ಅಡಿಕೆ ಸೋಗೆ ಗಳು.. ಮನೆಗೆ ಬಂದು ಇವರು ಕನ್ನಡಿ ನೋಡಿಕೊಂಡರೆ ಈ ಬವಣೆಗಳ ವಿರುದ್ಧ ಹೋರಾಡಿ ಹಣ್ಣಾದ ಇವರ ತಲೆಗೂದಲು‌.

ಹಾಗಾಗಿ, ಸಾಂಪ್ರದಾಯಿಕ ಅಡಿಕೆ ಬೆಳೆಗಾರ ಅಡಿಕೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ ಅಥವಾ ಎಷ್ಟು ತಲೆಕೆಡಿಸಿಕೊಳ್ಳಬೇಕು..? ಎಲೆಚುಕ್ಕಿ ಯಂತಹ ಸಮಸ್ಯೆ ಯನ್ನು ಅದೆಂಥದೇ ಔಷಧ ಸಿಂಪಡಣೆ ಮಾಡಿದರೂ ಮೇಲಿಂದ ಮೇಲೆ ಬರುವ ಸೈಕ್ಲೋನ್ ಮಳೆ ಆ ಪ್ರಯತ್ನ ವನ್ನು ಧೂಳಿಪಟ ಮಾಡುತ್ತದೆ. ಇನ್ನ ಅಡಿಕೆ ಆಮದು ಕಳ್ಳಸಾಗಣೆ ಬಗ್ಗೆ ರೈತ ಏನನ್ನೂ ಮಾಡಲಾರ.ಸಾಮಾನ್ಯರ ದನಿಗೆಲ್ಲಿದೆ ಮೈಕು…!?? ಹಾಗಾಗಿ ರೈತ ಅಸಾಹಾಯಕ..!!

Advertisement

ಕೇವಲ ಕಾಲು ಭಾಗಕ್ಕಿಂತ ಕಡಿಮೆ ಇರುವ ಸಾಂಪ್ರದಾಯಿಕ ಕ್ಷೇತ್ರದ ಅಡಿಕೆ ಬೆಳೆಗಾರರು ಈ ಅಡಿಕೆ ಕ್ಯಾನ್ಸರ್ ಕಾರಕ, ಅಡಿಕೆ ನಿಷೇಧ ದ ವಿರುದ್ಧವಾಗಿ ಯಾಕೆ ಹೋರಾಟ ಮಾಡಬೇಕು…? ಅಡಿಕೆ ಕಲಬೆರಕೆ ಮತ್ತು ಅಡಿಕೆ ಗೆ ಅಪಾಯಕಾರಿ ರಾಸಾಯನಿಕ ಬಣ್ಣದ ಮೂಲದ ತಾಯಿಬೇರು ಇರುವುದೇ ಬಯಲು ಸೀಮೆಯ ” ಫಲಗುತ್ತಿಗೆ “” ವ್ಯವಸ್ಥೆ ಯಲ್ಲಿ…. !.  ಈ ಯಾವುದೇ ಅಡಿಕೆ ಸಂಬಂಧಿಸಿದ ಹೋರಾಟದಲ್ಲಿ ಮಲೆನಾಡು ಮತ್ತು ಕರಾವಳಿಯ ಅಡಿಕೆ ಬೆಳೆಗಾರರ ಕ್ಷೇತ್ರದ ಅಡಿಕೆ ಮಾರಾಟ ಸಹಕಾರಿ ಸಂಘಗಳು ಮತ್ತು ಮಲೆನಾಡು ಕರಾವಳಿಯ ಶಾಸಕರು ಮತ್ತು ಸಂಸದರ ಹೋರಾಟ ಮಾತ್ರ ಎದ್ದು ಕಾಣುತ್ತದೆ. ಈ ಅಡಿಕೆ ಸಮಸ್ಯೆ ಸಂಬಂಧಿಸಿದಂತೆ ಎಂಬತ್ತು ಭಾಗ ಅಡಿಕೆ ಇರುವ ಬಯಲು ಪ್ರದೇಶದ ಅಡಿಕೆ ಬೆಳೆಗಾರರ ಹೋರಾಟ ಎಲ್ಲಿ…? ಏನು ಮಾಡುತ್ತಿದ್ದಾರೆ… ? ಪ್ರಶ್ನೆ ನಮ್ಮಲ್ಲೇ ಉಳಿದಿದೆ…

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

10 hours ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

1 day ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

1 day ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

2 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

2 days ago

ಬೆಂಗಳೂರಲ್ಲಿ ದಾಖಲೆ ತಾಪಮಾನ | ಬೇಸಿಗೆಯಲ್ಲಿ ಈ ಬಾರಿ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ

ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…

2 days ago