ಸಹಕಾರಿ ಕ್ಷೇತ್ರಕ್ಕೂ ಬರಬಹುದಾ ಸಿಬಿಲ್..?‌ | ಹಾಗಿದ್ದರೆ ಸಿಬಿಲ್ ಅಂಕ ಹೆಚ್ಚಿಸುವುದು ಹೇಗಪ್ಪಾ…?

March 8, 2025
6:22 AM
ಸದ್ಯ ಬ್ಯಾಂಕಿಂಗ್ ಕ್ಷೇತ್ರದಲ್ಲಷ್ಟೇ ಸಿಬಿಲ್ ಮಾಹಿತಿ ಕೇಳಲಾಗ್ತಿದೆ.ಆದರೆ ಶೀಘ್ರವಾಗಿ‌ ಸಹಕಾರಿ ಕ್ಷೇತ್ರದಲ್ಲೂ ಸಿಬಿಲ್ ಅಂಕ ಪ್ರವೇಶಿಸುವ ಎಲ್ಲ ಸಾಧ್ಯತೆ ಇದೆ. ಸಿಬಿಲ್ ಅಂಕ ಚೆನ್ನಾಗಿರುವವರಿಗೆ ಕಡಿಮೆ ಬಡ್ಡಿದರ,ಕಳಪೆ ಇರುವವರಿಗೆ ಹೆಚ್ಚು ಬಡ್ಡಿದರ ಅಂತ ಮುಂದಿನ ಕಾಲದಲ್ಲಿ ಬಂದೇ ಬರ್ತದೆ.ಇಂತಹ ಬದಲಾವಣೆಗೆ ಸಿದ್ಧರಾಗಿರಬೇಕಾದ್ದು,ಹೊಂದಿಕೊಳ್ಳ ಬೇಕಾದ್ದು ಅನಿವಾರ್ಯವಾಗಲಿದೆ.

ಸಣ್ಣಪ್ಪ ಅಂದು ಬ್ಯಾಂಕಿಗೆ ಹೋಗಿದ್ದಾಗ ಅಲ್ಲಿ ದೊಡ್ಡಣ್ಣ ಕೂತಿದ್ದನ್ನು ಕಂಡ.ದೊಡ್ಡಣ್ಣ ಸಣ್ಣಪ್ಪನ ಊರಿನಾತ.ಜಮೀನ್ದಾರನೆಂದು ಪರಿಗಣಿಸಲ್ಪಟ್ಟಾತ.ಸಣ್ಣಪ್ಪನ ಅಭಿವೃದ್ಧಿ ಬಗ್ಗೆ ಗೌರವ ,ಅಭಿಮಾನ ಹೊಂದಿದ್ದ ಹಲವರಲ್ಲಿ ಓರ್ವ.ದೊಡ್ಡಣ್ಣನ ಮುಖದಲ್ಲಿ ಅಂದು ಚಿಂತೆ ತುಂಬಿದ್ದದ್ದು ಎದ್ದು ಕಾಣ್ತಾ ಇತ್ತು.………ಮುಂದೆ ಓದಿ……..

Advertisement
Advertisement

‌ ದೊಡ್ಡಣ್ಣ ಸಣ್ಣಪ್ಪನನ್ನು ಕರೆದು ಹೇಳಿದ.” ಬ್ಯಾಂಕಿನೊಂದಿಗಿನ ನನ್ನ ವ್ಯವಹಾರವೆಲ್ಲಾ ಸುಸ್ಥಿತಿಯಲ್ಲಿದೆ.ಒಂದಷ್ಟು ಸಾಲ ಇದೆ ಎಂಬುದೇನೋ ನಿಜ.ಆದರೆ ಎಂದೂ ಸುಸ್ತಿದಾರನಾಗಿಲ್ಲ.ಸಮಯಕ್ಕೆ ಸರಿಯಾಗಿ ಕಂತು ಕಟ್ತಾ ಇದ್ದೇನೆ.ಆದರೆ ಮ್ಯಾನೇಜರ್ ನನ್ನ ಸಿಬಿಲ್ ಅಂಕ ಕಡಿಮೆ ಇದೆ ಅಂತ ಹೇಳಿದರು.ಅದು ಹೇಗೆ ಹೆಚ್ಚು ಮಾಡುವುದು? ಗೊತ್ತಾಗ್ತಾ ಇಲ್ಲವಲ್ಲ.ನಿನ್ನ ಸಿಬಿಲ್ ಅಂಕ ಎಷ್ಟಿದೆ ಅಂತ ಗೊತ್ತಾ?” ಮ್ಯಾನೇಜರ್ ಸಣ್ಣಪ್ಪನ‌ ಸಿಬಿಲ್ ಅಂಕ ಚೆನ್ನಾಗಿದೆ ಅಂತ ಹೇಳಿದ್ದು ಸಣ್ಣಪ್ಪನಿಗೆ ನೆನಪಿತ್ತು.

ಈರ್ವರೂ ಜೊತೆಗೂಡಿ ಮ್ಯಾನೇಜರ್ ಬಳಿ ಹೋದರು.ಮ್ಯಾನೇಜರ್ ಈರ್ವರದ್ದೂ ವ್ಯವಹಾರದ ಪಟ್ಟಿ ತೆಗೆಯಲು ಸಿಬ್ವಂದಿಗಳ ಬಳಿ ಹೇಳಿ ದೊಡ್ಡಣ್ಣನಲ್ಲಿ ವಿಚಾರಿಸಿದರು..'” ಅಂದ ಹಾಗೆ ನಿಮ್ಮ ವ್ಯವಹಾರದ ಕ್ರಮ ಹೇಗೆ?”.

ದೊಡ್ಡಣ್ಣ ವಿವರಿಸಲು ತೊಡಗಿದ.’ ಸಣ್ಣಪ್ಪನ ಜಮೀನಿಗೆ ಹೋಲಿಸಿದರೆ ದೊಡ್ಡಣ್ಣನ ಜಮೀನು ತುಂಬ ದೊಡ್ಡದು.ಅದಕ್ಕೆ ತಕ್ಕಂತೆಯೇ ವ್ಯವಹಾರದ ಪ್ರಮಾಣವೂ ದೊಡ್ಡದೇ.ಎಲ್ಲ ಕೃಷಿಕರಿಗೆ ಇರುವಂತೆ ದೊಡ್ಡ ಮೊತ್ತದ ಎರಡು ಸಾಲವೂ ಇದೆ.ದೊಡ್ಡ ಮೊತ್ತದ ಕಂತೂ ಕಟ್ಟ ಬೇಕಾಗಿದೆ.
‌ಪ್ರತಿ ವಾರವೂ ಆ ವಾರದ ಖರ್ಚಿಗೆ ಎಷ್ಟು ಹಣ ಬೇಕೋ ಅಷ್ಟು ಕೃಷಿ ಉತ್ಪನ್ನ ಮಾರಾಟ ಮಾಡುವುದು.ವ್ಯಾಪಾರಿಗಳಿಂದ ನಗದು ರೂಪದಲ್ಲಿ ಅದರ ಮೌಲ್ಯ ಪಡೆದು ಖರ್ಚಿಗೆ ಬಳಸಿಕೊಳ್ಳುವುದು.ವರ್ಷದಲ್ಲಿ ಎರಡು ಬಾರಿ ಸಾಲದ ಕಂತು ತುಂಬಲಿಕ್ಕಾಗಿ ದೊಡ್ಡ ಮಟ್ಟದಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡ ಬೇಕಾಗುತ್ತದೆ.ಪಡೆದ ಹಣವನ್ನು ಬ್ಯಾಂಕಿಗೆ ಬಂದು ಸಾಲದ ಖಾತೆಗೆ ತುಂಬುವುದು.ಸಂಬಂಧಿತ ದಿನಾಂಕಗಳನ್ನು ಡೈರಿಯಲ್ಲಿ ಬರೆದು ಇರಿಸಿ ಕೊಂಡಿರುವುದರಿಂದ ಕಂತು ತುಂಬುವಲ್ಲಿ ಎಂದೂ ವಿಫಲನಾಗಿಲ್ಲ.’

ಅಷ್ಟಾದಾಗ ಈರ್ವರ ವ್ಯವಹಾರದ ವಿವರ ಮ್ಯಾನೇಜರರ ಮೇಜಿನ ಮೇಲಿತ್ತು.ಮ್ಯಾನೇಜರ್ ವಿವರಿಸ ತೊಡಗಿದರು.’ ದೊಡ್ಡಣ್ಣನವರ ಜಮೀನು,ಆದಾಯ ಎಷ್ಟೇ ಇರಲಿ .ಅವರು ಬ್ಯಾಂಕಿನ ಒಳಗಡೆಗೆ ಬರುವುದು ವರ್ಷದಲ್ಲಿ ಮೂರ್ನಾಲ್ಕು ಬಾರಿ ಮಾತ್ರ.ಇಡೀ ವರ್ಷದಲ್ಲಿ ಬ್ಯಾಂಕಿನೊಂದಿಗಿನ ಅವರ ವ್ಯವಹಾರ ಮೂರ್ನಾಲ್ಕು ಬಾರಿಯದ್ದು.ಬ್ಯಾಂಕಿನ ದಾಖಲೆಗಳಲ್ಲಿ ಅವರಿಗೆ ನಿಗದಿತ ಅಥವಾ ನಿಯಮಿತ ಆದಾಯ ಇದೆ ಎಂಬುದಕ್ಕೆ ಆಧಾರ ಇಲ್ಲ.ಆದರೆ ವರ್ಷದಲ್ಲಿ ಎರಡ್ಮೂರು ಬಾರಿ ಭಾರೀ ದೊಡ್ಡ ಮೊತ್ತದ ಆದಾಯ ಇರುವುದು ಕಾಣಿಸ್ತಾ ಇದೆ.ಸುಸ್ಥಿರ ವ್ಯವಹಾರ ಅಂತ ನಂಬುವುದು ಹೇಗೇ? ಆದ್ದರಿಂದ ಇವರೊಂದಿಗಿನ‌ ವ್ಯವಹಾರದಲ್ಲಿ ರಿಸ್ಕ್ ಕಂಡಾಬಟ್ಟೆ ಇದೆ ಅಂದ ಬ್ಯಾಂಕ್ ದಾಖಲೆ ಹೇಳ್ತಾ ಇದೆ.ಆ ಕಾರಣಕ್ಕಾಗಿ ಇವರ ಸಿಬಿಲ್ ಅಂಕ ಕಡಿಮೆ.
ಅದೇ ಸಮಯದಲ್ಲಿ ಸಣ್ಣಪ್ಪ ಹೆಚ್ಚೂ ಕಡಿಮೆ ಪ್ರತಿ ವಾರವೂ ಬ್ಯಾಂಕ್ ವ್ಯವಹಾರ ಮಾಡ್ತಾ ಇದ್ದಾನೆ.ಸಣ್ಣದೋ ,ದೊಡ್ಡದೋ ಹಣ ಬ್ಯಾಂಕಿಗೆ ಬರ್ತಾ ಇದೆ.ಅಂದರೆ ಬ್ಯಾಂಕ್ ದಾಖಲೆಗಳ ಪ್ರಕಾರ ಸಣ್ಣಪ್ಪನಿಗೆ ನಿಗದಿತ ,ಸುಸ್ಥಿರ ಆದಾಯ ಇದೆ.ಆದ್ದರಿಂದ ಸಣ್ಣಪ್ಪ ನಂಬಿಕೆಗೆ ಹೆಚ್ಚು ಅರ್ಹ.ಆ ಕಾರಣಕ್ಕೆ ಸಣ್ಣಪ್ಪನ ಸಿಬಿಲ್ ಅಂಕ ಹೆಚ್ಚು.’

Advertisement

ಈಗ ಸಣ್ಣಪ್ಪ ಹೇಳಿದ,’ ದೊಡ್ಡಣ್ಣ ಊರಿನಲ್ಲಿ ಪ್ರಾಮಾಣಿಕತೆಗೆ ಇನ್ನೊಂದು ಹೆಸರು.ವ್ಯವಹಾರ ಅತಿ ಶುದ್ಧವಾದ್ದು ಅಂತಲೇ ಲೆಕ್ಕ.ಯಾರಲ್ಲಿ ಕೇಳಿದ್ರೂ ಇದನ್ನೇ ಹೇಳ್ತಾರೆ’. ಮ್ಯಾನೇಜರ್ ಉತ್ತರಿಸಿದರು,’ ದೊಡ್ಡಣ್ಣನ ವ್ಯವಹಾರ ಶುದ್ಧತೆ ಬಗ್ಗೆ ಊರಿನಲ್ಲಿಡೀ ಗೊತ್ತಿರುವಂತಹದ್ದೇ.ಆದರೆ ಅದು ದಾಖಲೆಗಳಿಗೆ ಗೊತ್ತಾಗುವುದಿಲ್ಲವಲ್ಲ.ದಾಖಲೆಗಳಿಗೂ ಗೊತ್ತಾಗುವಂತೆ ವ್ಯವಹಾರ ರೂಪಿಸಿಕೊಳ್ಳ ಬೇಕಾದ್ದು ಮುಖ್ಯ’ ಅಂತ.

ದಶಕದ ಹಿಂದಿನ‌ ವ್ಯವಹಾರದಲ್ಲಿ no due certificate ಮಹತ್ವದ ಪಾತ್ರ ವಹಿಸುತ್ತಿತ್ತು.ಅಂದರೆ ಇನ್ನಾವುದೇ ಹಣಕಾಸು ಸಂಸ್ಥೆಗಳಲ್ಲಿ ಸುಸ್ತಿಯಾದ ಯಾವುದೇ ವ್ಯವಹಾರ ಇಲ್ಲ ಎಂಬ ಪ್ರಮಾಣ ಪತ್ರ ಕೊಡ ಬೇಕಾಗಿದ್ದದ್ದು ಮುಖ್ಯವಾಗಿತ್ತು.ಇದರ ಆಧಾರದ ಮೇಲೆ ಹೊಸ ಸಾಲದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತಿತ್ತು.

ಇದೀಗ ಸಿಬಿಲ್ ಅಂಕ ಬಂದಿದೆ.ಇದರಲ್ಲಿ ಇನ್ನಷ್ಟು ಹೆಚ್ಚಿನ‌ ವ್ಯವಹಾರ ಶುದ್ಧತೆಯ ಅಪೇಕ್ಷೆ ಇದೆ.ಸಾಲ ಕೇಳುವ ಸಮಯಕ್ಕೆ ಇತರೆಡೆ ಸುಸ್ತಿಯಾದ ಪಾವತಿಗಳು ಇರಬಾರದು ಎಂಬುದಷ್ಟೇ ಅಲ್ಲ, ಪಾವತಿ ಮಾಡಬೇಕಿದ್ದನ್ಬೆಲ್ಲ ಸಕಾಲದಲ್ಲಿ ,ಪ್ರತಿ ಬಾರಿಯೂ,ಪಾವತಿ ಮಾಡಲಾಗಿದೆಯಾ ಎಂಬ ಮಾಹಿತಿಯೂ ಮುಖ್ಯವಾಗ್ತದೆ.ಅದರ ಜೊತೆಜೊತೆಗೆಯೇ ಆದಾಯದ ಮಾಹಿತಿಯೂ ಸೇರಿರ ಬೇಕು. ಸಂಬಳದಾರರಿಗೆ ಅವರ ಸಂಬಳದ ಚೀಟಿ ( pay slip) ಇರುತ್ತದೆ.ಕೃಷಿಕರಿಗೆ ಎಲ್ಲಿದೆ ಅಂತಹ ದಾಖಲೆ? ಅದಕ್ಕಾಗಿಯೇ ನಿಯಮಿತವಾಗಿ ಬ್ಯಾಂಕಿಗೆ ಹಣ ತುಂಬುತ್ತಿರಬೇಕಾದ್ದು.ಸದ್ಯ ಬ್ಯಾಂಕಿಂಗ್ ಕ್ಷೇತ್ರದಲ್ಲಷ್ಟೇ ಸಿಬಿಲ್ ಮಾಹಿತಿ ಕೇಳಲಾಗ್ತಿದೆ.ಆದರೆ ಶೀಘ್ರವಾಗಿ‌ ಸಹಕಾರಿ ಕ್ಷೇತ್ರದಲ್ಲೂ ಸಿಬಿಲ್ ಅಂಕ ಪ್ರವೇಶಿಸುವ ಎಲ್ಲ ಸಾಧ್ಯತೆ ಇದೆ. ಸಿಬಿಲ್ ಅಂಕ ಚೆನ್ನಾಗಿರುವವರಿಗೆ ಕಡಿಮೆ ಬಡ್ಡಿದರ,ಕಳಪೆ ಇರುವವರಿಗೆ ಹೆಚ್ಚು ಬಡ್ಡಿದರ ಅಂತ ಮುಂದಿನ ಕಾಲದಲ್ಲಿ ಬಂದೇ ಬರ್ತದೆ.ಇಂತಹ ಬದಲಾವಣೆಗೆ ಸಿದ್ಧರಾಗಿರಬೇಕಾದ್ದು,ಹೊಂದಿಕೊಳ್ಳ ಬೇಕಾದ್ದು ಅನಿವಾರ್ಯವಾಗಲಿದೆ.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ

ವಾರಣಾಸಿ ಎಂಬ ದ್ವಂದ್ವಗಳ ನಗರ
May 16, 2025
1:02 PM
by: ರಮೇಶ್‌ ದೇಲಂಪಾಡಿ
ಸಾರ್ವಜನಿಕ ಬದುಕಿನಲ್ಲಿ ನಿರಾಸೆಯ ಸ್ಫೋಟ…
April 2, 2025
6:40 AM
by: ರಮೇಶ್‌ ದೇಲಂಪಾಡಿ
ಅಂತರಂಗ | ಸ್ವಾರ್ಥರಹಿತ ಬೇಡಿಕೆಗಳಿಗೆ ರಾಜಕೀಯದಲ್ಲಿ ಮಾನ್ಯತೆಯಿಲ್ಲ…!
March 16, 2025
8:13 AM
by: ರಮೇಶ್‌ ದೇಲಂಪಾಡಿ
ನಿಯಮಗಳು ಇದ್ದರೂ ಅಭದ್ರತೆ ಕಟ್ಟಿಟ್ಟದ್ದು….!
March 11, 2025
7:51 AM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror

Join Our Group