ಇನ್ನೀಗ ಬೇಸಿಗೆ ಕಾಲ. ತೋಟಗಳಿಗೆ ನೀರುಣಿಸುವ ಸಮಯ. ಇಂತಹ ಸಮಯದಲ್ಲಿ ಸರಿಯಾಗಿ ನೀರುಣಿಸುವುದು ಅಗತ್ಯ ಇದೆ. ಹೆಚ್ಚಿನ ಕೃಷಿಕರು ಈಗ ಸಂಕಷ್ಟ ಅನುಭವಿಸುತ್ತಾರೆ. ನೀರಿನ ತೀವ್ರ ಅಭಾವಕ್ಕೆ ತುತ್ತಾದರೆ ಮನಃಪೂರ್ವಕವಾಗಿ ಸಹಜ ಸ್ಥಿತಿಗೆ ಬರಲು 2 ರಿಂದ 3 ವರ್ಷಕ್ಕೆ ಬೇಕಾಗುತ್ತದೆ. ಮಾತ್ರವಲ್ಲ, 12 ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನವಿರುವ ಪ್ರದೇಶಗಳಲ್ಲಿ ತಾಪಮಾನದಿಂದ ಉಂಟಾಗುವ ಒತ್ತಡವನ್ನು ನಿವಾರಿಸುತ್ತದೆ. ಇದರಿಂದ ನೀರಿನ ಸರಿಯಾದ ಪ್ರಮಾಣ ಹಾಗೂ ಯಾವ ಸಮಯದಲ್ಲಿ ನೀರನ್ನು ಹಾಕಬೇಕಾಗುತ್ತದೆ.
ಕರ್ನಾಟಕ ಮತ್ತು ಕೇರಳದಲ್ಲಿ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ಗುಣಿ ನೀರಾವರಿ ಪದ್ಧತಿಯಲ್ಲಿ ಪ್ರತಿ ಅಡಿಕೆ ಗಿಡದ ಬುಡಕ್ಕೆ 7-8 ದಿನಕ್ಕೊಮ್ಮೆ ನೀರು ಹಾಕಬೇಕು. ಜನವರಿ-ಫೆಬ್ರವರಿ ತಿಂಗಳಿನಲ್ಲಿ 6 ದಿನಕ್ಕೊಮ್ಮೆ ಹಾಗೂ, ಮಾರ್ಚ್- ಮೇ ತಿಂಗಳಿನಲ್ಲಿ 1-5 ದಿನಕ್ಕೊಮ್ಮೆ 175-200 ಲೀಟರ್ ನಷ್ಟು ನೀರನ್ನು ಒದಗಿಸಬೇಕು. ಆದರೆ ನೀವು ತೋಟಕ್ಕೆ ಸ್ಪಿಂಕ್ಲರ್ ಮತ್ತು ಹನಿ ನೀರಾವರ ಪದ್ಧತಿಯನ್ನು ಮಾಡಿದ್ದಾರೆ ಅದು ಸೂಕ್ತ. ಏಕೆಂದರೆ ಹನಿ ನೀರಾವರಿ ಪದ್ಥತಿಯಲ್ಲಿ ನೀರಿನ ಬಳಕಾ ಸಾಮರ್ಥ್ಯ ಶೇಕಡಾ 90-95 ರಷ್ಟಿದ್ದರೆ, ಸಿಂಚಕ ಪದ್ಧತಿಯಲ್ಲಿ ಶೇಕಡಾ 70 ಮತ್ತು ಸಾಂಪ್ರದಾಯಿಕ ಪದ್ಧತಿಯಾದ ನೀರು ನಿಲ್ಲಿಸುವುದು, ಕಟ್ಟುವುದು ಮತ್ತು ಹಾಯಿಸುವುದು ಪದ್ಥತಿಯಲ್ಲಿ ಕೇವಲ ಶೇಕಡಾ 50-60 ರಷ್ಟಿದೆ. ಜೊತೆಗೆ ಸಾಂಪ್ರದಾಯಿಕ ನೀರಾವರಿ ಪದ್ಧತಿಗಿಂತ ಹನಿ ನೀರಾವರಿ ಪದ್ಧತಿಯಲ್ಲಿ ಶೇಕಾಡ 44 ಮತ್ತು ಸಿಂಚಕ ಪದ್ಧತಿಯಲ್ಲಿ ಶೇಕಡಾ 20ರಷ್ಟು ನೀರನ್ನು ಉಳಿತಾಯ ಮಾಡಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ನೀರನ್ನು ಸಾಮಾನ್ಯವಾಗಿ ಈ ಮಾದರಿಯಲ್ಲಿ ತೋಟಕ್ಕೆ ಹಾಕಬಹುದು :
ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…
ಪ್ರಕೃತಿಯಲ್ಲಿ ಇರುವ ಡಿಎನ್ಎ, ಪ್ರೋಟೀನ್ಗಳಂತೆ ಪ್ಲಾಸ್ಟಿಕ್ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…
2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…
ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…
ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…
ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…