Advertisement
Opinion

ನಿಮ್ಮ ಕೊಳವೆ ಅಥವಾ ತೆರೆದ ಬಾವಿಯಲ್ಲಿ ನೀರು ಎಷ್ಟು ಬರುತ್ತಿದೆ ಎಂದು ತಿಳಿಯುವುದು ಹೇಗೆ…?

Share

ಕೊಳವೆಬಾವಿ ತೆಗೆದು ಅದಕ್ಕೆ ಪಂಪ್ ಅಳವಡಿಸಿ ನೀರು ಹರಿಸುತ್ತಿರುವ ಬಹುತೇಕ ರೈತರಿಗೆ(Farmer) ತಮ್ಮ ಕೊಳವೆಬಾವಿ(Tubewell)ಯಿಂದ ಎಷ್ಟು ಪ್ರಮಾಣದ ನೀರು(Water level) ಹೊರ ಬರುತ್ತಿದೆ ಎಂಬ ಮಾಹಿತಿ ಇರುವುದಿಲ್ಲ. ನೀರಿನ ಇಳುವರಿ ಕೇಳಿದಾಗ ಇಂಚ್ ಲೆಕ್ಕದಲ್ಲಿ ಹೇಳುವುದು ವಾಡಿಕೆಯಾಗಿದೆ. ಆದರೆ ಅದನ್ನು ಪರಿಗಣಿಸಿ ನೀರಿನ ನಿಖರ ಅಳತೆ ಮಾಡಲಾಗುವುದಿಲ್ಲ ಮತ್ತು ಬೆಳೆ ಆಯೋಜನೆ, ಹನಿ ಅಥವಾ ತುಂತುರು ನೀರಾವರಿ(Drip irrigation, sprinkler irrigation) ಮಾಡಲು ಸರಿಯಾದ ವಿನ್ಯಾಸ ರೂಪಿಸಲಾಗುವುದಿಲ್ಲ. ಸರಿಯಾದ ನೀರಾವರಿ ವಿನ್ಯಾಸ ರಚನೆ ಮಾಡದೇ ಹೋದಾಗ ಅಗತ್ಯ ಪ್ರಮಾಣದ ನೀರಿನ ಒತ್ತಡ ಸಿಗುವುದಿಲ್ಲ. ನೀರು ವ್ಯರ್ಥವಾಗುವುದರ ಜೊತೆಗೆ ಬೆಳೆಯ ಬೆಳವಣಿಗೆ ಮತ್ತು ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.

Advertisement
Advertisement
Advertisement

ಹಾಲಿ ನಿಮ್ಮ ಜಮೀನಿನಲಿ ಚಾಲ್ತಿಯಲ್ಲಿರುವ ಕೊಳವೆ/ ತೆರೆದ ಬಾವಿಯಿಂದ ಮೋಟಾರ್/ಪಂಪ್ ಮೂಲಕ ಬರುತ್ತಿರುವ ನೀರಿನ ಅಳತೆಯನ್ನು ಮಾಡುವುದನ್ನು ನೀರಿನ ಇಳುವರಿ ಪರೀಕ್ಷೆ (Water Yielding Test) ಎಂದು ಕರೆಯಲಾಗುತ್ತದೆ. ನೀರಿನ ಇಳುವರಿ ಪರೀಕ್ಷೆ ಮಾಡಿ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿ,ನಿಮ್ಮಲ್ಲಿ ಲಭ್ಯತೆ ಇರುವ ವಿದ್ಯುತ್ ಪೂರೈಕೆ ಅವಧಿಯನ್ನು ಗಣನೆಗೆ ತೆಗೆದುಕೊಂಡು ಆನಂತರ ಅದಕ್ಕೆ ಹೊಂದಿಕೆ ಆಗುವಂತೆ ಡ್ರಿಪ್ /ಸ್ಪ್ರಿಂಕ್ಲೆರ್ ನೀರಾವರಿ ವಿನ್ಯಾಸ ಮಾಡಿಕೊಳ್ಳಿ.ನೀರಿನ ಅಳತೆ ಮಾಡದೇ ವಿನ್ಯಾಸ ಮಾಡುವುದರಿಂದ ಬೆಳೆಗಳಿಗೆ ಅವಶ್ಯಕತೆಗೆ ಅನುಗುಣವಾಗಿ ನೀರು ಪೂರೈಕೆ ಮಾಡಲಾಗುವುದಿಲ್ಲ.

Advertisement

ತಪ್ಪಾಗಿ ವಿನ್ಯಾಸ ಮಾಡುವುದರಿಂದ ಕಡಿಮೆ ಒತ್ತಡವಾದಾಗ ನೀರು ಡ್ರಿಪ್ ಪೈಪ್/ಸ್ಪ್ರಿಂಕ್ಲೆರ್ ಪೈಪ್ ಮೂಲಕ ಆ ಪೈಪ್ ಸಾಮರ್ಥ್ಯಕ್ಕೆ ತಕ್ಕ ನೀರು ಹೊರ ಸೂಸುವುದಿಲ್ಲ,ಆಗ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುತ್ತದೆ.ಅಧಿಕ ಒತ್ತಡವಾದಾಗ ಪೈಪ್ ಲೈನ್ ಒತ್ತಡಕ್ಕೆ ಸಿಲುಕಿ ಹೊಡೆದು ಹೋಗುತ್ತದೆ.ನೀರಿನ ಲಭ್ಯತೆಗೆ ತಕ್ಕಂತೆ ವಿಭಾಗ ಮಾಡಿಕೊಂಡು(Section) ಪ್ರತಿ ವಿಭಾಕ್ಕೆ ಗೇಟ್ ವಾಲ್ ಹಾಕಿ ಕೊಳ್ಳಬೇಕು. ನೀರಿನ ಅಳತೆ ಪರೀಕ್ಷೆ ಮಾಡಲು 200 ಲೀಟರ್ ಅಳತೆಯ ಡ್ರಮ್ ಅಥವಾ ನಿಮ್ಮಲ್ಲಿ ಲಭ್ಯವಿರುವ ಅಳತೆಯ ಡ್ರಮ್ ಮತ್ತು ಮೊಬೈಲ್ ನಲ್ಲಿರುವ ಸ್ಟಾಪ್ ವಾಚ್ ಸಿದ್ದ ಮಾಡಿಟ್ಟಿಕೊಳ್ಳಬೇಕು.

ಮೋಟಾರ್ /ಪಂಪ್ ಚಾಲು ಮಾಡಿ ಕನಿಷ್ಠ 15 ನಿಮಿಷ ನೀರನ್ನು ಹೊರ ಹೋಗಲು ಬಿಡಬೇಕು, ಬೋರ್ವೆಲ್ ಚಾಲು ಮಾಡುವ ಮುನ್ನ ಮೇಲ್ಮಟ್ಟದಲ್ಲಿ ಹೆಚ್ಚು ನೀರು ಸಂಗ್ರಹವಾಗಿರುವುದರಿಂದ ಮೊದಲ 15 ನಿಮಿಷ ಹೆಚ್ಚು ನೀರು ಹೊರ ಬರುತ್ತದೆ,ಆನಂತರ ನೀರಿನ ಹೊರ ಹರಿವು ಸ್ಥಿರವಾಗುವುದರಿಂದ ಈ ಸಮಯದಲ್ಲಿ ನೀರಿನ ಅಳತೆಯನ್ನು ಮಾಡಬೇಕು. ಬೋರ್ವೆಲ್ ನಲ್ಲಿ ಹೊರ ಬರುವ ನೀರನ್ನು ಸಂಗ್ರಹ ಮಾಡಲು 200 ಲೀಟರ್ ಡ್ರಮ್ ಕೆಳಗಿಟ್ಟು ಅದು ತುಂಬುವ ಸಮಯವನ್ನು ಸ್ಟಾಪ್ ವಾಚ್ ಮೂಲಕ ಗುರುತು ಹಾಕಿಕೊಳ್ಳಬೇಕು.ಡ್ರಮ್ ನಲ್ಲಿ ತುಂಬಿದ ನೀರನ್ನು ಖಾಲಿ ಮಾಡಿಕೊಂಡು ಒಟ್ಟು 03 ಬಾರಿ ಡ್ರಮ್ ತುಂಬಲು ತೆಗೆದುಕೊಳ್ಳುವ ಸಮಯವನ್ನು ಗುರುತು ಹಾಕಿ ಅದು ತೆಗೆದುಕೊಳ್ಳುವ ಸರಾಸರಿ ಸಮಯ ಕಂಡು ಹಿಡಿಯಬೇಕು.

Advertisement

ಉದಾಹರಣೆಗೆ 200 ಲೀಟರ್ ಡ್ರಮ್ ತುಂಬಲು 60 ಸೆಕೆಂಡ್ ತೆಗೆದುಕೊಂಡರೆ: 200 ಲೀಟರ್ /60 ಸೆಕೆಂಡ್ =3.3 ಲೀಟರ್ /ಸೆಕೆಂಡ್ 01 ನಿಮಿಷಕ್ಕೆ:3.3*60=200 ಲೀಟರ್ /ನಿಮಿಷ 01 ಗಂಟೆಗೆ :200*60 =12,000 ಲೀಟರ್ /ಗಂಟೆಗೆ. ಈ ರೀತಿಯಾಗಿ ನಿಮ್ಮ ಬೋರ್ವೆಲ್ ನಿಂದ ಬರುವ ನೀರಿನ ಪ್ರಮಾಣವನ್ನು ಲೀಟರ್ ಲೆಕ್ಕದಲ್ಲಿ ಲೆಕ್ಕ ಹಾಕಿಕೊಳ್ಳಬೇಕು.

ನೀರಿನ ಹೊರ ಹರಿವಿನ ಪ್ರಮಾಣ ತಿಳಿದ ನಂತರ ಡ್ರಿಪ್ ಇರಿಗೇಷನ್ (ಹನಿ ನೀರಾವರಿ) ಮಾಡಲು
ಶೇ 80% ಮತ್ತು ಸ್ಪ್ರಿಂಕ್ಲೆರ್ ಇರ್ರಿಗೇಷನ್(ತುಂತುರು ನೀರಾವರಿ ) ಮಾಡಲು ಶೇ 60% ಗಣನೆಗೆ ತೆಗೆದುಕೊಂಡು ವಿನ್ಯಾಸ ಮಾಡಬೇಕು.ಮೇಲಿನ ಉದಾಹರಣೆ ರೀತಿ 12 ಸಾವಿರ ಲೀಟರ್ ಹೊರ ಹರಿವು ಪ್ರಮಾಣಕ್ಕೆ ಶೇ 80% ಅಂದರೆ 9600 ಲೀಟರ್, ಶೇ 60% ಅಂದರೆ 7200 ಲೀಟರ್ ಎಂದು ಪರಿಗಣಿಸಿ ಅದಕ್ಕೆ ತಕ್ಕ ರೀತಿಯ ನೀರಾವರಿ ವಿನ್ಯಾಸ ಮಾಡಿಕೊಳ್ಳಬೇಕು.

Advertisement

ನೀರಿನ ಲಭ್ಯತೆ, ಬೆಳೆ ಮತ್ತು ಮಣ್ಣಿನ ಸ್ವರೂಪ ಆಧರಿಸಿ ನೀರಾವರಿ ವಿನ್ಯಾಸ ರಚನೆ, ತಾಂತ್ರಿಕ ಮಾಹಿತಿ, ಬೆಳೆ ಮತ್ತು ಅಂತರಕ್ಕೆ ಅನುಗುಣವಾಗಿ ಬೇಕಾಗುವ ಉಪಕರಣಗಳ ಪ್ರಮಾಣ, ತಗಲುವ ಅಂದಾಜು ವೆಚ್ಚ ಇವುಗಳ ಬಗ್ಗೆ ನಿಖರವಾದ ಮಾಹಿತಿ ಪಡೆಯಲು ನಿಮ್ಮ ಜಮೀನುಗಳಿಗೆ ಭೇಟಿ ನೀಡಿ ಜಮೀನಿನ ಅಕಾರವನ್ನು ಪರಿಶೀಲಿಸಿ, ಕನಿಷ್ಠ ಪ್ರಮಾಣದ ಉಪಕರಣ ಬಳಸುವ ರೀತಿಯ ಯೋಜನೆ ಮಾಡಿ ವೆಚ್ಚವನ್ನು ಕಡಿತಗಳಿಸುವುದು ಹಾಗು ಗರಿಷ್ಠ ಪ್ರಮಾಣದಲ್ಲಿ ಬೆಳೆಗಳಿಗೆ ಅನುಕೂಲವಾಗುವ ರೀತಿಯ ವಿನ್ಯಾಸ ಸಿದ್ದಪಡಿಸಿ ಕೊಡಲಾಗುವುದು. ಹನಿ/ತುಂತುರು ನೀರಾವರಿ ವಿನ್ಯಾಸದ ಬಗ್ಗೆ ಸಮಾಲೋಚನೆ ಅಗತ್ಯವಿರುವವರು ಸಂಪರ್ಕಿಸಬಹುದು.

ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು, ಮೊಬೈಲ್ :9342434530

Advertisement
Most of the farmers who are pumping water by removing the borehole and installing a pump in it do not have information about how much water is coming out of their borehole. When water yield is asked it is customary to say it in inches. But considering that, accurate measurement of water cannot be done and proper design cannot be done for crop placement, drip or sprinkle irrigation. When the proper irrigation design is not done, the required amount of water pressure is not available.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

2 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

2 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

21 hours ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

21 hours ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

21 hours ago