Opinion

ಬೇಸಲ್ ಡೋಸ್ ಗೊಬ್ಬರ ತಯಾರಿ ಹೇಗೆ..? | ಇಲ್ಲಿದೆ ಉಪಯುಕ್ತ ಮಾಹಿತಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಮಾರು 350 ಪ್ಲಸ್ ಮಾವಿನ ಗಿಡಗಳು(Mango plant) ನೆಟ್ಟು 3 ತಿಂಗಳಾಯ್ತು‌ . ನನಗೂ ಆಶ್ಚರ್ಯವೇ. ಕುಡಿ ಕರಟಿ ಹೋಗುವುದು, ಕೀಟಗಳು ಕುಡಿಯನ್ನು ಸಂಪೂರ್ಣ ಬೋಳಿಸುವ ಕಾಯಿಲೆ ಇಲ್ಲವೇ ಇಲ್ಲ ಎನ್ನುವಷ್ಟು ಆರೋಗ್ಯಕರವಾಗಿದೆ‌. ಒಮ್ಮೆಯೂ ಶಿಲೀಂದ್ರ ನಾಶಕ, ಕೀಟನಾಶಕ ಬಳಸಲಿಲ್ಲ. ಅಲ್ಲೊಂದು ಇಲ್ಲೊಂದು ಶಂಖ ಇಲ್ಲದ ಬಸವನಹುಳುಗಳನ್ನು ಕಾಂಡದ ಮೇಲೆ ಮತ್ತು ಅವುಗಳ ಮಲವನ್ನು ಎಲೆಯ ಮೇಲೆ ನೋಡಿರುವೆ. ಅಲ್ಲಲ್ಲಿ ಅರ್ಧ ತಿಂದ ಕೆಲವು ಎಲೆಗಳಿವೆ. ಅದೂ ಕೂಡ ಸ್ವಯಂ ನಿಯಂತ್ರಣ. ಇವೆಲ್ಲವುದಕ್ಕೂ ಕಾರಣ ನೆಡುವಾಗ ಹಾಕಿದ ಬೇಸಲ್ ಡೋಸ್ ಎಂಬ ಗೊಬ್ಬರ(Basal dose fertilizer). ಗಿಡಗಳಿಗೆ ರೋಗ ನಿರೋಧಕ ಶಕ್ತಿ ಕೊಡುವಲ್ಲಿ ಮತ್ತು ಅವುಗಳನ್ನು ಸದೃಢವಾಗಿಡುವಲ್ಲಿ ಅದರ ಕೆಲಸ ನೂರಕ್ಕೆ ನೂರು ನಿಚ್ಚಳ. ಪ್ರತೀ 5 ದಿನಕ್ಕೊಮ್ಮೆ ಡ್ರಿಪ್ ಬಿಡುವಾಗ ಗಿಡದ ಬಳಿ ಹೋಗುವುದಿದೆ‌. ಹೊಸ ಚಿಗುರುಗಳು ನಿರಂತರ ವಾಗಿ ಬರುತ್ತಿವೆ.

Advertisement
Advertisement

ಇದು ಕೃಷಿಕರೊಬ್ಬರ ಅನುಭವ.ಹಾಗಾದ್ರೆ 100-105kg ಬೇಸಲ್ ಡೋಸ್ ಗೊಬ್ಬರದ ತಯಾರಿಸುವ ಕ್ರಮ ಹೇಗೆ..?

95-100kg ಎರೆಹುಳು ಗೊಬ್ಬರ (ವರ್ಮಿ ಕಾಂಪೋಸ್ಟ್)
1kg ಹರಳು ಹಿಂಡಿ ಹುಡಿ
1kg ಬೇವಿನ ಹಿಂಡಿ ಹುಡಿ
1kg ಬೋನ್ ಮೀಲ್
1kg ಟ್ರೈಕೋಡರ್ಮಾ
1kg ಬೂದಿ
100ಗ್ರಾಂ ಬೋರಾನ್

ಇವೆಲ್ಲವನ್ನು ಬೆರಸಿ ಇಟ್ಟುಕೊಳ್ಳಿ. ಗಿಡ, ಮರಗಳಿಗೆ ದಿನಾಲು ನೀರು ಸಿಗುವುದಿದ್ದರೆ ನೇರವಾಗಿ ಹಾಕಿ. ಇಲ್ಲವೇ ಒಂದಿಂಚು ಮಣ್ಣು ಮುಚ್ಚುವಂತೆ ಹಾಕಿ. ಬೇರಿಗೆ ತಾಗಿದರೆ ಒಳ್ಳೆಯದೇ. ಬೀಜಕ್ಕೆ ತಾಗಿದರೂ ಸುಖವೇ.

ಭತ್ತ, ಅಡಿಕೆ, ತೆಂಗು, ಬಾಳೆ, ಕಾಳುಮೆಣಸು, ಕಾಫಿ, ತರಕಾರಿ, ಹಣ್ಣು, ಹೂ ಬೆಳೆಗಳಿಗೆ ಬಳಸಬಹುದು. ಡಬ್ಬಲ್ ಅಥವಾ ಗರಿಷ್ಠ ( ಅನುವಂಶೀಯ ಸಾಮರ್ಥ್ಯವನ್ನು ಹೊರಗೆಳೆಯುವ ಕೆಲಸ) ಇಳುವರಿ ಮತ್ತು ಬೆಳೆಯ ಗಾತ್ರ, ರುಚಿ, ಸುವಾಸನೆಯಲ್ಲಿ ಸುಧಾರಣೆಯನ್ನು ಗಮನಿಸುವಂತಹದು. ಜೊತೆಯಲ್ಲೇ ಸಸ್ಯದ ರೋಗನಿರೋಧಕ ಶಕ್ತಿ ಹೆಚ್ಚುವ ಕಾರಣ ಕೀಟ ಬಾಧೆ, ಬೇರೆ ಬೇರೆ ಕ್ರಿಮಿ (ಬ್ಯಾಕ್ಟೀರಿಯ, ಶಿಲೀಂಧ್ರ, ವೈರಸ್,..)ಗಳ ಉಪಟಳ ಇಲ್ಲವೆನ್ನುವಷ್ಟು ನೆಮ್ಮದಿ.

Advertisement

ಪ್ರತೀ ಸಸ್ಯಕ್ಕೆ ಎಷ್ಟು ಗೊಬ್ಬರ ಹಾಕಬೇಕು ಎನ್ನುವುದು ಸಸ್ಯದ ಗಾತ್ರ, ವಾರ್ಷಿಕ ಇಳುವರಿಯನ್ನು ಅವಲಂಬಿಸಿ ನಿರ್ಧರಿಸುವಂತಹದು. ಅಂದರೆ ವಿವೇಚನೆಗೆ ಬಿಟ್ಟ ವಿಚಾರ. ಒಂದು ಹೂ, ತರಕಾರಿ ಗಿಡಕ್ಕೆ 50 ರಿಂದ 250ಗ್ರಾಂ ವರೆಗೆ, ಅಡಿಕೆಗೆ ಅರ್ಧದಿಂದ 1kg, ತೆಂಗಿಗೆ 1ರಿಂದ 2kg – ಒಟ್ಟಿನಲ್ಲಿ ಅಂದಾಜು ಅಳತೆ. ವರ್ಷಕ್ಕೆ 2 ರಿಂದ 4 ಬಾರಿ ಕೊಡಬಹುದು. ಹೂ, ತರಕಾರಿ ಬೆಳೆಗಳಿಗೆ ತಿಂಗಳಿಗೊಮ್ಮೆಯೂ ಕೊಡಬಹುದು.

ಟ್ರೈಕೋಡರ್ಮ ಒಳಸುರಿಗೆ 6 ತಿಂಗಳ ಜೀವಿತ ಅವಧಿ ಇದ್ದು, ಅಂಗಡಿಯಲ್ಲೇ ಇದ್ದು ಅಥವಾ ತಯಾರಿ ಆಗಿ ಕೆಲವು ತಿಂಗಳು ಆಗಿರಬಹುದು. ಹಾಗಾಗಿ ಒಟ್ಟು ಬೇಸಲ್ ಡೋಸ್ ಗೊಬ್ಬರ ತಯಾರಿಸಿದ 3 ತಿಂಗಳೊಳಗೆ ಬಳಸಿದರೆ ಹೆಚ್ಚು ಪರಿಣಾಮ.

ಈ ಬೇಸಲ್ ಡೋಸ್ ಗೊಬ್ಬರವನ್ನು ಈಶಾನ್ಯ ಭಾರತದ ಮೂಲೆಯಿಂದ ಕರ್ನಾಟಕದ ನೆಲಕ್ಕೆ ಪರಿಚಯಿಸಿದವರು ಆನಂದತೀರ್ಥ ಪ್ಯಾಟಿ ಮತ್ತು ಮಲ್ಲಿಕಾರ್ಜುನ ಹೊಸಪಾಳ್ಯ. ಇಬ್ಬರೂ ಕೃಷಿಕರೂ ಹೌದು ಮತ್ತು ಕೃಷಿಪತ್ರಕರ್ತರು.

ಆ ನಂತರ ಈ ಗೊಬ್ಬರದ ಮಹಾತ್ಮೆಯ ಬಗ್ಗೆ ಅಡಿಕೆ ಪತ್ರಿಕೆಯಲ್ಲಿ ಸವಿಸ್ತಾರವಾದ ಲೇಖನ ಬಂದು ಇನ್ನಷ್ಟು ಜನರನ್ನು ತಲುಪಿತು. ಸಾವಯವ, ವಿಷಮುಕ್ತ ಕೃಷಿಗೆ ಪೂರಕವಾಗಿ ಹೆಚ್ಚಿನ ಇಳುವರಿ ಮತ್ತು ನೆಮ್ಮದಿಯ ಕೃಷಿಗೆ ಇದೊಂದು ಮೈಲಿಗಲ್ಲು. ಹಲವು ಕೃಷಿಕರು ಸೇರಿ ಒಳಸುರಿ ತರಿಸಿಕೊಂಡರೆ ಗೊಬ್ಬರದ ಬೆಲೆ ಬಹಳ ಕಡಿಮೆಯಾಗುತ್ತದೆ. ವೈಯಕ್ತಿಕವಾಗಿ ತರಿಸಿಕೊಂಡರೂ ಕೇಜಿ ಗೊಬ್ಬರದ ಬೆಲೆ ರೂಪಾಯಿ 15 ರಿಂದ 20ರವಳಗೆ ತಗಲುತ್ತದೆ.

ಬರಹ :
ಪಿ. ಮನೋಹರ ಉಪಾಧ್ಯ, ಮಂಗಳೂರು.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ

ಭಾರತದಲ್ಲಿ, ಮೇ ತಿಂಗಳಿನಲ್ಲಿ ಉಂಟಾದ ತೀವ್ರ ಉಷ್ಣತೆಯು ಬೆಳೆ ಇಳುವರಿ ಮತ್ತು ಪೂರೈಕೆ…

53 minutes ago

ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧ

ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧವಾಗಿದೆ. ಜ್ಯೋತಿಷ್ಯ ಶಾಸ್ತ್ರದ…

2 hours ago

ಹೊಸರುಚಿ | ಹಲಸಿನ ಬೀಜದ ಖಾರದ ಕಡ್ಡಿ

ಹಲಸಿನ ಬೀಜದ ಖಾರದ ಕಡ್ಡಿ ಮಳೆ ಬರುವಾಗ ಬಿಸಿ ಬಿಸಿಯಾದ ಕಾಫಿ, ಟೀ,…

2 hours ago

ಮರಳು ಖರೀದಿ, ಸಾಗಾಟಕ್ಕೆ  ಆ್ಯಪ್  ಚಾಲನೆ

ದಕ್ಷಿಣ ಜಿಲ್ಲೆಯಲ್ಲಿ ನಾನ್-ಸಿಆರ್ಝೆಡ್ ದೇಶದಲ್ಲಿ ಗುರುತಿಸಿ ಮಂಜೂರಾಗಿರುವ 15 ಮರಳು ಬ್ಲಾಕ್‍ಗಳಲ್ಲಿನ ಮರಳು…

10 hours ago

ಹವಾಮಾನ ವರದಿ | 25-07-2025 | ಮಳೆ ಕಡಿಮೆ ಲಕ್ಷಣ – ಈಗ ಗಾಳಿಯೂ ಜೋರು |

ಬಾಂಗ್ಲಾದೇಶ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಬಾಂಗ್ಲಾದೇಶ ಕರಾವಳಿಯಲ್ಲಿ ಪ್ರವೇಶಿಸಿದ್ದು ಇನ್ನು ಒಂದೆರಡು…

20 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ವೈಷ್ಣವಿ ಕೆ ಆರ್

ವೈಷ್ಣವಿ ಕೆ ಆರ್ , 5 ನೇ ತರಗತಿ, ಸರಕಾರಿ ಕಿರಿಯ ಪ್ರಾಥಮಿಕ…

1 day ago