ವಾರಾಂತ್ಯದ ರಜೆ ಹಾಗೂ ವಿವಿಧ ರಜೆಯ ಕಾರಣದಿಂದ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಭಕ್ತರು ಸಾಲು ಕಂಡುಬಂದಿದೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲೂ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಈ ನಡುವೆ ತಿರುಪತಿ ತಿರುಮಲದಲ್ಲೂ ಭಕ್ತ ಸಾಗರವೇ ಕಂಡುಬಂದಿದ್ದು ದೇವರ ದರ್ಶನಕ್ಕಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ದರ್ಶನ ಪಡೆಯಲು 40 ಗಂಟೆ ಹಾಗೂ ವಿಶೇಷ ದರ್ಶನಕ್ಕೆ ನಾಲ್ಕು ಗಂಟೆ ಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುಮಲದಲ್ಲಿ ಶನಿವಾರ ಬೆಳಗ್ಗೆಯಿಂದ ಮಳೆ ಸುರಿಯುತ್ತಿದೆ. ಚಳಿ ಹೆಚ್ಚಿದ್ದರಿಂದ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸತತ ರಜೆ ಇರುವುದರಿಂದ ವಿವಿಧೆಡೆಯಿಂದ ಭಕ್ತರು ಸ್ವಂತ ವಾಹನದಲ್ಲಿ ತಿರುಮಲಕ್ಕೆ ತೆರಳಿದರು. ಇದರಿಂದ ತಿರುಪತಿಯ ಚೆಕ್ ಪಾಯಿಂಟ್ ಗಳಲ್ಲಿ ತಪಾಸಣೆಗಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದಲ್ಲೂ ಜನಸಂದಣಿ ಕಂಡುಬಂದಿದೆ. ವಿವಿಧ ಸೇವೆಗಳಿಗೆ ಹಾಗೂ ದೇವರ ದರ್ಶನಕ್ಕೆ ಸರದಿ ಸಾಲು ಕಂಡುಬಂದಿದೆ. ಶುಕ್ರವಾರದಿಂದ ಸೋಮವಾರದವರೆಗೆ ಶಾಲಾ ಮಕ್ಕಳಿಗೆ ವಿವಿಧ ಕಾರಣಗಳಿಗೆ ಶಾಲೆಗೆ ರಜೆ ಇರುವ ಕಾರಣದಿಂದ ತೀರ್ಥಯಾತ್ರೆಯನ್ನು ಜನರು ಕೈಗೊಂಡಿದ್ದಾರೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…