ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದ ನೂರಾರು ಮಂದಿ | ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮ |

Advertisement
Advertisement

ಹಿಂದೂ ಧರ್ಮವನ್ನು ತ್ಯಜಿಸಿ ನೂರಾರು ಜನರು ಬೌದ್ಧ ಧರ್ಮವನ್ನು ಸ್ವೀಕರಿಸಿದ ಘಟನೆ ರಾಜ್ಯದ ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿದೆ. ಸುಮಾರು 350 ಕ್ಕೂ ಅಧಿಕ ದಲಿತ ಸಮುದಾಯದ ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು.ಬಿ.ಆರ್.ಅಂಬೇಡ್ಕರ್ ಮೊಮ್ಮಗಳಾದ ರಮಾಬಾಯಿ ನೇತೃತ್ವದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಕಾರ್ಯಕ್ರಮ ನಡೆಯಿತು. 

Advertisement

ನೂರಾರು ಜನರಿಗೆ ವರಜ್ಯೋತಿ ಬಂತೆಜೀ ಸಾನಿಧ್ಯದಲ್ಲಿ ಬೌದ್ಧ ಧಮ್ಮ ದೀಕ್ಷೆ ನೀಡಲಾಯಿತು. ಇಂದು ಡಾ.ಬಿ ಆರ್‌ ಅಂಬೇಡ್ಕರ್‌ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಿನವಾಗಿದೆ. ಜಗತ್ತಿಗೆ ಶಾಂತಿ, ಕರುಣೆ, ಪ್ರೀತಿಯನ್ನು ನೀಡಿದ ಭಗವಾನ್ ಗೌತಮ ಬುದ್ಧ. ಗೌತಮ ಬುದ್ಧ ಈಡೀ ಜಗತ್ತು ಜ್ಞಾನದಿಂದ ತುಂಬಬೇಕು ಎಂದು ಸಾರಿದವರು. ಇದನ್ನು ಸಾಕಾರಗೊಳಿಸಲು ಬೌದ್ಧ ಧರ್ಮವನ್ನು ಸ್ಥಾಪನೆ ಮಾಡಿದನು.  ಅದೇ ದಿನ ಬೌದ್ಧ ಧರ್ಮ ಸೇರಿಸುವ ಕೆಲಸ ಮಾಡಿದ್ದಾರೆ.ಹಿಂದು ಧರ್ಮದಲ್ಲಿ ಕೀಳಾಗಿ ಕಾಣುತ್ತಿರುವ ಹಿನ್ನಲೆ ದೀಕ್ಷೆ ಪಡೆಯಲಾಗಿದೆ ಎನ್ನಲಾಗುತ್ತಿದೆ. ತ್ರಿಸರಣ ಪಂಚಶೀಲ, ಅಷ್ಟಾಂಗ ಮಾರ್ಗ ಮತ್ತು ಅಂಬೇಡ್ಕರ್ ಪ್ರತಿಪಾಧಿಸಿದ 22 ಪ್ರತಿಜ್ಞಾ ವಿಧಿಗಳನ್ನ ಬೋಧಿಸಲಾಯಿತು. ಪ್ರತಿಜ್ಞಾ ವಿಧಿ ಪಡೆದು ಹಿಂದೂ ಧರ್ಮಕ್ಕೆ ವಿದಾಯ ಹೇಳಿ ಬೌದ್ಧ ಧರ್ಮ ಸ್ವೀಕರಿಸಿದರು.

Advertisement
Advertisement

ಕಳೆದ ವಾರ ದೆಹಲಿಯಲ್ಲಿ 10 ಸಾವಿರ ಜನರು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದ ನೂರಾರು ಮಂದಿ | ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮ |"

Leave a comment

Your email address will not be published.


*