ಹಿಂದೂ ಧರ್ಮವನ್ನು ತ್ಯಜಿಸಿ ನೂರಾರು ಜನರು ಬೌದ್ಧ ಧರ್ಮವನ್ನು ಸ್ವೀಕರಿಸಿದ ಘಟನೆ ರಾಜ್ಯದ ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿದೆ. ಸುಮಾರು 350 ಕ್ಕೂ ಅಧಿಕ ದಲಿತ ಸಮುದಾಯದ ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು.ಬಿ.ಆರ್.ಅಂಬೇಡ್ಕರ್ ಮೊಮ್ಮಗಳಾದ ರಮಾಬಾಯಿ ನೇತೃತ್ವದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಕಾರ್ಯಕ್ರಮ ನಡೆಯಿತು.
ನೂರಾರು ಜನರಿಗೆ ವರಜ್ಯೋತಿ ಬಂತೆಜೀ ಸಾನಿಧ್ಯದಲ್ಲಿ ಬೌದ್ಧ ಧಮ್ಮ ದೀಕ್ಷೆ ನೀಡಲಾಯಿತು. ಇಂದು ಡಾ.ಬಿ ಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಿನವಾಗಿದೆ. ಜಗತ್ತಿಗೆ ಶಾಂತಿ, ಕರುಣೆ, ಪ್ರೀತಿಯನ್ನು ನೀಡಿದ ಭಗವಾನ್ ಗೌತಮ ಬುದ್ಧ. ಗೌತಮ ಬುದ್ಧ ಈಡೀ ಜಗತ್ತು ಜ್ಞಾನದಿಂದ ತುಂಬಬೇಕು ಎಂದು ಸಾರಿದವರು. ಇದನ್ನು ಸಾಕಾರಗೊಳಿಸಲು ಬೌದ್ಧ ಧರ್ಮವನ್ನು ಸ್ಥಾಪನೆ ಮಾಡಿದನು. ಅದೇ ದಿನ ಬೌದ್ಧ ಧರ್ಮ ಸೇರಿಸುವ ಕೆಲಸ ಮಾಡಿದ್ದಾರೆ.ಹಿಂದು ಧರ್ಮದಲ್ಲಿ ಕೀಳಾಗಿ ಕಾಣುತ್ತಿರುವ ಹಿನ್ನಲೆ ದೀಕ್ಷೆ ಪಡೆಯಲಾಗಿದೆ ಎನ್ನಲಾಗುತ್ತಿದೆ. ತ್ರಿಸರಣ ಪಂಚಶೀಲ, ಅಷ್ಟಾಂಗ ಮಾರ್ಗ ಮತ್ತು ಅಂಬೇಡ್ಕರ್ ಪ್ರತಿಪಾಧಿಸಿದ 22 ಪ್ರತಿಜ್ಞಾ ವಿಧಿಗಳನ್ನ ಬೋಧಿಸಲಾಯಿತು. ಪ್ರತಿಜ್ಞಾ ವಿಧಿ ಪಡೆದು ಹಿಂದೂ ಧರ್ಮಕ್ಕೆ ವಿದಾಯ ಹೇಳಿ ಬೌದ್ಧ ಧರ್ಮ ಸ್ವೀಕರಿಸಿದರು.
ಕಳೆದ ವಾರ ದೆಹಲಿಯಲ್ಲಿ 10 ಸಾವಿರ ಜನರು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರು.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.