ರೂರಲ್‌ ಮಿರರ್‌ | #ನಾನುಕೃಷಿಕ | ಸದ್ಯದಲ್ಲೇ ನಿರೀಕ್ಷಿಸಿ…….| ಕೃಷಿ ಭವಿಷ್ಯ ಬರೆಯುವ ಯುವ ಕೃಷಿಕರ ಪರಿಚಯ |

January 2, 2022
10:17 AM

2022  ಕೃಷಿ ವರ್ಷ. ಕಳೆದ ಎರಡು ವರ್ಷಗಳಿಂದ ಕೃಷಿಗೆ ಮಾನ್ಯತೆ ಸಿಕ್ಕಿದೆ ಎನ್ನುವುದಕ್ಕೆ ಯಾವ ಅಂಜಿಕೆ, ಯಾವ ಮುಲಾಜೂ ಬೇಕಿಲ್ಲ. ಈಗ “#ನಾನುಕೃಷಿಕ” ಎನ್ನುವುದಕ್ಕೂ ಅಂಜಿಕೆ ಬೇಕಿಲ್ಲ. ಕೊರೋನಾ ಕಾಲಘಟ್ಟದ ನಂತರ ಕೃಷಿಗೆ ಭವಿಷ್ಯ ಇದೆ ಎನ್ನುವವರ ಸಂಖ್ಯೆ ಹೆಚ್ಚಾಗಿದೆ. 2022 ಖಂಡಿತವಾಗಿಯೂ ಕೃಷಿ ವರ್ಷ ಆಗಲಿದೆ ಎನ್ನುವ ಆಶಾವಾದೊಂದಿಗೆ ಈ ಪುಟ್ಟ ಹೆಜ್ಜೆ.

Advertisement
Advertisement

ಈ  ಹೆಜ್ಜೆಯಲ್ಲಿ ನಮ್ಮ ನಡುವಿನ ಯುವ ಕೃಷಿಕರ ಪರಿಚಯ ಮಾಡುವುದು  ನಮ್ಮ ಉದ್ದೇಶ. ಉನ್ನತ ವ್ಯಾಸಾಂಗ ಮಾಡಿ ಕೃಷಿಯಲ್ಲಿ ತೊಡಗಿರುವ ಯುವಕರು ಹಾಗೂ ಕೃಷಿಯನ್ನು ಸುಲಭ ಮಾಡಿರುವ ಕೃಷಿಕರ ಪರಿಚಯ ಎಲ್ಲರಿಗೂ ಆಗಬೇಕಿದೆ. ಹೀಗಾಗಿ ನಮ್ಮ ಪುಟ್ಟ ಹೆಜ್ಜೆಗೆ ನಿಮ್ಮೆಲ್ಲರ ಬೆಂಬಲ ಇರಲಿ ಎನ್ನುವ ಆಶಯದೊಂದಿಗೆ ಸದ್ಯದಲ್ಲೇ ಈ ಹೆಜ್ಜೆ ಇಡಲಿದ್ದೇವೆ. ನಿಗದಿತವಾಗಿ ಈ ಪರಿಚಯದ ಬರಹ ಪುಟ್ಟ ವಿಡಿಯೋ ಸಹಿತ ಪ್ರಕಟವಾಗಲಿದೆ.

Advertisement

ಸುಮಾರು 10 ವರ್ಷಗಳ ಹಿಂದೆ ನಮ್ಮ ಕೃಷಿ ಮಿತ್ರ ರಮೇಶ್‌ ದೇಲಂಪಾಡಿ ಅವರ ಸಹಕಾರದೊಂದಿಗೆ Agriculturist  ಎನ್ನುವ ಕೃಷಿ ಗುಂಪನ್ನು ಆರಂಭ ಮಾಡಿದೆವು. ಆ ದಿನಗಳಲ್ಲಿ  ಕೃಷಿ ಬಗ್ಗೆ ಚರ್ಚೆ ನಡೆಯುತ್ತಾ ದೂರವಾಣಿ ಮೂಲಕ ಹೆಚ್ಚಿನ ಸಂವಾದಗಳು ನಡೆಯುತ್ತಿದ್ದವು. ಗುಂಪು ವಿಸ್ತಾರಗೊಳ್ಳುತ್ತಾ ರಾಜ್ಯ ಮಟ್ಟದವರೆಗೆ ಹಬ್ಬಿ ಇಂದು ಸುಮಾರು 4 ಲಕ್ಷಕ್ಕೂ ಅಧಿಕ ಮಂದಿ ಹೊಂದಿದ್ದು ಪ್ರತಿ ದಿನವೂ ಸುಮಾರು 1 ಲಕ್ಷ ಮಂದಿ ವೀಕ್ಷಣೆ ಮಾಡುವ ಕೃಷಿಕರ ಗುಂಪಾಗಿದೆ. ಇದರಲ್ಲಿ ಬಹುಪಾಲು ಮಂದಿ ಬೆಂಗಳೂರು ಅಥವಾ ನಗರಗಳಿಂದಲೇ ವೀಕ್ಷಣೆಯಾಗುತ್ತದೆ. ಅದರಲ್ಲೂ ಯುವಕರೇ ಹೆಚ್ಚಾಗಿ ವೀಕ್ಷಣೆ ಮಾಡುತ್ತಿರುವುದು ನಮ್ಮ ಡಾಟಾ ಹೇಳುತ್ತದೆ.ಅಂತಹ ಯುವಕರೆಲ್ಲರೂ ಸಕ್ರಿಯವಾಗಿ ಕೃಷಿ ಸಂಗತಿಗಳನ್ನು ಗಮನಿಸುವುದು  ಹಾಗೂ ಪ್ರತಿಕ್ರಿಯೆ ನೀಡುವುದು  ಕಂಡಿದ್ದೇವೆ.

ಕೃಷಿಕರು ಇಂದು ಸಾಮಾಜಿಕ ಜಾಲತಾಣಗಳಲ್ಲಿ  ಕೃಷಿ ಸಂಗತಿಗಳನ್ನು ಹಂಚಿಕೊಳ್ಳುತ್ತಾ ಕೃಷಿ ಸಮಸ್ಯೆಗಳು, ಪರಿಹಾರಗಳು, ಆಧುನಿಕ ಕೃಷಿ ಬಗ್ಗೆ ಸಂವಾದ ನಡೆಸುತ್ತಾರೆ. ಅಂದರೆ ಬಹುಪಾಲು ಯುವಕರು ಕೃಷಿಯಲ್ಲಿ ಆಸಕ್ತಿ ಹೊಂದಿದ್ದಾರೆ ಎನ್ನುವುದು  ಖಚಿತವಾಗಿತ್ತು. ಆದರೆ ಕಾಲದ ಕಾರಣದಿಂದ, ಪರಿಸ್ಥಿತಿ ಕಾರಣದಿಂದ, ಕೃಷಿ ನಿರ್ಲಕ್ಷ್ಯ ಹಾಗೂ ಕೃಷಿಯಲ್ಲಿ ಸೋಲುಗಳೇ ಹೆಚ್ಚು ಎಂಬ ಕಾರಣದಿಂದ ಕೃಷಿಕ ಎನ್ನುವುದರ ಬದಲಾಗಿ ಉದ್ಯೋಗಿ ಎನ್ನುವುದು  ಹೆಚ್ಚು ಆಪ್ತವಾಯಿತು. ಕೊರೋನಾ ಎಲ್ಲಾ ಪರಿಸ್ಥಿತಿ ಬದಲಿಸಿತು. ಕೊರೋನಾ ನಂತರ ಮತ್ತೆ ಕೃಷಿಗೆ ಹೆಚ್ಚು ಮಾನ್ಯತೆ ಬಂದಿತು. ವರ್ಕ್‌ ಫ್ರಂ ಹೋಂ ಮೂಲಕ ಯುವಕರಿಗೆ ಕೃಷಿಯಲ್ಲಿಯೂ ಮನಸ್ಸು ಹರಿಸಲು ಕಾರಣವಾಯಿತು. ಅನೇಕ ಯುವಕರು ಮತ್ತೆ ಕೃಷಿಯಲ್ಲಿ ತೊಡಗಿಸಿಕೊಂಡರು.

Advertisement

ಈಗ ಯುವಕರಿಗೆ ಕೃಷಿಯಲ್ಲಿನ ಸವಾಲುಗಳನ್ನು ಎದುರಿಸಲಿ ಸುಲಭದ ದಾರಿಗಳು. ಆದಾಯ ದ್ವಿಗುಣ ಮಾಡುವ ಯೋಜನೆಗಳು. ಉಪಬೆಳೆ ಹಾಗೂ ಯಾಂತ್ರೀಕರಣದ ಮೂಲಕ ಯಶಸ್ವೀ ಕೃಷಿ ಮಾಡುವ ಯೋಚನೆಗಳು. ಉಳಿದಂತೆ ಎಲ್ಲಾ ಸವಾಲುಗಳನ್ನೂ ಯುವ ಕೃಷಿಕರು ಈಗಾಗಲೇ ಎದುರಿಸಿದ್ದಾರೆ. ಇಂತಹ ಸವಾಲುಗಳನ್ನು ಎದುರಿಸಲು ಕೃಷಿಕರ ಪರಿಚಯ ಎಲ್ಲರಿಗೂ ಬೇಕಾಗಿದೆ. ಉನ್ನನ ವ್ಯಾಸಾಂಗ ಮಾಡಿ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಿದೆ , ಯಾವುದೇ ಕೀಳರಿಮೆ ಇಲ್ಲ ಎನ್ನುವುದನ್ನು ತಿಳಿಸಬೇಕಿದೆ.

ಇಂತಹ ಯುವ ಕೃಷಿಕರು ನಮ್ಮ ನಡುವೆ ಇದ್ದರೆ ನಮಗೂ ತಿಳಿಸಿ. ನಾವು ಪುಟ್ಟ ಕೃಷಿ ವೇದಿಕೆಯನ್ನು, ಯುವ ಕೃಷಿಕರ ವೇದಿಕೆಯನ್ನು ಜೊತೆಯಲ್ಲಿಯೇ ಸೃಷ್ಟಿಸೋಣ…

Advertisement

# ಮಹೇಶ್‌ ಪುಚ್ಚಪ್ಪಾಡಿ

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ : ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು
April 25, 2024
3:13 PM
by: The Rural Mirror ಸುದ್ದಿಜಾಲ
ಬರಗಾಲ ಎಫೆಕ್ಟ್‌ : ಗಗನಕ್ಕೇರಿದ ತರಕಾರಿ ದರ : ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ ಯಾವುದೂ ಮುಟ್ಟುವಂಗಿಲ್ಲ..
April 25, 2024
2:39 PM
by: The Rural Mirror ಸುದ್ದಿಜಾಲ
ಕರಾವಳಿ ಜಿಲ್ಲೆಯ ಕೃಷಿ ಕ್ಷೇತ್ರದ ಕಡೆಗೆ ಗಮನ | ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಯತ್ನ | ಮಂಗಳೂರು ಬಿಜೆಪಿ ಅಭ್ಯರ್ಥಿ ಭರವಸೆ |
April 25, 2024
2:00 PM
by: ದ ರೂರಲ್ ಮಿರರ್.ಕಾಂ
ಭಾರತದಲ್ಲಿ ಸಮುದ್ರ ಜಲಕೃಷಿ ಚಟುವಟಿಕೆ ಉತ್ತೇಜನ | ಸಮುದ್ರ ಮೀನಿನ ಕೃಷಿಯಲ್ಲಿ ಹೊಸ ಸಾಧನೆ ಮಾಡಿದ ಸಿಎಂಎಫ್​ಆರ್​ಐ
April 24, 2024
9:33 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror