Advertisement
ಸುದ್ದಿಗಳು

ಮಳೆ ಬಾರದಿದ್ದರೆ ರೈತರಿಗಷ್ಟೇ ನಷ್ಟವಾ..? | ರೈತ ಬೆಳೆದದ್ದನ್ನು ಉಣ್ಣುವ ನಮಗೂ ಕಾದಿದೆ ಸಂಕಷ್ಟ…? | ಜಗತ್ತು ನಿಂತಿರುವುದು ರೈತನ ಮೇಲೆ….! |

Share

ಅಂತೂ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟ ಹಾಗೆ ಕಾಣುತ್ತಿದೆ. ಇದರಿಂದ ಮುಂಗಾರು ಬೆಳೆಗಳು ಯಾವುದೂ ಬೆಳೆಯೋಕಾಗ್ಲಿಲ್ಲ. ಇದರಿಂದ ರೈತರಿಗೆ ಊಹೆಗೂ ಮೀರಿದ ನಷ್ಟ ಅನ್ನಬಹುದು…. ಹಾಗಾದರೆ ಮಳೆ ಬಾರದ್ದು, ರೈತರಿಗಷ್ಟೇ ನಷ್ಟವಾ..?.  ಯಾರಿಗೆಲ್ಲಾ ಸಮಸ್ಯೆಯಾಗುತ್ತದೆ…?

ಒಂದು ಕಾಲದಲ್ಲಿ ಅಡಿಕೆಯ ಬೆಲೆ ವಿಪರೀತವಾಗಿ ಏರಿಕೆ ಕಂಡಿತು. ಕರಾವಳಿ ಭಾಗದ ಅದರಲ್ಲೂ ಸುಳ್ಯದ ಕಡೆಗಳಲ್ಲಿ ಜೀಪುಗಳು ಸಾಕಷ್ಟು ಸಂಖ್ಯೆಯಲ್ಲಿ ಬಂದವು. ಇದು ಮಲೆನಾಡು ಅದರಲ್ಲೂ ಗುಡ್ಡಗಾಡು ಇರುವ ಕಾರಣದಿಂದ ಈ ಪ್ರದೇಶದಲ್ಲಿ ಜೀಪುಗಳೇ ಹೆಚ್ಚು ಅಗತ್ಯವಾಗಿತ್ತು. ಅಡಿಕೆ ಅಂದರೆ ಕೃಷಿ ಧಾರಣೆಯೂ ಏರಿಕೆಯಾಯ್ತು. ಸಾಕಷ್ಟು ಸಂಖ್ಯೆಯಲ್ಲಿ ಜೀಪುಗಳು ಬಂದಾಗ ಆ ಕಂಪನಿಯೇ ಸುಳ್ಯದ ಕಡೆಗೆ ನೋಡಿತ್ತು…!.

ಕೆಲವು ಸಮಯಗಳ ಹಿಂದೆ ಅಡಿಕೆಗೆ ಕೊಳೆರೋಗ ಬಂದು ವಿಪರೀತವಾಗಿ ಬೆಳೆ ನಷ್ಟವಾಯ್ತು. ಆಗ ಕೃಷಿಕರು ಸಂಕಷ್ಟಕ್ಕೆ ಒಳಗಾದರು. ಇದರ ಪರಿಣಾಮ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಮೇಲೆ ಪರಿಣಾಮವಾಯ್ತು.

ಈಗ ಮಳೆಯ ಕೊರತೆ ಇದೆ .ಇಡೀ ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆ ಬಾರದ ಕಾರಣ, ಕೃಷಿ ಮಾರುಕಟ್ಟೆಯ ವ್ಯಾಪಾರಸ್ಥರು ನಷ್ಟದಲ್ಲಿ, ಅಲ್ಲಿ ಕೆಲಸ ಮಾಡುವ ನೌಕರರು ನಷ್ಟದಲ್ಲಿ… ಹಮಾಲಿಗಳು ನಷ್ಟದಲ್ಲಿ ದಾಸ್ತಾನುಗಳನ್ನು ಸರಬರಾಜು ಮಾಡುವ ಲಾರಿ ಟ್ರಕ್ ಟೆಂಪೋ ಮಾಲೀಕರು ನಷ್ಟದಲ್ಲಿ…  ಅವರ ಡ್ರೈವರುಗಳು ನಷ್ಟದಲ್ಲಿ ವಾಹನಗಳು ನಿಂತರೆ ಅದರ ಬಿಡಿಭಾಗ ಮಾರುವವ, ಪೆಟ್ರೋಲ್ ಬಂಕಿನವ, ರಿಪೇರಿ ಮಾಡುವ ಮೇಸ್ತ್ರಿ, ಪಂಚರ್ ತೆಗೆಯುವವನ ಸಮೇತ ಎಲ್ಲರಿಗೂ ನಷ್ಟ….!

ಬೆಳೆನೇ ಬೆಳಿದಿದ್ರೆ ಅದಕ್ಕೆ ಗೊಬ್ಬರ ಬೇಡ, ಗೊಬ್ಬರದಂಗಡಿಯ ಮಾಲೀಕ ನಷ್ಟದಲ್ಲಿ. ಬಿತ್ತನೆನೇ ಮಾಡ್ಲಿಲ್ಲ ಅಂದ್ರೆ ನಾಟಿ ಬರಲ್ಲ, ನಾಟಿನೆ ಬರ್ಲಿಲ್ಲ ಅಂದ್ರೆ ಅದಕ್ಕೆ ರೋಗ ಎಲ್ಲಿಂದ ಬರ್ಬೇಕು, ಕೀಟನಾಶಕದ ಅಂಗಡಿಯವನಿಗೂ ನಷ್ಟ. ಅದನ್ನೂ ಸರಬರಾಜು ಮಾಡುವ ಟ್ರಾವೆಲ್ಸ್ ದವರಿಗೂ ನಷ್ಟ. ಬಿತ್ತನೆನೇ ಮಾಡದಿದ್ರೆ ಆಳುಗಳಿಗೂ ಕೆಲಸವಿಲ್ಲ.. ಅವರಿಗೂ ನಷ್ಟ…ಮಳೆ ಕಡಿಮೆಯಾದ್ರೆ ಜಾನುವಾರುಗಳಿಗೆ ಮೇವಿಲ್ಲ.ಹಾಗಾಗಿ ಹಾಲು ಉತ್ಪಾದನೆಯಲ್ಲೂ ಕುಂಠಿತ.

ಸರಕಾರಿ ನೌಕರರಿಗೆ ಹೇಗೂ ಸಂಬಳ ಬರುತ್ತೆ ನಡೆಯುತ್ತೆಯಾದ್ರೂ ಅವರಿಗೂ ಕೂಡ ನಷ್ಟ ಹೇಗೆ ಅಂದ್ರೆ ಬೆಳೆ ಅಭಾವದಿಂದ 50 ರುಪಾಯಿಗೆ ಸಿಗುವ ದವಸಧಾನ್ಯಗಳನ್ನು 100 ರುಪಾಯಿಗೆ ಕೊಂಡುಕೊಳ್ಳಬೇಕು. ಅವರಿಗೂ ನಷ್ಟ.

ಮೇಲ್ಕಾಣಿಸಿದ ಎಲ್ಲರ ಹತ್ತಿರ ದುಡ್ಡಿದ್ದರೆ ಮಾತ್ರ ಅವರು ಹಣ ಖರ್ಚು ಮಾಡ್ತಾರೆ ಇಲ್ಲಾಂದ್ರೆ ಇಲ್ಲ. ಅಲ್ಲಿಗೆ ನಗರ ಪ್ರದೇಶದವರಿಗೂ ವ್ಯಾಪಾರ ವಹಿವಾಟಿನಲ್ಲಿ ನಷ್ಟ. ಬಿತ್ತನೆ ಮಾಡಿದಾಗಿಂದ ಬೆಳೆ ಬರುವವರೆಗೂ ರೈತ ಎಲ್ಲರ ಮೇಲೆ ಅವಲಂಬನೆಯಾಗಿರಲ್ಲ. ಆದರೆ ಎಲ್ಲರೂ ರೈತನ ಮೇಲೆ ಅವಲಂಬನೆಯಾಗಿರುತ್ತಾರೆ…!.

ಇಡೀ ಜಗತ್ತು ನಿಂತಿರುವುದು ರೈತನ ಮೇಲೆ. ರೈತ ಮುನಿದರೆ ಜಗತ್ತಿಗೆ ಸಂಕಷ್ಟ… ರೈತನಿಗೆ ಪ್ರಕೃತಿ ಮುನಿದರೆ ಸಂಕಷ್ಟ…!

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

20 hours ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

1 day ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

1 day ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

1 day ago

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?

ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…

1 day ago

ಮಂಗಳೂರು ಅಡಿಕೆ ಮಾರುಕಟ್ಟೆ | ಐದು ವರ್ಷದ ಧಾರಣೆ ಹೇಳುವ ಏರುಪೇರುಗಳ ಕಥೆ..!

ಐದು ವರ್ಷದ ದತ್ತಾಂಶವು ಮಂಗಳೂರು ಅಡಿಕೆ ಮಾರುಕಟ್ಟೆ ಚಕ್ರಾಕಾರ ಸ್ವಭಾವ ಹೊಂದಿರುವುದನ್ನು ತೋರಿಸಿದೆ.…

2 days ago