Advertisement
Opinion

#BloodPressure | ಪ್ರಾಣಕ್ಕೆ ಕುತ್ತು ತರಬಲ್ಲ ಅಧಿಕ ರಕ್ತದೊತ್ತಡ | ಆಯುರ್ವೇದ ಚಿಕಿತ್ಸೆ ಉತ್ತಮ |

Share

ನಿಮ್ಮ ಹೃದಯವು ರಕ್ತವನ್ನು ಪಂಪು ಮಾಡಲು ಹೆಚ್ಚು ಶ್ರಮಿಸಬೇಕಾದರೆ ಮತ್ತು ನಿಮ್ಮ ಅಪಧಮನಿಗಳು ಕಿರಿದಾಗುತ್ತಿದ್ದರೆ, ರಕ್ತದೊತ್ತಡ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ರಕ್ತದೊತ್ತಡ 120/ 80 ಇರುತ್ತದೆ. ರಕ್ತದೊತ್ತಡ ಇದು ಎರಡು ಸಂಖ್ಯೆಗಳನ್ನು ಒಳಗೊಂಡಿರುತ್ತದೆ. ಅಗ್ರ ಸಂಖ್ಯೆ ನಿಮ್ಮ ಸಂಕೋಚನದ ರಕ್ತದೊತ್ತಡವಾಗಿದೆ ನಿಮ್ಮ ಹೃದಯ ಬಡಿತ ಮತ್ತು ದೇಹದಾದ್ಯಂತ ರಕ್ತವನ್ನು ತಳ್ಳಿದಾಗ ಆಗುವ ಹೆಚ್ಚಿನ ಒತ್ತಡ ಕೆಳಭಾಗವು ನಿಮ್ಮ ಡಯಸ್ಟೋಲಿಕ್ ಬಡಿತಗಳ ನಡುವೆ ನಿಮ್ಮ ಹೃದಯ ಸಡಿಲಗೊಂಡಾಗ ಆಗುವ ಕಡಿಮೆ ಒತ್ತಡ.

ಅಧಿಕ ರಕ್ತದೊತ್ತಡಕ್ಕೆ ಕಾರಣಗಳು:
* ಅಧಿಕ ತೂಕ
* ಮಾನಸಿಕ ಒತ್ತಡ
* ನಿದ್ರಾಹೀನತೆ
* ಅತಿಯಾದ ಕೊಬ್ಬಿನಂಶ ಅತಿಯಾದ ಉಪ್ಪು ಹಾಗೂ ನಾರಿನ ಅಂಶವಿಲ್ಲದ ಆಹಾರ ಸೇವನೆ
* ಮಧ್ಯಪಾನ / ಧೂಮಪಾನ
* ನೋವು ನಿವಾರಕ ಔಷಧಿಗಳ ದೀರ್ಘಾವಧಿ ಪ್ರಯೋಗ
* ಚಟುವಟಿಕೆ ಇಲ್ಲದ ಅನಿಮಿಯತ ಜೀವನ ಶೈಲಿ
* ಅನುವಂಶಿಕ
* ವಯಸ್ಸಿನ ಅಂಶ
* ಟೈಪ್ 2ಮಧುಮೇಹ,ಹೃದಯ ಸಂಬಂಧಿ ಹಾಗೂ ಮೂತ್ರಪಿಂಡ ಕಾಯಿಲೆಗಳು ನರ ಮತ್ತು ಮಾನಸ ರೋಗ ಕಾಯಿಲೆಗಳು

ಲಕ್ಷಣಗಳು :-
*ತಲೆನೋವು
* ಮಂದದ್ರಷ್ಟಿ
* ತಲೆ ತಿರುಗುವಿಕೆ
* ಉಸಿರಾಟ ತೊಂದರೆ
* ಎದೆ ಮತ್ತು ತಲೆಯ ಭಾಗದಲ್ಲಿ ಬಡಿತದ ಭಾವನೆ
* ಅತಿಯಾದ ಆಯಾಸ ಹಾಗೂ ವಾಕರಿಕೆ

ರಕ್ತದ ಒತ್ತಡ ಪತ್ತೆ ಹಚ್ಚದೆ ಹೋದಲ್ಲಿ ಹೃದಯಘಾತ ಪಾರ್ಶ್ವ ವಾಯು ಮತ್ತು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.  ಆರೋಗ್ಯಕರ ಆಹಾರ ವ್ಯಾಯಾಮ ಮತ್ತು ಉತ್ತಮ ಒತ್ತಡ ನಿರ್ವಹಣೆಯ ಜೀವನ ಶೈಲಿ ಬದಲಾವಣೆಗಳು ಅಧಿಕ ರಕ್ತದ ಒತ್ತಡವನ್ನು ನಿಭಾಯಿಸಲು ಉತ್ತಮ ಮಾರ್ಗಗಳಾಗಿವೆ ಅಧಿಕ ರಕ್ತದೊತ್ತಡವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ ಔಷಧಿ ಮತ್ತು ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ನಿಯಂತ್ರಿಸಬಹುದು ಇದಕ್ಕೆ ಸಾಮಾನ್ಯವಾಗಿ ನಿಯಮಿತ ವೈದ್ಯಕೀಯ ಆರೈಕೆ ಅಗತ್ಯ.

ಆಯುರ್ವೇದ ಔಷಧಿ ಯಾದ ಸರ್ಪಗಂಧವು ರಕ್ತದೊತ್ತಡಕ್ಕೆ ಉತ್ತಮ ಚಿಕಿತ್ಸೆಯಾಗಿದೆ ಪಂಚಕರ್ಮ ಚಿಕಿತ್ಸೆ ಯಲ್ಲಿ ಒಂದಾದ ಶಿರೋದಾರವು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ ದಿನನಿತ್ಯವೂ ಯೋಗಾಸನ ವ್ಯಾಯಾಮ ಇವುಗಳಿಂದಲೂ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಬರಹ :
ಡಾ. ಜ್ಯೋತಿ ಕೆ, ಆಯುರ್ವೇದ ವೈದ್ಯರು, ಮಂಗಳೂರು, 94481 68053
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…

53 minutes ago

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

1 hour ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

2 hours ago

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

1 day ago