Opinion

#Neuropathy |ನರಗಳ ಅಸ್ವಸ್ಥತೆ ಸಂಭವಿಸಿದ್ರೆ ನರರೋಗ ಖಂಡಿತಾ | ಇದಕ್ಕೆ ಆಯುರ್ವೇದ ಪರಿಹಾರ ಹೇಗೆ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನರಮಂಡಲವು ನರ ಕೋಶಗಳ ಜಾಲವಾಗಿದ್ದು, ಅದು ದೇಹದ ವಿವಿಧ ಭಾಗಗಳಿಗೆ ಸಂಕೇತಗಳನ್ನು ರವಾನಿಸುತ್ತದೆ. ಇದು ವ್ಯಕ್ತಿಯ ಆಹಾರ ಆರೋಗ್ಯ ಮತ್ತು ಬಾಹ್ಯ ಪ್ರಚೋದಕಗಳಿಗೆ ಪ್ರತಿಕ್ರಿಯೆಯ ಸಂಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ. ವಿವಿಧ ಕಾರಣಗಳಿಂದ ನರಗಳಿಗೆ ಹಾನಿ ಉಂಟಾಗಿ ನರಗಳ ಅಸ್ವಸ್ಥತೆ ಸಂಭವಿಸುವ ಸ್ಥಿತಿಯನ್ನು ನರರೋಗಗಳೆಂದು ಕರೆಯುತ್ತೇವೆ.

Advertisement
Advertisement

ವಾತದೋಷದ ಅಸಮತೋಲನದ ಕಾರ್ಯವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ದುರ್ಬಲಗೊಳಿಸುವುದು. ಇದರ ಪರಿಣಾಮವಾಗಿ ಟಾಕ್ಸಿನ್ ಸಂಗ್ರಹವಾಗಿ ಸ್ವಯಂಪ್ರತಿರಕ್ಷಣಾ ಪ್ರತಿಕ್ರಿಯೆ(Autoimmune responses )ನರಮಂಡಲ ಸಂಕೋಚನ(Nerveroot Compression ), ಸಯಾಟಿಕ(Sciatica )ಉರಿಯುತ (Inflamation ),ಅಜೀರ್ಣ, ಖಿನ್ನತೆ, ನಿದ್ರಾಹೀನತೆ, ಬ್ರಮೆ,ಒತ್ತಡ, ಆಯಾಸ, ನರ ಅಂಗಾಂಶಗಳಿಗೆ ಹಾನಿ, ಕಂಪವಾತ (parkinsonism), ಅಲ್ಜಿಮೇರ್ಸ್, ಪಾರ್ಶ್ಶ್ವವಾಯು (Paralysis)ಇತ್ಯಾದಿ ಪರಿಸ್ಥಿತಿಗಳು ಉಂಟಾಗುವುದು.

ನರರೋಗಗಳಿಗೆ ಸಾಮಾನ್ಯ ಕಾರಣ

– ಅತಿಯಾದ ಮದ್ಯಪಾನ
– ವಿಟಮಿನ್ ಬಿ ಕೊರತೆ…. B1,B6 B12 ಇವುಗಳ ಜೊತೆಗೆ ವಿಟಮಿನ್ ಇ ಮತ್ತು ನಿಯಾಸಿನ್ ಕೊರತೆಯೂ ನರಮಂಡಲದ ಮೇಲೆ ಪರಿಣಾಮವನ್ನು ಬೀರುತ್ತದೆ
– ರಾಸಾಯನಿಕ ಹಾಗೂ ವಿಷ ಪದಾರ್ಥಗಳ ಬಳಕೆ ( Chemicals&Poisons )
– ಕೆಲವು ಔಷಧಿಗಳ ಅಡ್ಡ ಪರಿಣಾಮ
– ಯಾವುದೇ ರೀತಿಯ ನರಗಳಿಗೆ ಉಂಟಾದ ಆಘಾತ ಅಥವಾ ಒತ್ತಡ
– ಆಟೋ ಇಮ್ಯೂನ್ ರೋಗಗಳು (Rheumatoid Arthritis, SLE,/Lupus, GBS.-Gulian Bary Syndrome etc)
– ಮೂಳೆ ಮತ್ತು ಮಾಂಸ ಖಂಡಗಳ ಆಸ್ವಸ್ಥತೆಗಳು
– ಕಿಡ್ನಿ ರೋಗಗಳು ಯಕೃತ್ ರೋಗಗಳು ಹೃದಯ ರೋಗಗಳು ಇತ್ಯಾದಿ
ಈ ಎಲ್ಲಾ ಪರಿಸ್ಥಿತಿಗಳಲ್ಲಿ ಸಾಮಾನ್ಯವಾಗಿ ನರ ಕವಚಗಳ ಹಾನಿ, ಮೈಲಿನ್ ಪೊರೆಗೆ ರಕ್ತ ಪೂರೈಸಲು ತೊಂದರೆ ಉಂಟಾಗುವುದರಿಂದ ಮತ್ತು ಕಡಿಮೆ ಆಮ್ಲಜನಕದ ಪೂರೈಕೆಯು ಕಾರಣವಾಗಿರುತ್ತದೆ.

ನರರೋಗಗಳ ಸಾಮಾನ್ಯ ಲಕ್ಷಣಗಳು :-
– ಸ್ಪರ್ಶಕ್ಕೆ ಅತಿ ಸೂಕ್ಷ್ಮತೆ
– ಪೀಡಿತ ನರ ಭಾಗಗಳಲ್ಲಿ ನೋವು,
– ಜುಮ್ಮೆನಿಸುವಿಕೆ
–  ಪೀಡಿತ ಸ್ನಾಯುಗಳಲ್ಲಿ ದೌರ್ಬಲ್ಯ ಹಾಗೂ ಬಲ ಕಡಿಮೆ ಆಗುವುದು
– ರೋಗಿಗಳಿಗೆ ಅತಿಯಾದ ಶಾಖವನ್ನು ಸಹಿಸಲು ಕಷ್ಟವಾಗುವುದು
– ರಕ್ತದೊತ್ತಡದಲ್ಲಿ ಬದಲಾವಣೆ
**ತಲೆ ತಿರುಗುವಿಕೆ /ತುಂಬಾ ಬೇವರುವುದು
– ಕರುಳು,ಮೂತ್ರಕೋಶ, ಮತ್ತು ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾಗುವುದು.

Advertisement

ನರರೋಗಳ್ಳಲ್ಲಿ ಸಾಮಾನ್ಯವಾಗಿ ಎರಡು ವಿಧವನ್ನು ಕಾಣಬಹುದು..
1. Mononeuropathy…. ನರರೋಗವು ಕೇವಲ ಒಂದು ನರದಲ್ಲಿ ಸಂಭವಿಸಿದಾಗ ಈ ಸ್ಥಿತಿಯನ್ನು ಕಾಣಬಹುದು eg.. carpel tunnel syndrome, sciatica..
2.Polyneuropathy :- ಒಟ್ಟಾರೆಯಾಗಿ ಅನೇಕ ನರಗಳಲ್ಲಿ ನರರೋಗ ಬದಲಾವಣೆಗಳ ಸ್ಥಿತಿ ಆಗಿರುತ್ತದೆ eg.. Peripheral neuropathy, Diabetic Neuropathy.

ಆಯುರ್ವೇದ ಪರಿಹಾರ:
– ಬಲಪಡಿಸಲು ನೈಸರ್ಗಿಕ ಪರಿಹಾರ ಕಂಡುಕೊಳ್ಳುವುದು ಉತ್ತಮ ನರಗಳ ನೋವಿಗೆ ಹಲವಾರು *ಗಿಡಮೂಲಿಕೆಗಳಿಂದ ತಯಾರಿಸಿದ ಔಷದಗಳನ್ನು ಬಳಕೆ ಮಾಡಲಾಗುತ್ತದೆ
– ಗಿಡಮೂಲಿಕೆಗಳಿಂದ ತಯಾರಿಸಿದ ತೈಲಗಳಿಂದ ಅಭ್ಯಂಗ ಮಾಡುವುದರಿಂದ ನರಗಳ ಆರೋಗ್ಯವನ್ನು ಸುಧಾರಿಸಬಹುದು ಇದರಿಂದ ವಾತವನ್ನು ಸಮತೋಲನಗೊಳಿಸುವ ಮೂಲಕ ಸಂವೇದನೆಯನ್ನು ಸುಧಾರಿಸಿ ಮರಗಟ್ಟುವಿಕೆಯನ್ನು ಕಡಿಮೆ ಮಾಡಬಹುದು
ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿ ನರಗಳ ಅರೋಗ್ಯಕ್ಕಾಗಿ ಶಿರೋದಾರ, ಶಿರೋಬಸ್ತಿ ಚಿಕಿತ್ಸೆ
ಸಂಕೀರ್ಣ ಮತ್ತು ದೀರ್ಘಕಾಲದ ನರರೋಗ ಪ್ರಕರಣಗಳಿಗೆ ಪಂಚಕರ್ಮ ಚಿಕಿತ್ಸೆಯು ಸಹಾಯ ಮಾಡುತ್ತದೆ.ಸ್ನೇಹನ ಸ್ವೇದನ ಜೊತೆಗೆ ಬಸ್ತಿ ಚಿಕಿತ್ಸೆ ಮುಖ್ಯವಾಗಿ ನರ ರೋಗಗಳಲ್ಲಿ ಅತ್ಯುತ್ತಮವಾದ ಚಿಕಿತ್ಸೆ ಆಗಿದೆ.ಆದರೆ ನಿರ್ದಿಷ್ಟ ದೋಷಗಳ ಉಲ್ಬಣದಲ್ಲಿ  ವಿರೇಚನ ವಮನ ನಸ್ಯ ಬಳಸಲಾಗುವುದು
– ನರಗಳ ಪ್ರಚೋದನೆಗೆ ಸಹಾಯಕಾರಿಯಾಗುವಂತ ಗಿಡಮೂಲಿಕೆಗಳ ಬಳಕೆ ಉದಾಹರಣೆಗೆ ಅಶ್ವಗಂಧ,,ಬಲಾ, ರಾಸ್ನಾ, ಎರಂಡ, ಪ್ರಸಾರಣಿ, ಗುಡುಚಿ  ಮೊದಲಾದವುಗಳು. ಹಾಗೂ ನರಗಳ ಆಸ್ವಸ್ಥತೆಯನ್ನು ಹೋಗಲಾಡಿಸುವಂತ ಆಯುರ್ವೇದ ಔಷಧಗಳ ಉಪಯೋಗ ಇವುಗಳಿಂದ ನರರೋಗ ನಿವಾರಿಸಬಹುದು.

ಯೋಗ
ದೈನಂದಿನ ಯೋಗಭ್ಯಾಸವು ನಮ್ಮ ನರಗಳನ್ನು ಆರೋಗ್ಯವಾಗಿಡಲು ಸಹಾಯಮಾಡುತ್ತದೆ.ಯೋಗವು ದೇಹದಲ್ಲಿ ರಕ್ತ ಸಂಚಾರವನ್ನು ಸುಗಮವಾಗಿಸಲು ಸಹಾಯಕಾರಿಯಾಗುತ್ತದೆ. ಇದರಿಂದ ನರಗಳನ್ನು ಬಲಪಡಿಸುತ್ತದೆ. ನರರೋಗಗಳಲ್ಲಿ ಸಹಾಯಕಾರಿಯಾಗುವ ಕೆಲವು ಯೋಗಾಸನಗಳು :- ವಿಪರಿತಕರಣಿ, ಪಶ್ಚಿಮೊತ್ತಾಸನ, ಸೇತುಬಂಧನ ,ಸರ್ವಾಂಗಾಸನ ಬದ್ಧ ಕೋನ ಆಸನ, ಬಾಲಾಸನ,, ಸೂರ್ಯ ನಮಸ್ಕಾರ,  ಪ್ರಾಣಾಯಾಮ ಧ್ಯಾನ

ಫಿಜಿಯೋತೆರಪಿ( Pysiotherapy)

ದೀರ್ಘ ಕಾಲದವರೆಗೆ ಗಮನಿಸದೇ ಇದ್ದಾಗ ನರಸಂಬಂಧಿತ ಸಮಸ್ಯೆಗಳು ದೇಹದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದು ಕೆಲವೊಮ್ಮೆ ಅಂಗವೈಕಲ್ಯ, ಸಂವೇದನೆಯ ನಷ್ಟ ಉಂಟು ಮಾಡುವುದು ಹಾಗೂ ದೇಹವನ್ನು ಸಂಪೂರ್ಣ ದುರ್ಬಲಗೊಳಿಸುವ ಸ್ಥಿತಿಯನ್ನು ಉಂಟುಮಾಡುವುದು. ಆದ ಕಾರಣ ನರದ ಸಮಸ್ಯೆಯನ್ನು ನಿರ್ಲಕ್ಷಿಸದೆ ಆರಂಭದಲ್ಲಿ ಚಿಕಿತ್ಸೆ ನೀಡುವುದು ಉತ್ತಮ

Advertisement

ಆಯುರ್ವೇದ ಔಷಧಿಗಳ ಜೊತೆಗೆ ಉತ್ತಮ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ,ಪಂಚಕರ್ಮ ಚಿಕಿತ್ಸೆ, ಯೋಗ ಚಿಕಿತ್ಸೆ ಪಿಜಿಯೋತೆರಪಿ(Pysiotherapy) ಇವುಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದರಿಂದ ನರ ರೋಗವನ್ನು ತಡೆಗಟ್ಟಬಹುದು.

ಬರಹ :
– Dr Jyothi k Laxmi Clinic, Mangalore, 94481 68053
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಉತ್ತಮ ಮಳೆಯಿಂದ ಹಸಿರಾದ ವನ್ಯಜೀವಿ ತಾಣ | ಚಾಮರಾಜನಗರ ಜಿಲ್ಲೆಯ ಹಲವೆಡೆ ಹಸಿರು ಸಂಭ್ರಮ

ಉತ್ತಮ ಮಳೆಗೆ ಅರಣ್ಯ ಪ್ರದೇಶವೆಲ್ಲ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ, ಮಳೆ ಹನಿಗಳಿಗೆ ಮೈಯೊಡ್ಡಿದ…

50 minutes ago

50 ಕೋಟಿಗೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿದ್ದಾರೆ , ಜಿಡಿಪಿಗೆ ಕೃಷಿಯ ಕೊಡುಗೆ ಶೇಕಡಾ 18

ರಾಜ್ಯದ ಅಡಿಕೆ ಬೆಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಇಲ್ಲ.…

1 hour ago

ಅಡಿಕೆ ಹಾಳೆ ರಫ್ತು ನಿರ್ಬಂಧದ ಸಂಕಷ್ಟದಿಂದ ಪಾರಾಗಲು ಕೈಗೊಳ್ಳಬಹುದಾದ ಪರಿಹಾರೋಪಾಯಗಳು

ನಿಷೇಧವು ಶಾಶ್ವತವಲ್ಲ, ಮತ್ತು ವೈಜ್ಞಾನಿಕ, ತಾಂತ್ರಿಕ, ಮತ್ತು ವಾಣಿಜ್ಯ ರಾಜತಾಂತ್ರಿಕ ಮಾರ್ಗದಿಂದ ಈ…

2 hours ago

ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?

ಆಹಾರ ಧಾನ್ಯಗಳನ್ನು ಬೆಳೆಸುತ್ತಿದ್ದ ಕೃಷಿಕರು ಅಡಿಕೆ ಕೃಷಿಗೆ ಪರಿವರ್ತನೆ ಆಗಿ ಆಹಾರಕ್ಕಾಗಿ ಪರಾವಲಂಬಿಗಳು…

3 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿಗೆ ಬೇಕಾಗುವ ಸಾಮಗ್ರಿಗಳು: ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ…

4 hours ago

ಗುರು ಮತ್ತು ಬುಧ ದಶಾಂಕ ಯೋಗ | ಉದ್ಯೋಗದ ಮೇಲೆ ಜಾಕ್ಪಾಟ್ ದೊರೆಯಲಿದೆ

ಹೆಚ್ಚಿನ ಮಾಹಿತಿಗಾಗಿರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

6 hours ago