ವಿಪರೀತ ಮಳೆಎರಡು ವರ್ಷ.., ವಿಪರೀತ ಬಿಸಿಲು…! ಮತ್ತೆರಡು ವರ್ಷ.., ವಿಪರೀತ ವಿಷ ಪೋಷಣೆಗೊಳ್ಳುತ್ತಿರುವ ಜಾನುವಾರುಗಳು.., ಉತ್ತಮವಾದ ತಿಪ್ಪೆ ಗೊಬ್ಬರಕ್ಕೆ ಹಾಹಾಕಾರ… ಇಷ್ಟೇ ಸಾಕು ಭೂಮಿ ಬಂಜರಾಗಲು. ನಗರ ಪ್ರದೇಶಕ್ಕೆ ಅರ್ಥವಾಗದ, ಗ್ರಾಮೀಣ ಭಾಗದ ತೀರಾ ಸಂಕಟ ಇದು. ಅಪ್ಡೇಟ್ ಯುಗದಲ್ಲಿ ಗ್ರಾಮೀಣ ಭಾಗ ಔಟ್‌ಡೇಟ್ ಎಂದು ತಿಳಿದುಕೊಳ್ಳುವ ಸಮಯದಲ್ಲಿ ನೀರು, ಗಾಳಿ, ಮಲಿನಗೊಳ್ಳುತ್ತಿದೆ. ಬಂಜರು ಭೂಮಿಯಲ್ಲಿ ಬಂಜರು ಬೆಳೆಯಲ್ಲದೆ ಮತ್ತೇನು ನಿರೀಕ್ಷಿಸಲು ಸಾಧ್ಯ.? ನಿತ್ಯ ವಿಷವುಣ್ಣುವ ಮಕ್ಕಳ ದೇಹ ಸದೃಢವಾಗುವುದಾದರೂ ಹೇಗೆ..? ಅವರ ಆಲೋಚನಾ ಶಕ್ತಿ ಉತ್ತನ್ನೊನ್ನತ ಸ್ಥಾನ ಪಡೆಯುವುದಾದರೂ ಹೇಗೆ..?. ಅತ್ಯಂತ ಗಂಭೀರವಾದ ಸಂಗತಿಯೊಂದು ಗ್ರಾಮೀಣ ಭಾಗದಲ್ಲಿ ತಲೆಎತ್ತುತ್ತಿದೆ. ಈ ಬಗ್ಗೆ ಚಿಂತನಾರ್ಹ ಚರ್ಚೆಯೊಂದು ಇಲ್ಲಿದೆ…
ಇಷ್ಟಕ್ಕೂ ಇದು ಆದದ್ದಾದರೂ ಹೇಗೆ ? : ಉತ್ತರ ಸ್ಪಷ್ಟ. ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರವಲ್ಲದೆ ಮತ್ತೇನು ಇಲ್ಲ..
ಪ್ರಪಂಚ ಏನಾದರೇನು ?. ತಮಗೆ ಮಾತ್ರ ಕೋಟ್ಯಾನು ಕೋಟಿಗಟ್ಟಲೆ ಹಣ ಸಿಕ್ಕಿದ್ರೆ ಸಾಕು.! ತಾನು ಪ್ರಪಂಚವನ್ನು ಆಳಬೇಕು.? ತನ್ನ ಹತೋಟಿಯಲ್ಲಿ ಇಡೀ ಭೂಮಂಡಲ ಇರಬೇಕು?. ಜನರು ತಾನು ಕೊಟ್ಟ ಆಹಾರವನ್ನೇ ಸೇವಿಸಬೇಕು.? ಈ ಎಲ್ಲಾ ಆಲೋಚನೆಯ ವೇಗದ ಬಿರುಸಿಗೆ ದೇಶಗಳನ್ನು, ಬಡ ಬಗ್ಗರನ್ನು ಆಪೋಶಣ ತಗೆದುಕೊಳ್ಳುತ್ತಿವೆ ಈ ಬಹುರಾಷ್ಟ್ರೀಯ ಕಂಪನಿಗಳು. ಕೃಷಿ ಹಾಳಾದರೆ ಭೂಮಿ ಹಾಳು., ಭೂಮಿ ಹಾಳಾದರೆ ಆರೋಗ್ಯ ಹಾಳು., ಆರೋಗ್ಯವೇ ಹಾಳಾದರೆ ಚಿಂತನೆ ಹಾಳು.. ಈ ಹಾಳಾದ ಜನ ಮುಂದೆ ಜೀತದಾಳುಗಳಷ್ಟೇ..!
ವಿಪರ್ಯಾಸವೆಂದರೆ, ಅಂದು ‘ಹಸಿರುಕ್ರಾಂತಿ’ ಎಂಬ ಸುಂದರ ಹೆಸರನ್ನಿಟ್ಟು ಕೃಷಿಯ ದಿಕ್ಕು, ಆಯಾಮವನ್ನು ಬದಲಿಸಿದರು.., ಇಂದು ‘ತಂತ್ರಜ್ಞಾನ’ ವೆಂಬ ಹೆಸರಿನಲ್ಲಿ ಪ್ರಪಂಚದ ದಿಕ್ಕು ದೆಸೆಯನ್ನೇ ಬದಲಿಸಲು ಹೊರಟಿದ್ದಾರೆ..! ಹವಾಮಾನ ವೈಪರೀತ್ಯ, ಮರುಭೂಮೀಕರಣ, ಅಪೌಷ್ಟಿಕತೆ, ಬಡತನ… ಹೀಗೆ ಹಲವು ಸಮಸ್ಯೆಗಳಿಗೆ ಅವರ ಉತ್ತರ ನೋಡಿ : ಕುಲಾಂತರಿ ಕೃಷಿ. ಹೊಸ ಹೊಸ ವಿಷಪೂರಿತ ಪದಾರ್ಥ ದಿನನಿತ್ಯ ಮಾರುಕಟ್ಟೆಯಲ್ಲಿ, ಡ್ರೋನ್ಸ್, ರೊಬೊಟಿಕ್ಸ್, ಫೋರ್ಟಿಫಿಕೇಷನ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ …. ಇದೆಲ್ಲಾ ಕೃಷಿ ಬೆಳವಣಿಗೆಗೆ ಇಲ್ಲ, ಕೃಷಿ ನಾಶಕ್ಕೇ ಬಳಕೆಯಾಗುವ ಹಂತದಲ್ಲಿದೆಯೋ ಎಂಬ ಭಾವನೆಯೇ ಹೆಚ್ಚಾಗಿದೆ.
ಒಮ್ಮೆ ನಮ್ಮ ಹಿಂದಿನ ಪೂರ್ವಜರ ಕೃಷಿ ಬಗ್ಗೆ ಯೋಚಿಸಿ : ಎಮ್ಮೆ-ಧನ-ಕುರಿ-ಕೋಳಿ ಇತರೆ ಪ್ರಾಣಿ ಪಕ್ಷಿಗಳ ಸಗಣಿ, ಹಿಕ್ಕೆಗಳಿಂದ, ಭೂಮಿಗೇ ಗೊಬ್ಬರದ ಪೂರೈಕೆಯಿಂದ..ನಾಟಿ ಬೀಜಗಳ ಸಹಾಯದಿಂದ.. ಅಲ್ಲೇ ಬೆಳೆದ ಸಹಜ ಸ್ಥಿತಿಯ ಆಹಾರದಿಂದ..ಕೃಷಿಯ ಲಗೋಡು ಕಮ್ಮಿ ಮಾಡುವ ಪದ್ಧತಿಗಳಿಂದ.. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಹುಡುಕಬೇಕೋ..? ಅಥವಾ ಕಂಪನಿಗಳ ಮಾರ್ಗದರ್ಶನದಲ್ಲಿ, ಆಗಲೇ ತಿಳಿಸಿದಂತೆ, ಕೋಟಿ ಕೋಟಿಗಟ್ಟಲೆ ಹಣ ಮಾಡುತ್ತೇವೆ ಎಂಬ ಹುಚ್ಚು ಕಲ್ಪನೆಗೂ.. ಬಡವರ ಸಂಕಷ್ಟ ಅವರಿಗೆ ಬಾಡೂಟ.!!!
ಈ ಡ್ರೋನ್ – ರೊಬೊಟಿಕ್ಸ್ – ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಉಪಯೋಗಿಸುವುದು ಅಂದರೆ., ಕೃಷಿ ಕಾರ್ಮಿಕರು ಹಾಗೂ ಸಣ್ಣ ಇಡುವಳಿದಾರರನ್ನು ಕಿತ್ತೊಗೆಯುವುದು ಎಂದು ಅರ್ಥ..! ರೈತರನ್ನು ಇನ್ನೆಂದು ಹೊರಬರಲಾರದ ಸಾಲಭಾದೆಗೆ ತಳ್ಳುವುದು ಎಂದರ್ಥ..! ಈಗಾಗಲೇ ಬಂಜರುಗೊಂಡಿರುವ ಭೂಮಿಯನ್ನು ಮತ್ತಷ್ಟು ಹಾಳುಗೆಡವುದು ಎಂದರ್ಥ..! ಈಗಾಗಲೇ ರೋಗ ರುಜಿನಗಳಿಗೆ ತುತ್ತಾಗಿರುವ ಮಕ್ಕಳನ್ನು ಇನ್ನಷ್ಟು, ಮತ್ತಷ್ಟು ಕಾಯಿಲೆಗಳಿಗೆ ದೂಡುವುದೆಂದರ್ಥ..!
ದೊಡ್ಡ ದುರಂತವೆಂದರೇ, ಈ ಎಲ್ಲಾ ಕಂಪನಿ ಸರಕುಗಳನ್ನು ಮಾರಾಟ ಮಾಡಲು ನಮ್ಮದೇ ಸರ್ಕಾರ ಸಾಲ, ಸಬ್ಸಿಡಿ ಕೊಡುತ್ತದೆ. ಎಫ್ ಪಿ ಓ (FPO) ಗುಂಪುಗಳಿಗೆ ಪ್ರಚೋದನೆ ನೀಡುತ್ತದೆ, ಹೊಸ ಹೊಸ ಭಾಷೆ ಉಪಯೋಗಿಸುವ ಮೂಲಕ ರೈತರಿಗೆ ತಾತ್ಕಾಲಿಕ ಉತ್ತರ ನೀಡುತ್ತಾ, ಮೀನಿನ ಗಾಳಕ್ಕೆ ಹಾಕುವ ಹುಳುವಿನಂತೆ ನಮನ್ನು ಏನೂ ಮಾಡದ ಸ್ಥಿತಿಗೆ ಕರೆದೊಯ್ಯುತ್ತಿದೆ..! ಇನ್ನಷ್ಟು ವರ್ಷದಲ್ಲಿ ಹೊಸ ಮಾರ್ಪಾಡುಗಳನ್ನು ಮಾಡಲು ಸಜ್ಜಾಗುತ್ತಿದ್ದಾರೆ..
ತಂತ್ರಜ್ಞಾನಗಳು ಕೃಷಿಯ ಬೆಳವಣಿಗೆಗೆ ಅಗತ್ಯ ಇದೆ. ಆದರೆ ಕೃಷಿಯ ನಿಜವಾದ ಬೆಳವಣಿಗೆಗೆ ಈ ತಂತ್ರಜ್ಞಾನಗಳು ಬಳಕೆಯಾಗಬೇಕು. ಅದರ ಹೊರತಾದ ತಂತ್ರಜ್ಞಾನ ಬೆಳವಣಿಗೆ ಕೃಷಿಗೆ ಅಪಾಯವೂ ಇದೆ.
ಎಚ್ಚರಿಕೆ, ಕೊರೊನಾ ಒಂದು ಪ್ರಯೋಗವಷ್ಟೇ, ಹಾಗಾದ್ರೆ ನಮ್ಮ ದೇಶದ ಕತೆ ? ಈಗ ನಮ್ಮ ಮುಂದೆ ಎರಡು ಮಾರ್ಗಗಳಿವೆ. ನಾವು, ನಮ್ಮ ಮಕ್ಕಳು ಬದುಕುಳಿಯುವ ಸಹಜ ಸತ್ಯ ಮತ್ತು ನಮ್ಮ ದೇಶದ ಪರಂಪರೆಯ ಶಾಂತಿಯ ಮಾರ್ಗ.. ಅಥವಾ ಕಂಪನಿಗಳ ಮೋಸದ, ಕೃತಕ, ಸುಳ್ಳಿನ ಮತ್ತು ವಿದೇಶದ ಅಶಾಂತಿಯ ಮಾರ್ಗ. ಆಯ್ಕೆ ನಮ್ಮ ಕೈಲಿದೆ…!
Whats APP ಕೃಪೆ
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…