ಲಕ್ಕಿ
ಲಕ್ಕಿ ಬೀಳು ಜಾಗದಲ್ಲಿ ಅಥವಾ ಬೇಲಿ ಸಾಲಿನಲ್ಲಿ ಹೇರಳವಾಗಿ ಬೆಳೆಯುವ ಸಸ್ಯ. ಹೆಚ್ಚಿನ ನಿಗಾ ಏನು ಬೇಡದ ಹೆಚ್ಚು ಉಪಯುಕ್ತವಾದ ಗಿಡ . ಇದರಲ್ಲಿ ಎರಡು ವಿಧ ಬಿಳಿ ಮತ್ತು ಕಪ್ಪು. ಕಪ್ಪು ವಾಮಾಚಾರ ಮುಂತಾದವುಗಳಲ್ಲಿ ಬಳಕೆಯಾದರೆ, ಬಿಳಿ ಸಾಧಾರಣವಾಗಿ ಎಲ್ಲಾ ಕಡೆ ಬೆಳೆಯುವ ಮತ್ತು ಔಷಧೀಯ ಗುಣಗಳನ್ನು ಹೊಂದಿದೆ .
ನಮ್ಮ ಶಾಲಾ ದಿನಗಳಲ್ಲಿ ಲಕ್ಕಿ ಕೋಲು ಕ್ಲಾಸಿಗೆ ಎಂಟ್ರಿ ಆಗಿದೆ ಎಂದರೆ ಯಾರಿಗೋ ಗ್ರಹಚಾರ ಕಾಡಿದೆ ಎಂದು ಅರ್ಥ. ತುದಿಯವರೆಗೆ ಜಳುಕುತ್ತದೆ, ಆದರೆ ಮುರಿಯುವುದಿಲ್ಲ ಅಷ್ಟು ಗಟ್ಟಿ.
ಇದರ ಕಾಯಿ, ಬೇರು, ಎಲೆ, ಹೂಗಳನ್ನು ಔಷಧಿ ಆಗಿ ಉಪಯೋಗಿಸುತ್ತಾರೆ. ಬಿಳಿಯಲ್ಲೂ ಎರಡು ವಿಧ ಇದೆ. ಒಂದು ಬಿಳಿ ಹೂ ಬಿಡುವ ಸುಂದರಿ, ಮತ್ತೊಂದು ನೀಲಿ ಹೂವು ಬಿಡುವ ಬೆಡಗಿ. ಆದರೆ ಔಷಧೀಯ ಗುಣ ಒಂದೇ.
1) ಬಿಳಿ ಲಕ್ಕಿ ಎಲೆಗಳ ಕಷಾಯ ಸೇವನೆಯಿಂದ ಕೈ ಕಾಲು ಉರಿ ಗುಣವಾಗುತ್ತದೆ.
2) ಎಲೆಗಳನ್ನು ಬಿಸಿ ಮಾಡಿ ನೋವಿರುವ ಜಾಗಕ್ಕೆ ಕಟ್ಟುವುದರಿಂದ ನೋವು ನಿವಾರಣೆಯಾಗುತ್ತದೆ ಸಂಧಿವಾತಕ್ಕೆ ಒಳ್ಳೆಯ ಔಷದ.
3) ಎಲೆಗಳನ್ನು ಕಷಾಯ ಮಾಡಿ ಕುಡಿಯುವುದರಿಂದ ಜ್ವರ ನಿವಾರಣೆ ಆಗುತ್ತದೆ.
4) ಎಲೆಗಳನ್ನು ತುಪ್ಪದಲ್ಲಿ ಹುರಿದು ಕರಕು ಮಾಡಿ ನುಣ್ಣನೆಯ ಪುಡಿ ಮಾಡಿ ಲೇಪಿಸುವುದರಿಂದ ಸರ್ಪ ಸುತ್ತು ಗುಣವಾಗುತ್ತದೆ.
5) ಎಲೆಯರಸಕ್ಕೆ ಸಾಸಿವೆ ಎಣ್ಣೆ ಸೇರಿಸಿ ಸೇವಿಸುವುದರಿಂದ ಸಂಗ್ರಹಿತ ಕಫ ಹೊರಗೆ ಬರುತ್ತದೆ, ಮಾಹಿತಿ ಇದ್ದವರಲ್ಲಿ ಮಾತ್ರ ಮಾಡಿಕೊಳ್ಳಿ.
6) ಲಕ್ಕಿ ಸೊಪ್ಪನ್ನು ಹರಳೆಣ್ಣೆಯಲ್ಲಿ ಕುಟ್ಟಿ ಬೆಂಬೂದಿಯಲ್ಲಿ ಇಟ್ಟು ಪಕ್ವ ಮಾಡಿ ಅರೆದು ಕುರುವಿಗೆ ಕಟ್ಟುವುದರಿಂದ ಒಡೆದು ಗುಣವಾಗುತ್ತದೆ.
7) ಲಕ್ಕಿ ಕಷಾಯದಲ್ಲಿ ತಲೆತೊಳಿಯುವುದರಿಂದ ತಲೆಯ ಹುಣ್ಣು ಕುರು ಗುಣವಾಗುತ್ತದೆ.
8) ಲೆಕ್ಕಿ ಸೊಪ್ಪಿನ ರಸದೊಂದಿಗೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ಕೆಮ್ಮು ಗುಣವಾಗುತ್ತದೆ.
9) ಲಕ್ಕಿ ಸೊಪ್ಪಿನಿಂದ ಹದ ವರಿತು ಮಾಡಿದ ಔಷಧಿಯಿಂದ ಅಪಸ್ಮಾರ ಗುಣವಾಗುತ್ತದೆ.
10) ಲಕ್ಕಿ ಚಿಗುರನ್ನು ನೀರಿನಲ್ಲಿ ಬೇಯಿಸಿ ಮಜ್ಜಿಗೆಯಲ್ಲಿ ಅರೆದು ಸೇವಿಸುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ.
11) ಲಕ್ಕಿ ಸೊಪ್ಪು ಮತ್ತು ಆಡು ಮುಟ್ಟದ ಬಳ್ಳಿ ಸೇರಿಸಿ ಮಾಡುವ ಔಷಧಿ ತಲೆದೂಗುವ ಕಾಯಿಲೆಯನ್ನು ಗುಣಪಡಿಸುತ್ತದೆ.
12) ಮೂಳೆ ಮುರಿತದ ಜಾಗದಲ್ಲಿ ಪಟ್ಟು ತೆಗೆದ ನಂತರ ಲಕ್ಕಿ ಸೊಪ್ಪು ಕಾಳುಮೆಣಸು ಅರೆದು ಹಚ್ಚುವುದರಿಂದ ನೋವು ನಿವಾರಣೆ ಆಗುತ್ತದೆ.
13) ಬೇರನ್ನು ಗೋಮೂತ್ರದಲ್ಲಿ ತೈದು ಹಚ್ಚುವುದರಿಂದ ಚರ್ಮರೋಗ ಗುಣವಾಗುತ್ತದೆ.
14) ಹೊಟ್ಟೆಗೆ ತೆಗೆದುಕೊಳ್ಳುವಾಗ ಎಚ್ಚರಿಕೆ ಇರಲಿ ಇದು ಹೆಚ್ಚು ಉಷ್ಣ.
🥢 ಸುಮನಾ ಮಳಲಗದ್ದೆ 9980182883.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…