ಅಶ್ವಗಂಧ (Ashwaganda) ಎಂಬುದು ಸಂಸ್ಕೃತ ಪದ. ಅಶ್ವ ಎಂದರೆ ಕುದುರೆ ಮತ್ತು ಗಂಧ ಎಂದರೆ ವಾಸನೆ. ಅಶ್ವಗಂಧದ ಬೇರುಗಳು ಕುದುರೆಯಂತ ವಾಸನೆಯನ್ನು ಹೊಂದಿದೆ ಮತ್ತು ಇದು ಕುದುರೆಯಂತೆ ಶಕ್ತಿಯನ್ನು ನೀಡುವುದರಿಂದ ಇದನ್ನು ಅಶ್ವಗಂಧ ಎನ್ನಲಾಗುತ್ತದೆ. ಆಯುರ್ವೇದದ ಪ್ರಕಾರ ಇದನ್ನು ರಸಾಯನ ಅಥವಾ ಟಾನಿಕ್ ಆಗಿ ಉಪಯೋಗಿಸಲಾಗುತ್ತದೆ.
ಅಶ್ವಗಂಧದ ಉಪಯೋಗ:
- ಅಶ್ವಗಂಧವು ಖನಿಜಗಳು ಕ್ಯಾಲ್ಸಿಯಂ#Calcium ಕಬ್ಬಿಣ#Iron ಮತ್ತು ವಿಟಮಿನ್#Vitamin C ಸಮೃದ್ದವಾಗಿ ಹೊಂದಿದೆ.
- ರೋಗನಿರೋಧಕ ಹಾಗೂ ಶಕ್ತಿ ವರ್ಧಕವಾಗಿದೆ
- ಸ್ನಾಯುಗಳ ಬೆಳವಣಿಗೆಗೆ ಸಹಾಯಕಾರಿ
- ಪ್ರೊಟೀನ್ ಹೇರಳವಾಗಿರುವುದರಿಂದ ಕೂದಲ ಬೆಳವಣಿಗೆಗೆ ಬಹಳ ಪ್ರಯೋಜನ ಕಾರಿಯಾಗಿದೆ
- ಪುರುಷರಲ್ಲಿ ಲೈಂಗಿಕ ಕಾರ್ಯ ಕ್ಷಮತೆ ಹೆಚ್ಚಿಸುವುದು. ಹಾಗೂ ಆರೋಗ್ಯವಂತ ವೀರ್ಯಣು ಉತ್ಪಾದನೆಯಲ್ಲಿ ಸಹಾಯಕಾರಿ.
- ಮಾನಸಿಕ ಒತ್ತಡ ಹಾಗೂ ಆತಂಕ ನಿರ್ವಹಣೆ.
- ಸಂಧಿವಾತಕ್ಕೆ -ಅಶ್ವಗಂಧ… ಮೊಣಕಾಲು ಕೀಲುನೋವಿನ ರೋಗಗಳಿಗೆ ಅಶ್ವಗಂಧದ ಬೇರು ಮತ್ತು ಎಲೆಗಳಿಂದ ತಯಾರಿಸಿದ ಔಷಧಗಳ ಸೇವನೆಯಿಂದ ಕೀಲು ನೋವು ಹಾಗೂ ಉರಿಯೂತ ಕಡಿಮೆ ಆಗುವುದು.
- ಹೃದಯದ ಆರೋಗ್ಯಕ್ಕೆ… ಅಶ್ವಗಂಧವು ಕೊಲೆಸ್ಟ್ರೋಲ್ ಹಾಗೂ ರಕ್ತದೊತ್ತಡವನ್ನು ಸಮಾತೋಲನದಲ್ಲಿ ಇಡಲು ಸಹಾಯಕಾರಿಯಾಗಿದ್ದು ಹೃದಯವನ್ನು ಕಾಪಾಡುವುದು
- ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ.
- ಚರ್ಮದ ಆರೋಗ್ಯದಲ್ಲಿ, ಥೈರಾಯಿಡ್ ಸಮಸ್ಯೆ ಹೀಗೆ ಹಲವು ಕಾಯಿಲೆಗಳಲ್ಲಿ ಅಶ್ವಗಂಧ ಬಹಳ ಪ್ರಯೋಜನ ಕಾರಿಯಾಗಿದೆ. ಅಶ್ವಗಂಧ ಸರ್ವರೋಗಹರ ಎನ್ನಲಾಗುತ್ತದೆ.
ಅನೇಕ ಕಾಯಿಲೆಗಳಲ್ಲಿ ಮನೆ ಮದ್ದಾಗಿ ಉಪಯೋಗಿಸಲಾಗುವ ಈ ಅಶ್ವಗಂಧವನ್ನು ಆಯುರ್ವೇದದ ಅನೇಕ ಔಷಧಿಗಳಲ್ಲಿ ಗಿಡಮೂಲಿಕೆಯಾಗಿ ಬಳಸಲಾಗುತ್ತದೆ. ನಿದ್ರಾಜನಕಗಳು, ಥೈರಾಯ್ಡ್ ಹಾರ್ಮೋನ್ ರಿಪ್ಲೇಸ್ಮೆಂಟ್ ತೆರಪಿ ಆತಂಕ ಮತ್ತು ಖಿನ್ನತೆಗೆ ನೀಡುವ ಔಷಧಿಗಳನ್ನು ತೆಗದು ಕೊಳ್ಳುವರಲ್ಲಿ ಅಶ್ವಗಂಧವನ್ನು ನೀಡುವಾಗ ಎಚ್ಚರಿಕೆ ವಹಿಸಬೇಕು. ಕೆಲವೊಂದು ಸಂಧರ್ಭದಲ್ಲಿ ತಲೆ ತಿರುಗುವಿಕೆ, ತಲೆನೋವು, ಕರುಳಿನ ಸಮಸ್ಯೆ ಹೀಗೆ ಕೆಲವೊಂದು ಅಡ್ಡ ಪರಿಣಾಮಗಳು ವರದಿಯಾಗಿವೆ. ಅಶ್ವಗಂಧವನ್ನು ಚೂರ್ಣ ಲೇಹ್ಯ capsules, tablets ರೀತಿಯಲ್ಲಿ ಸಾಮಾನ್ಯಗಿ ಬಳಸಲಾಗುತ್ತದೆ. ಅಶ್ವಗಂಧವನ್ನು ತೆಗೆದುಕೊಳ್ಳುವ ಮೊದಲು ಆಯುರ್ವೇದ ವೈದ್ಯರ ಸಲಹೆ ಪಡೆದು ಸರಿಯಾದ ರೀತಿಯಲ್ಲಿ ಉಪಯೋಗಿಸುವುದು ಉತ್ತಮ.