ಅಡಿಕೆ ಅಕ್ರಮ ಸಾಗಾ ಮುಂದುವರಿದಿದೆ. ಅದರಲ್ಲಿ ಇನ್ನೊಂದು ಪ್ರಕರಣ ಪತ್ತೆಯಾಗಿದೆ. ಈಶಾನ್ಯ ರಾಜ್ಯದ ಚಂಫೈ ಜಿಲ್ಲೆಯ ಝೋಟೆ ಪ್ರದೇಶದಲ್ಲಿ ಅಸ್ಸಾಂ ರೈಫಲ್ಸ್ ಸುಮಾರು 10,320 ಕೆಜಿ ಅಕ್ರಮ ಅಡಿಕೆಯನ್ನು ವಶಪಡಿಸಿಕೊಂಡಿದೆ. ಇದರ ಅಂದಾಜು ಮೌಲ್ಯ 72.24 ಲಕ್ಷ ರೂಪಾಯಿ ಎಂದು ಹೇಳಿದೆ. ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ಪ್ರಿವೆಂಟಿವ್ ಫೋರ್ಸ್ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದೆ.…..ಮುಂದೆ ಓದಿ….
ಬರ್ಮಾ ಅಡಿಕೆ ಕಳ್ಳಸಾಗಾಟ ಪ್ರಕರಣವು ಮತ್ತೆ ಬೆಳಕಿಗೆ ಬಂದಿದೆ. ಮಿಜೋರಾಂ , ಅಸ್ಸಾಂ ಮೂಲಕ ನಿರಂತರವಾಗಿ ಕಳ್ಳಸಾಗಾಣಿಕೆ ನಡೆಯುತ್ತಿದೆ. ಅಡಿಕೆ ಮಾತ್ರವಲ್ಲ ಸಿಗರೇಟು, ಗಾಂಜಾ, ಹೆರಾಯಿನ್‌ನಂತಹ ವಿವಿಧ ಮಾದಕ ವಸ್ತುಗಳು ಕೂಡಾ ಈಚೆಗೆ ಕಳ್ಳದಾರಿಯ ಮೂಲಕ ಭಾರತಕ್ಕೆ ಬರುತ್ತಿದೆ ಇದು ಕಳವಳಕ್ಕೂ ಕಾರಣವಾಗಿದೆ. ಅಸ್ಸಾಂ ರೈಫಲ್ಸ್ ಅಕ್ರಮ ಕಳ್ಳಸಾಗಣೆ ತಡೆಗೆ ತಮ್ಮ ಪ್ರಯತ್ನಗಳನ್ನು ಮುಂದುವರೆಸಿದೆ ಮತ್ತು ಮಿಜೋರಾಂನಲ್ಲಿ ನಿಷಿದ್ಧ ವಸ್ತುಗಳ ಕಳ್ಳಸಾಗಣೆಯ ಕಿಂಗ್‌ಪಿನ್‌ಗಳನ್ನು ಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ.
ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…
ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…
ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…
ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…
ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…
ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…