ವಿಪರೀತ ಬೀಳುತ್ತಿರುವ ಎಳೆ ಅಡಿಕೆ | ಮುಂದಿನ ವರ್ಷದ ಅಡಿಕೆ ಇಳುವರಿ ಮೇಲೆ ಹೊಡೆತ.. | ತಾಪಮಾನ ಕಾರಣ..?

June 22, 2024
10:51 AM
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಅಡಿಕೆ ತೋಟದಲ್ಲಿ ವಿಪರೀತವಾಗಿ ಎಳೆ ಅಡಿಕೆ ಬೀಳುತ್ತಿದೆ. ಮಳೆ ಬಿದ್ದು ಕೆಲವು ದಿನಗಳ ನಂತರ ಎಳೆ ಅಡಿಕೆ ಬೀಳಲು ಆರಂಭವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಅಡಿಕೆ ತೋಟದಲ್ಲಿ ವಿಪರೀತವಾಗಿ ಎಳೆ ಅಡಿಕೆ ಬೀಳುತ್ತಿದೆ. ಮಳೆ ಬಿದ್ದು ಕೆಲವು ದಿನಗಳ ನಂತರ ಎಳೆ ಅಡಿಕೆ ಬೀಳಲು ಆರಂಭವಾಗಿದೆ. ಈಗಲೂ ಹಲವು ತೋಟಗಳಲ್ಲಿ ಎಳೆ ಅಡಿಕೆ ಬೀಳುತ್ತಲಿದೆ. ಹೀಗಾಗಿ ಮುಂದಿನ ಫಸಲಿನ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಬಾರಿ ದಕ್ಷಿಣ ಕನ್ನಡ ಸೇರಿದಂತೆ ಕಾಸರಗೋಡು ಮತ್ತು ಆಸುಪಾಸಿನ ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರಿಗೆ ಹೊಡೆತ ಬೀಳುತ್ತಿದೆ. ಹವಾಮಾನ ವೈಪರೀತ್ಯ ಆರಂಭದಲ್ಲಿ ಸಂಕಷ್ಟ ತಂದಿತ್ತು. ನೀರಿನ ಕೊರತೆ ಕಾಡಿತ್ತು. ಅಡಿಕೆ ಬೆಳೆಯು ಹೆಚ್ಚು ನೀರನ್ನು ಬಯಸುವ ಬೆಳೆಯಾಗಿದೆ. ಈ ಬಾರಿ ಮಳೆಯ ಕೊರತೆ ಅದರ ಬೆನ್ನಿಗೇ ತಾಪಮಾನ ಏರಿಕೆಯ ಕಾರಣದಿಂದ ನೀರಿನ ಕೊರತೆಯೂ ಹಲವು ಕಡೆ ಕಾಡಿತ್ತು. ಕೊಳವೆಬಾವಿ ಕೊರೆದರೂ ಪಂಪ್‌ ಅಳವಡಿಕೆ ಇತ್ಯಾದಿ ವಿಳಂಬದ ಕಾರಣದಿಂದ ತೋಟಕ್ಕೆ ಬೇಕಾದಷ್ಟು ನೀರುಣಿಸಲು ಕಷ್ಟವಾಗಿತ್ತು. ಸರಿಯಾಗಿ ನೀರುಣಿಸಿದರೂ ವಾತಾವರಣದ ಉಷ್ಣತೆ 40 ಡಿಗ್ರಿಗಿಂತ ಅಧಿಕವಾಗಿ ಎಳೆ ಅಡಿಕೆಯ ಮೇಲೆ ಪರಿಣಾಮ ಬೀರಿತ್ತು.

ಮೇ ಅಂತ್ಯದವರೆಗೂ ಸರಿಯಾಗಿ ಮಳೆಯಾಗಿಲ್ಲ, ಮೇ ಅಂತ್ಯದ ಬಳಿಕ ಮಳೆಯಾಗಿ ವಾತಾವರಣದ ಉಷ್ಣತೆ 30 ಡಿಗ್ರಿ ತಲಪುತ್ತಲೇ ಎಳೆ ಅಡಿಕೆ ಬೀಳಲು ಆರಂಭವಾಗಿತ್ತು. ನಂತರ ಸ್ವಲ್ಪ ದಿನಗಳ ಕಾಲ ಅಡಿಕೆ ಬೀಳುವುದು ಕಡಿಮೆಯಾದಂತೆಯೇ ಮಳೆಯ ಪ್ರಮಾಣ ಕಡಿಮೆಯಾಗಿ ವಾತಾವರನದ ಉಷ್ಣತೆ ಮತ್ತೆ ಏರಿಕೆಯಾಗಿ ಮತ್ತೆ ಮಳೆಯಾದಾಗ ತಂಪಾಗಿತ್ತು. ಹೀಗಾಗಿ ಮತ್ತೆ ಅಡಿಕೆ ಬೀಳುವುದಕ್ಕೆ ಆರಂಭವಾಗಿತ್ತು. ಹಲವು ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎಳೆ ಅಡಿಕೆ ಬೀಳುತ್ತಿದೆ. ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಇದು ಮುಂದಿನ ಬಾರಿಗೆ ಫಸಲಿನ ಕೊರತೆಗೂ ಕಾರಣವಾಗಬಹುದು.

ಈ ಪ್ರಮಾಣದಲ್ಲಿ ಇದುವರೆಗೂ ಎಳೆ ಅಡಿಕೆ ಬೀಳಲು ಹವಾಮಾನ ವೈಪರೀತ್ಯವೇ ಕಾರಣ ಎಂದು ವಿಶ್ಲೇಷಿಸಲಾಗಿದೆ.ಕೆಲವು ಕಡೆಗಳಲ್ಲಿ ಪೆಂತಿ ಕೀಟದ ಕಾರಣದಿಂದಲೂ ಅಡಿಕೆ ಬೀಳುತ್ತಿತ್ತು. ಇದು ಔಷಧಿ ಸಿಂಪಡಣೆಯ ಬಳಿಕ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ ಈ ಬಾರಿ ಔಷಧಿ ಸಿಂಪಡಣೆಯ ಬಳಿಕವೂ ಎಳೆ ಅಡಿಕೆ ಬೀಳುತ್ತಿರುವುದು ಹವಾಮಾನದ ಬದಲಾವಣೆಯೇ ಕಾರಣ ಎಂದು ಅಭಿಪ್ರಾಯ ಪಡಲಾಗಿದೆ.

There is a notable issue of excessive nut fall in Arecanut plantations in various areas of Dakshina Kannada district. Following the onset of rains, a significant number of nuts are falling from the trees. This ongoing trend in many plantations is causing concerns regarding its potential impact on the upcoming crop.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಅಡಿಕೆ ಕತ್ತರಿಸಿ ಹಲಸು ನೆಟ್ಟ ಕೃಷಿಕ
July 5, 2026
11:19 PM
by: ದ ರೂರಲ್ ಮಿರರ್.ಕಾಂ
ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ
July 5, 2026
5:47 PM
by: ಮಹೇಶ್ ಪುಚ್ಚಪ್ಪಾಡಿ
ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ
July 5, 2026
2:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror