Advertisement
The Rural Mirror ವಾರದ ವಿಶೇಷ

ಹವಾಮಾನ ಬದಲಾವಣೆಯಿಂದ ಕಾರ್ಮಿಕರ ಮೇಲೆ ಪರಿಣಾಮ – ಅಧ್ಯಯನ ವರದಿ

Share

ಕಳೆದ ಹಲವು ವರ್ಷಗಳಿಂದ ವಿಶ್ವದಾದ್ಯಂತ ಹವಾಮಾನ ಬದಲಾವಣೆಯು ಗಂಭೀರವಾದ ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಈ ಹವಾಮಾನ ಬದಲಾವಣೆಯು ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಚೀನಾದ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.  ಕೃಷಿ, ಗ್ರಾಮೀಣ ಮಾತ್ರವಲ್ಲ ನಗರ ಪ್ರದೇಶದಲ್ಲೂ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ.

ಕಾರ್ಮಿಕರ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಬದಲಾವಣೆಯ ಬಗ್ಗೆ ಚೀನಾ ಸಂಸ್ಥೆಯೊಂದು ಅಧ್ಯಯನ ನಡೆಸಿತ್ತು. ಕಾರ್ಮಿಕರ ಲಭ್ಯತೆ ಹಾಗೂ ಕಾರ್ಮಿಕರ ಸಮಸ್ಯೆಗಳ ಬಗ್ಗೆಯೂ ಗಮನಹರಿಸಲಾಗಿತ್ತು. ಈ ಸಂದರ್ಭ ಕಾರ್ಮಿಕರ ಲಭ್ಯತೆ ಹಾಗೂ ಉದ್ಯೋಗದ ಮೇಲೆ ಹವಾಮಾನ ಬದಲಾವಣೆಯ ಪ್ರಮುಖ ಪಾತ್ರ ಕಂಡುಬಂದಿದೆ. ತೀವ್ರವಾದ ಬಿಸಿಗಾಳಿ ಅಥವಾ ಭಾರೀ ಮಳೆಯ ಬಗ್ಗೆಯೂ ಚರ್ಚೆಯಾಗಿದೆ. 2014 ರಿಂದ 2020 ರವರೆಗಿನ ಚೀನಾದ ನಗರ ಮಟ್ಟದ ವಾರ್ಷಿಕ ಡೇಟಾವನ್ನು ಗಮನಿಸಲಾಗಿತ್ತು. ವಾತಾವರಣದ ಉಷ್ಣತೆ ಏರಿಕೆ ಕಂಡಾಗ ಸಂಸ್ಥೆಗಳ ಕಾರ್ಮಿಕರ ನೇಮಕಾತಿಯಲ್ಲಿ ಗಣನೀಯವಾಗಿ ಕಡಿಮೆ ಮಾಡಿಕೊಳ್ಳುತ್ತವೆ. ಭಾರೀ ಮಳೆಯ ಸಂದರ್ಭದಲ್ಲೂ ಕಾರ್ಮಿಕರ ನೇಮಕಾತಿ ಕಡಿಮೆಯಾಗಿತ್ತು. ಇದೆರಡೂ ಸಂದರ್ಭ ಕಂಪನಿಗಳ ವೆಚ್ಚದ ಮೇಲೆ ಪರಿಣಾಮ ಬೀರುತ್ತಿದ್ದವು. ಇದೇ ವೇಳೆ ಕೃಷಿ ಹಾಗೂ ಗ್ರಾಮೀಣ ಕ್ಷೇತ್ರದಲ್ಲೂ ಇಂತಹದ್ದೇ ಪರಿಣಾಮಗಳನ್ನು ಕಂಡಿದೆ. ಬಿಸಿ ವಾತಾವರಣದಲ್ಲಿ ಕೃಷಿ ಚಟುವಟಿಕೆಗಳೂ ಕಡಿಮೆಯಾಗುತ್ತವೆ, ಭಾರೀ ಮಳೆಯಾದಾಗಲೂ ಕಡಿಮೆಯಾಗುತ್ತಿರುವುದು ಕಂಡುಬಂದಿದೆ.

ಕಂಪನಿಗಳು ಇಂತಹ ಹವಾಮಾನ ಬದಲಾವಣೆಗಳ ವೇಳೆ ಕಾರ್ಮಿಕರ ಸಮಸ್ಯೆಯನ್ನು ಸರಿದೂಗಿಸಲು, ಸಂಸ್ಥೆಗಳು ಮಾನವ ಕಾರ್ಮಿಕರಿಗೆ ಬದಲಿಯಾಗಿ ಕೈಗಾರಿಕಾ ರೋಬೋಟ್‌ಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತವೆ, ಇದರಿಂದಾಗಿ ಉತ್ಪಾದನಾ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ಸಂಸ್ಥೆಗಳು ಹೆಚ್ಚು ಅನುಭವಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಒಲವು ತೋರುತ್ತವೆ ಮತ್ತು ಹೆಚ್ಚಿನ – ತಾಪಮಾನದ ಸಬ್ಸಿಡಿಗಳನ್ನು ನೀಡುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಕಾರ್ಮಿಕರಲ್ಲಿ ಇಳಿಕೆ ಕಂಡುಬರುತ್ತದೆ , ಅಭದ್ರತೆ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ, ಕೃಷಿ ಕ್ಷೇತ್ರದಲ್ಲಿ ಅಂತಹ ಬದಲಾವಣೆಗಳು ತಕ್ಷಣವೇ ಕಂಡುಬರಲಿಲ್ಲ, ಕೆಲಸಗಳಲ್ಲಿ ಇಳಿಕೆ ಕಂಡುಬರುತ್ತವೆ.

ಹವಾಮಾನ ವೈಪರೀತ್ಯ ಪ್ರತೀ ವರ್ಷ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳ ಉಳಿವಿಗೆ ಕೆಲವೊಂದು ಪಾಲಿಸಿಗಳನ್ನು ಕಾರ್ಮಿಕರಿಗಾಗಿ ಸರ್ಕಾರಗಳ ಮಾಡಬೇಕಾಗಬಹುದು ಎನ್ನುವುದು ಅಧ್ಯಯನದ ಬಳಿಕ ಹೊರಬಂದಿರುವ ಅಂಶ. ಸರ್ಕಾರಿ ಮಟ್ಟದಲ್ಲಿ, ಸ್ಥಳೀಯವಾಗಿ  ಸೂಕ್ತವಾದ ಹಣಕಾಸಿನ ಸಬ್ಸಿಡಿಗಳನ್ನು ಒದಗಿಸಬೇಕು ಅಥವಾ ಉದ್ಯಮಗಳಿಗೆ, ಕೃಷಿ ಕಾರ್ಮಿಕರಿಗೆ ಮೀಸಲಾದ ಬೆಂಬಲ ನಿಧಿಗಳನ್ನು ಸ್ಥಾಪಿಸಬೇಕು. ಈ  ಮೂಲಕ ಕಾರ್ಮಿಕ ಮಾರುಕಟ್ಟೆಯ ಮೇಲೆ ಹವಾಮಾನ ಬದಲಾವಣೆಯ  ಪರಿಣಾಮಗಳನ್ನು ತಗ್ಗಿಸುವ ಪ್ರಯತ್ನ ನಡೆಯಬೇಕಾಗಬಹುದು ಎನ್ನುವುದು ಕಂಡುಬಂದಿರುವ ಅಂಶ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ ಸೇರಿಕೊಳ್ಳಿ…. 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?

 ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…

7 hours ago

‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?

ಪ್ರಕೃತಿಯಲ್ಲಿ ಇರುವ ಡಿಎನ್‌ಎ, ಪ್ರೋಟೀನ್‌ಗಳಂತೆ ಪ್ಲಾಸ್ಟಿಕ್‌ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…

7 hours ago

2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ

2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…

7 hours ago

ಶಾಖದ ಅಲೆಗಳ ಮುನ್ಸೂಚನೆಗೆ ವಿಜ್ಞಾನಿಗಳಿಂದ ಹೊಸ ಅಧ್ಯಯನ

ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…

8 hours ago

ಕೃಷಿ ಭೂಮಿಯಲ್ಲಿರುವ ವಿದ್ಯುತ್ ಕಂಬಕ್ಕೆ ಹೊಸ ನಿಯಮ

ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…

8 hours ago

ಬಿಪಿ ಕಾಯಿಲೆ ಇರುವವರಿಗೆ ಇಲ್ಲಿದೆ ಕೆಲವು ಆರೋಗ್ಯಕರ ಟಿಪ್ಸ್

ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…

8 hours ago