ಹಣ್ಣು–ತರಕಾರಿಗಳ ಹೊಸ ತಳಿ ಅಭಿವೃದ್ಧಿಗೆ ವಿಜ್ಞಾನಿಗಳಿಗೆ ಸಂದೇಶ

February 9, 2026
7:11 AM
ಹಣ್ಣು–ತರಕಾರಿ ಆಮದು ಮೇಲಿನ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ, ದೇಶೀಯವಾಗಿ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕೃಷಿ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ.

ಯಾವುದೇ ಕೃಷಿ ಉತ್ಪನ್ನಗಳ ಆಮದುಗೆ ಕೇಂದ್ರ ಸರ್ಕಾರ ಕಠಿಣ ನಿಲುವು ಹೊಂದಿದೆ. ಅದರ ಬದಲು ದೇಶೀಯವಾಗಿ ಹಣ್ಣು ಮತ್ತು ತರಕಾರಿಗಳ ಹೊಸ, ಸುಸ್ಥಿರ ಹಾಗೂ ದೀರ್ಘಬಾಳಿಕೆಯ ತಳಿಗಳನ್ನು ಅಭಿವೃದ್ಧಿಪಡಿಸುವತ್ತ ವಿಜ್ಞಾನಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.

ಬೆಂಗಳೂರು ಸಮೀಪದ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR)ಗೆ ಭೇಟಿ ನೀಡಿದ ಸಚಿವರು, ಹಣ್ಣು–ತರಕಾರಿ ಬೆಳೆಗಳ ವಿವಿಧ ಮಾದರಿಗಳನ್ನು ವೀಕ್ಷಿಸಿ ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. ದೀರ್ಘಬಾಳಿಕೆಯ ಜೊತೆಗೆ ಸುಸ್ಥಿರತೆಯನ್ನು ಹೊಂದಿರುವ ತಳಿ ಅಭಿವೃದ್ಧಿಯತ್ತ ಗಮನ ಹರಿಸುವುದು ಅತ್ಯಗತ್ಯವಾಗಿದೆ. ಸಂಸ್ಕರಣೆಗೆ ಅನುಕೂಲವಾಗುವ ಹಣ್ಣು ಮತ್ತು ತರಕಾರಿ ತಳಿಗಳ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ರೋಗ ನಿರೋಧಕ ಶಕ್ತಿಯುಳ್ಳ, ಹೆಚ್ಚು ಇಳುವರಿ ನೀಡುವ ಬೀಜಗಳನ್ನು ಅಭಿವೃದ್ಧಿಪಡಿಸಿ, ಇತ್ತೀಚೆಗೆ ನಾಲ್ಕು–ಐದು ವರ್ಷ ತೆಗೆದುಕೊಳ್ಳುತ್ತಿರುವ ಸಂಶೋಧನಾ ಅವಧಿಯನ್ನು ಎರಡು ವರ್ಷಗಳಿಗೆ ಇಳಿಸುವ ಪ್ರಯತ್ನ ನಡೆಯಬೇಕು ಎಂದು ಸಚಿವರು ಸೂಚಿಸಿದರು.

ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲವಾಗುವ ಸಮಗ್ರ ಕೃಷಿ ಅಭಿವೃದ್ಧಿ ಮಾದರಿಯತ್ತ ಗಮನ ಹರಿಸಬೇಕು ಎಂದು ಹೇಳಿದ ಅವರು, ಐಐಎಚ್ಆರ್ ವತಿಯಿಂದ ವಿಶೇಷ ಚಿಂತನಾ ಕಾರ್ಯಕ್ರಮ ಏರ್ಪಡಿಸುವಂತೆ ಸೂಚಿಸಿ, ತಾವು ಅದರಲ್ಲಿ ಭಾಗವಹಿಸುವುದಾಗಿಯೂ ಭರವಸೆ ನೀಡಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ
October 11, 2026
10:37 AM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ
October 11, 2026
10:24 AM
by: ದ ರೂರಲ್ ಮಿರರ್.ಕಾಂ
ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ
October 10, 2026
2:55 PM
by: ದ ರೂರಲ್ ಮಿರರ್.ಕಾಂ
ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ
October 10, 2026
2:51 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror