ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಸಕಲ ಸಿದ್ದತೆಗಳೊಂದಿಗೆ ರಾಮಜನ್ಮ ಭೂಮಿ ಕಂಗೊಳಿಸುತ್ತಿದೆ. ರಾಮ ಮಂದಿರದಲ್ಲಿ (Ram Mandir) ರಾಮ ಪ್ರಾಣ ಪ್ರತಿಷ್ಠೆ ನಡೆಯುವ ಮೊದಲು ಅಯೋಧ್ಯೆಯ (Ayodhya) ಸರಯೂ ನದಿ ದಂಡೆಯಲ್ಲಿ 1008 ಶಿವಲಿಂಗಗಳನ್ನು ಸ್ಥಾಪಿಸುವ ಭವ್ಯವಾದ ರಾಮನಾಮ ಮಹಾ ಯಜ್ಞ (Ram Naam Maha Yagya) ಜನವರಿ 14 ರಿಂದ ಜನವರಿ 25 ರವರೆಗೆ ನಡೆಯಲಿದೆ.
ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ನೇಪಾಳದಿಂದ 21,000 ಯತಿಗಳು ಆಗಮಿಸಲಿದ್ದಾರೆ. ಮಹಾಯಾಗವನ್ನು ನಡೆಸಿ, ಅದರಲ್ಲಿ ಶಿವಲಿಂಗಗಳನ್ನು (Shiva Linga) ಇರಿಸಲು ಈಗಾಗಲೇ 1008 ಯಜ್ಞ ಮಂಟಪವನ್ನು ನಿರ್ಮಿಸಲಾಗಿದೆ. ಈ ಪೈಕಿ ದೊಡ್ಡ ಯಾಗ ಶಾಲೆಯ ಛಾವಣಿ 11 ಪದರಗಳನ್ನು ಹೊಂದಿರುವುದು ವಿಶೇಷ. ರಾಮಮಂದಿರದಿಂದ 2 ಕಿ.ಮೀ ದೂರದಲ್ಲಿರುವ ಸರಯೂ ನದಿಯ (Sarayu River) ಮರಳು ಘಾಟ್‌ನಲ್ಲಿರುವ 100 ಎಕರೆ ಪ್ರದೇಶದಲ್ಲಿ ಈ ಯಜ್ಞ ಮಂಟಪಗಳನ್ನು ಸ್ಥಾಪಿಸಲಾಗಿದೆ.
ಅಯೋಧ್ಯೆ ಮೂಲದ ಈಗ ನೇಪಾಳದಲ್ಲಿ (Nepal) ನೆಲೆಸಿರುವ ಆತ್ಮಾನಂದ ದಾಸ್ ಮಹಾತ್ಯಾಗಿ(ನೇಪಾಳಿ ಬಾಬಾ) ಅವರು ಈ ಯಾಗವನ್ನು ಆಯೋಜಿಸಿದ್ದಾರೆ. ಪ್ರತಿ ವರ್ಷದ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನಾನು ಈ ಯಾಗವನ್ನು ಮಾಡುತ್ತೇನೆ. ಆದರೆ ಈ ವರ್ಷ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಯಜ್ಞ ಮಂಟಪಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ ಎಂದು ಹೇಳಿದರು.
ಈ ಯಾಗದಲ್ಲಿ ಪ್ರತಿದಿನ 50 ಸಾವಿರ ಭಕ್ತರಿಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು, ದಿನಕ್ಕೆ ಸುಮಾರು 1 ಲಕ್ಷ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಮಹಾ ಯಾಗ ಮುಗಿದ ನಂತರ 1008 ಶಿವಲಿಂಗಗಳನ್ನು ಸರಯೂ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಜನವರಿ 17 ರಿಂದ 24,000 ರಾಮಾಯಣದ ಶ್ಲೋಕಗಳ ಪಠಿಸಲಾಗುತ್ತದೆ. ಪ್ರತಿದಿನ 1008 ಶಿವಲಿಂಗಗಳಿಗೆ ಅಭಿಷೇಕ ನಡೆಯಲಿದೆ. ಶಿವಲಿಂಗಗಳ ಕೆತ್ತನೆಗಾಗಿ ಮಧ್ಯಪ್ರದೇಶದ ನರ್ಮದಾ ನದಿಯಿಂದ ಕಲ್ಲುಗಳನ್ನು ತರಲಾಗಿದೆ ಎಂದು ನೇಪಾಳಿ ಬಾಬಾ ಹೇಳಿದರು.
– ಅಂತರ್ಜಾಲ ಮಾಹಿತಿ
A grand Ram Naam Maha Yagya will be held from January 14 to January 25, where 1008 Shiv Lingams will be installed on the banks of the Sarayu River in Ayodhya, before the Ram Prana Pratishtha at the Ram Mandir.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…