ಅಡಿಕೆ ಬೆಲೆ ಏರಿಕೆಯ ಸುದ್ದಿ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸುದ್ದಿಯಾಗುತ್ತಿದೆ. ಭಾರತದಲ್ಲಿ ಅಡಿಕೆ ಕೊರತೆ ಇರುವುದರಿಂದ ಬೇಡಿಕೆ ಬರಲಿದೆ ಎಂದು ಮ್ಯಾನ್ಮಾರ್ ಸೇರಿದಂತೆ ಇತರ ದೇಶಗಳಲ್ಲಿ ಚರ್ಚೆ ಆರಂಭವಾಗಿದೆ. ಈ ವರ್ಷ ಅಡಿಕೆ ಪೂರೈಕೆ ಕಡಿಮೆಯಾಗಿರುವುದರಿಂದ, ವ್ಯಾಪಾರಿಗಳು ಖರೀದಿಗಾಗಿ ಕಾಯುತ್ತಿದ್ದಾರೆ, ಭಾರತ, ಚೀನಾದತಂಹ ದೇಶಗಳಿಗೆ ಅಡಿಕೆ ಬೇಕಾಗಿದೆ ಎಂದು ಅಲ್ಲಿನ ಬೆಳೆಗಾರರಿಗೆ ಮಾಹಿತಿ ನೀಡಲಾಗಿದೆ.
ಚೀನಾ ಹಾಗೂ ಭಾರತದಲ್ಲಿ ಅಡಿಕೆ ಉತ್ಪಾದನೆಯ ಕೊರತೆ ಇರುವುದರಿಂದ ಅಡಿಕೆಗೆ ವಿದೇಶಗಳಿಂದ ಈಗ ಬೇಡಿಕೆ ವ್ಯಕ್ತವಾಗಿದ್ದು, ಈ ವರ್ಷ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ. ಕಳೆದ ವರ್ಷ, ಸೀಮಿತ ಪೂರೈಕೆಯಿಂದಾಗಿ ಅಡಿಕೆ ಬೆಳೆಗಾರರಿಗೆ ನಷ್ಟವಾಗಿತ್ತು. ಈಗಾಗಲೇ ಚೀನಾ ಅಡಿಕೆಗೆ ಬೇಡಿಕೆಯನ್ನು ನೀಡಲು ಪ್ರಾರಂಭಿಸಿದೆ. ಹಿಂದಿನ ವರ್ಷದಂತೆ ಎಳೆಯ ಅಡಿಕೆಗಳನ್ನು ಹೆಚ್ಚಾಗಿ ಮಾರಾಟ ಮಾಡಿದರೆ ಈ ವರ್ಷವೂ ಬೆಲೆ ಏರಿಕೆಯಾಗುತ್ತಲೇ ಇರುತ್ತದೆ. ವರ್ಷವಿಡೀ ಅಡಿಕೆ ಲಭ್ಯವಿರುವುದಿಲ್ಲ, ಆದ್ದರಿಂದ ಈ ವರ್ಷ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುವುದು ಮ್ಮಾನ್ಮಾರ್ ಬೆಳೆಗಾರರಿಗೆ ನೀಡಿರುವ ಮಾಹಿತಿ. ಹಿಂದಿನ ವರ್ಷಗಳಲ್ಲಿ ಎಳೆಯ ಅಡಿಕೆಗೆ ಚೀನಾದ ಬೇಡಿಕೆ ಹೆಚ್ಚಾದ ಕಾರಣ, ಈ ವರ್ಷ ಒಣಗಿದ ಅಡಿಕೆಯ ಬೆಲೆ ಹೆಚ್ಚಾಗಿದೆ. ಪ್ರಸ್ತುತ, ಸ್ಥಳೀಯ ಮಾರುಕಟ್ಟೆಯಲ್ಲಿ ಪೂರೈಕೆಗಿಂತ ಬೇಡಿಕೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತಕ್ಕೆ ಬಹುಪಾಲು ಅಡಿಕೆ ಕಳ್ಳಸಾಗಾಣಿಕೆಯ ಮೂಲಕವೇ ಸಾಗಾಟವಾಗುತ್ತದೆ. ಹೀಗಾಗಿ ಈ ಬಾರಿ ಅಡಿಕೆ ಕಳ್ಳಸಾಗಾಣಿಕೆ ತಡೆಗೆ ಭಾರತದಲ್ಲಿ ಸೂಕ್ತ ಕ್ರಮವಾಗಬೇಕಿದೆ. ಅಸ್ಸಾಂ ಮೂಲಕ ಅಡಿಕೆ ಕಳ್ಳ ಸಾಗಾಟವಾದರೆ, ವಿವಿಧ ಬಂದರುಗಳ ಮೂಲಕ ಒಣ ಹಣ್ಣು ಎಂದು ಉಲ್ಲೇಖಿಸಿ ಅಥವಾ ತಪ್ಪಾದ ಮಾಹಿತಿ ನೀಡಿ ಅಡಿಕೆ ಸಾಗಾಟವಾಗುತ್ತಿರುವುದಕ್ಕೆ ಈಗ ನಿಯಂತ್ರಣ ಅಗತ್ಯ ಇದೆ.
ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…
ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…
ಹವಾಮಾನ ಬದಲಾವಣೆ ಪ್ರಪಂಚದ ಎಲ್ಲೆಡೆಯೂ ಸವಾಲಾಗುತ್ತಿದೆ.ತಾಪಮಾನ ಏರಿಕೆಯ ಕಾರಣದಿಂದ ಚಂಡಮಾರುತಗಳ ಸಂಖ್ಯೆ ಹೆಚ್ಚಾಗುವ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹರಿಯಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…