Advertisement
MIRROR FOCUS

ಒಣ ಮೇವು ಹುಲ್ಲಿಗೆ ಹೆಚ್ಚಿದ ಬೇಡಿಕೆ | ದುಪ್ಪಟ್ಟು ದರದಲ್ಲಿ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಮಾರಾಟ…! | ಮುಂದಿನ ದಿನಗಳಲ್ಲಿ ಮೇವಿಗೂ ಕಾಡಲಿದೆ ಅಭಾವ

Share

ಬರಗಾಲ(Drought) ಬಂದ್ರೆ ಜನ- ಜಾನುವಾರು, ಕಾಡು ಪ್ರಾಣಿ ಪಕ್ಷಿಗಳಿಂದ(Animal-Birds) ಹಿಡಿದು ಕ್ರಿಮಿ ಕೀಟಗಳಿಗೂ ತೊಂದರೆ ತಪ್ಪಿದ್ದಲ್ಲ. ಎಲ್ಲೆಲ್ಲೂ ನೀರು ಆಹಾರಕ್ಕಾಗಿ(Water-Food) ಪರದಾಡುವ ಪರಿಸ್ಥಿತಿ ಬಂದೊದಗುತ್ತದೆ. ಮಳೆಯ ಕೊರತೆಯಿಂದ(Less rain) ಈ ಬಾರಿ ಜಾನುವಾರುಗಳ(Cattle) ಮೇವಿಗೂ(Fodder) ಸಂಕಷ್ಟಪಡುವಂತಾಗಿದೆ. ಇದರಿಂದ ಮೇವಿಗೂ ಹೆಚ್ಚಿನ ಬೇಡಿಕೆ ಬಂದಿದೆ. ಇನ್ನೇನು ಮೇವು ಮಾರಾಟ ಮಾಡುವ ರೈತರಿಗೆ (Farmers) ಸದ್ಯ ಸುಗ್ಗಿ ಕಾಲ ಎನ್ನಬಹುದು. ಮಹಾರಾಷ್ಟ್ರದಿಂದ(Maharastra) ಬೆಳಗಾವಿಗೆ(Belagavi) ಬಂದು ಮೇವು  ಕೊಂಡೊಯ್ಯುವವರ ಸಂಖ್ಯೆಯೂ ಹೆಚ್ಚಾಗಿದೆ.

Advertisement
Advertisement
Advertisement

ಮೇವಿಗೆ ಅಭಾವ : ದನಕರುಗಳಿಗೆ ಜೋಳದ ದಂಟು, ತೊಗರಿ ಹೊಟ್ಟು, ಹುರುಳಿ ಬಳ್ಳಿ, ಶೇಂಗಾ ಹೊಟ್ಟನ್ನು ಮೇವಾಗಿ ಬಳಕೆ ಮಾಡಲಾಗುತ್ತದೆ. ಮಳೆ ಕಡಿಮೆಯಾದ ಪರಿಣಾಮ ತೊಗರಿ ಹೊಟ್ಟು ಹಾಗೂ ಜೋಳದ ದಂಟಿನ ಮೇವಿನ ಅಭಾವ ಉಂಟಾಗಿದೆ. ಹುರುಳಿ ಬಳ್ಳಿಯ ಹೊಟ್ಟು ಹಾಗೂ ಶೇಂಗಾ ಹೊಟ್ಟು ದುಬಾರಿಯಾಗಿದೆ. ತುಸು ಹೆಚ್ಚು ಬೆಲೆಯಾದರೂ ಜೋಳದ ದಂಟಿನ ಮೇವು ಖರೀದಿಗೆ ರೈತರು ಅಲೆದಾಡುತ್ತಿದ್ದಾರೆ.

Advertisement

ದುಪ್ಪಟ್ಟು ರೇಟ್: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗದ ಕಾಗವಾಡ ಹಾಗೂ ಅಥಣಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಾತ್ರ ಜೋಳದ ಬೆಳೆ ಬೆಳೆಯಲಾಗುತ್ತದೆ. ಈ ವರ್ಷನೀರಿನ ಅಭಾವ ಹಿನ್ನೆಲೆ ಕಡಿಮೆ ಇಳುವರಿ ಬಂದಿದ್ದು ಮಹಾರಾಷ್ಟ್ರದಿಂದ ಬರುವ ರೈತರು ಇಲ್ಲಿನ ಮೇವಿನ ಹುಲ್ಲಿಗೆ 2000 ದಿಂದ 2500 ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ. ಹಿಂದೆಲ್ಲ ಸಾವಿರದ ಗಡಿ ದಾಟೋದೆ ಕಷ್ಟ ಅಂತಿದ್ದ ಮೇವಿನ ದರ ಈ ಬಾರಿ ಡಬಲ್‌ ಆಗಿದೆ. ಇದು ಗಡಿನಾಡ ರೈತರಿಗೆ ಒಂದಿಷ್ಟು ಖುಷಿ ತಂದಿರುವುದು ಸುಳ್ಳಲ್ಲ.

ಕೇವಲ ಉತ್ತರದಲ್ಲಿ ಮಾತ್ರವಲ್ಲ, ರಾಜ್ಯದಾದ್ಯಂತ ಮೇವಿಗೆ ಈ ಬಾರಿ ಕೊರೆತೆ ಉಂಟಾಗುವ ಎಲ್ಲಾ ಲಕ್ಷಣಗಳಿವೆ. ಜಾನುವಾರಗಳನ್ನು ಈ ಬರಗಾಲದ ಸಮಯದಲ್ಲಿ ಸಾಕುವುದೇ ದೊಡ್ಡ ಸವಾಲಾಗಿದೆ. ನೀರಿಗೂ ಅಭಾವ ಉಂಟಾಗಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ರೈತರು ಕಷ್ಟ ಪಡಬೇಕಾಗುತ್ತದೆ. ಜಾನುವಾರು ಸಾಕುವ ಅಲ್ಪ ಸ್ವಲ್ಪ ಮಂದಿಯೂ ಇದನ್ನು ಕೈಬಿಡುವ ಯೋಚನೆಯನ್ನು ಮಾಡಬಹುದು. ದನ, ಕರುಗಳು ಕಟುಕರ ಕೈ ಸೇರುವುದರಲ್ಲಿ ಸಂದೇಹವಿಲ್ಲ.

Advertisement

– ಅಂತರ್ಜಾಲ ಮಾಹಿತಿ

Due to the lack of rain (Less rain) this time, cattle fodder (Fodder) is suffering. Due to this, the demand for fodder has also increased. For the farmers who sell fodder, it is harvest season. The number of people coming to Belagavi from Maharashtra to take fodder has also increased.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

3 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

4 days ago

ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…

4 days ago

ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…

4 days ago

ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಕೊಡದಿದ್ದರೆ ಏನು ಮಾಡುವುದು..?

ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…

4 days ago