MIRROR FOCUS

#IndependenceDay2022 | ಅಮೃತ ಮಹೋತ್ಸವದ ಅಮೃತಗಳಿಗೆಯೆಡೆಗೆ ನನ್ನ ಭಾರತ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೈಯಲ್ಲಿ ತಿರಂಗ ಬಣ್ಣದ ಬಳೆ ಹಾಕಿ ,ಅದೇ ಬಣ್ಣದ ಬೊಟ್ಟನ್ನು ಧರಿಸಿ,ಮೊಗದಲ್ಲಿ ನಗುವನ್ನು ತುಂಬಿಕೊಂಡು ಓಡೋಡಿ ಶಾಲೆಗೆ ಆಗಮಿಸಿ ಧ್ವಜಾರೋಹಣವಾದಾಗ ನಮನ ಸಲ್ಲಿಸಿ ಭಾರತ ಮಾತೆಗೆ ವಂದಿಸುವ ಪರಿ ಅಂದಿನಿಂದಲೂ ರೂಢಿಯಲ್ಲಿತ್ತು. ಆದರೆ ಈ ವರ್ಷ ಈ ಹರ್ಷ ಬಲು ಅಧಿಕವಾಗಿಯೇ ಇದೆ .ಇದು ಪ್ರತಿಯೊಬ್ಬ ಭಾರತೀಯನೂ ಸಂಭ್ರಮಿಸಬೇಕಾದ ವರ್ಷ. ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷಗಳಾಗಿವೆ. ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಭಾರತೀಯರೆಲ್ಲರೂ ಸಜ್ಜಾಗಿದ್ದಾರೆ.

Advertisement
ಕುತಂತ್ರದ ಮೂಲಕ ಆಂಗ್ಲರ ಕೈಲಿ ಸಿಲುಕಿ ನಲುಗಿದ ಬಳಲಿದ ಭಾರತ ಮಾತೆಗೆ ಕ್ರಾಂತಿ, ಬಲಿದಾನದ ಫಲವಾಗಿ ಲಭಿಸಿದ ಅಮೂಲ್ಯವಾದ ಸ್ವಾತಂತ್ರ್ಯ ದೊರೆತು ಎಪ್ಪತೈದು ವರ್ಷಗಳಾಗಿವೆ. ಇದು ಕೇವಲ ಭಾರತ ಮಾತೆಗೆ ಸಿಕ್ಕ ಸ್ವಾತಂತ್ರ್ಯವಲ್ಲ . ಪ್ರತಿಯೊಬ್ಬ ಭಾರತದ ಪೌರನಿಗೂ ಪಾರತಂತ್ರದಿಂದ ಸ್ವಾತಂತ್ರ್ಯದೆಡೆಗೆ ಸಿಕ್ಕ ಗೆಲುವು.
ಭಾರತ ಶಾಂತಿಪ್ರಿಯ ದೇಶ .ವಿಶ್ವದ ಅತ್ಯಂತ ಸುಂದರ ದೇಶಗಳ ಪೈಕಿ ಇದೂ ಒಂದು. ಭದ್ರಕೋಟೆಯಂತೆ ದೇಶವ ಕಾಯುತಿಹ ಭವ್ಯ ಹಿಮಾಲಯ, ಸುತ್ತ ಗೋಡೆಯಂತೆ ಭಾರತ  ರಕ್ಷಿಸುತಲಿಹ ದಿವ್ಯ ಜಲಾಶಯ ,ಗಿರಿ ಶೃಂಗಗಳು, ಹರಿದ್ವರ್ಣ ವನಗಳು, ನದಿ ದೊರೆಗಳು ,ಗುಹಾ ದೇವಾಲಯಗಳು, ಅರಮನೆಗಳು ಹೀಗೆ ನೈಸರ್ಗಿಕ ಸೊಗಡು ಭಾರತಿಗೆ ಇನ್ನಷ್ಟು ಬೆಡಗನ್ನು ತಂದಿದೆ . ಮಾತ್ರವಲ್ಲದೆ 5000 ವರ್ಷಗಳಿಗೂ ಹಿಂದಿನ ಪುರಾತನ ಸಂಸ್ಕೃತಿ -ಸಂಸ್ಕಾರಗಳು, ಆಚಾರ- ವಿಚಾರಗಳು, ಕಲಾಪ್ರಕಾರಗಳು ಇನ್ನೆಲ್ಲೂ ಸಿಗಲಾರದು. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದು. ಸಾಗರದಷ್ಟು ವಿಶಾಲವಾದ ಭಾಷೆಯನ್ನಾಡುವ, ಹಲವು ಜಾತಿ ,ಮತ , ವರ್ಗಗಳ ಜನರನ್ನೊಳಗೊಂಡ ಸುಂದರ ದೇಶ ನಮ್ಮದು. ಹೀಗೆ ಹತ್ತು ಹಲವು ಅದ್ಭುತಗಳನ್ನು ತನ್ನೊಡಲಿನಲ್ಲಿ ಹೊತ್ತುಕೊಂಡು ,ಬೃಹತ್ ಸಂವಿಧಾನ ,ಸ್ವಯಂ ಆಡಳಿತ, ಸ್ವರಕ್ಷಣೆಗಳನ್ನೊಳಗೊಂಡ ‘ಸ್ವರಾಜ್ಯ’ ನನ್ನ ಭಾರತ .
ದೇಶದ ಜನವಾಸಿಗಳು ಒಂದೆಡೆಯಾದರೆ, ಅವರನ್ನು ಹಾಗೂ ದೇಶವನ್ನು ಸರಹದ್ದುವಿನಂತೆ ಕಾಯುತ್ತಾ ಗಡಿಯಲ್ಲಿ ಬಂದೂಕು ಹಿಡಿಯುವ ಸೈನಿಕರು ಇನ್ನೊಂದೆಡೆ .ಗಡಗಡ ನಡುಗುವ ಚಳಿಯಲ್ಲೂ ಕೆಚ್ಚೆದೆಯಿಂದ ವೈರಿಗಳ ಸದ್ದಡಗಿಸುತಾ,ಹಗಲಿರುಳೂ ಕರ್ತವ್ಯ ನಿಷ್ಠೆಯ ಮೆರೆಯುವ, ಸಹಾಯಕ್ಕೆ ಸದಾ ಸನ್ನದ್ಧರಾಗಿರುವ ವೀರ ಜವಾನರು ನಮ್ಮ ಹೆಮ್ಮೆ ,ನಮ್ಮ ಆಸ್ತಿ.
ಸ್ವಾತಂತ್ರ್ಯಾ ನಂತರ ಭಾರತ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಂಡಿದೆ ಮತ್ತು ಕಾಣುತ್ತಿದೆ .

ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವಾಗ ಅಡಚಣೆಗಳು ಎದುರಾದರೂ ಅವೆಲ್ಲವನ್ನು ಮೆಟ್ಟಿನಿಂತು ಸಮರ್ಥವಾಗಿ ಎದುರಿಸುತ್ತಾ ಯಶಸ್ಸಿನೆಡೆಗೆ ದಾಪುಗಾಲಿಡುತ್ತಿದೆ. ಕೃಷಿ, ರಕ್ಷಣೆ ,ವಿದೇಶಾಂಗ, ವಿಜ್ಞಾನ, ಕೈಗಾರಿಕೆ, ಸ್ವ ಉದ್ಯಮ ,ವೈದ್ಯಕೀಯ ,ವಾಣಿಜ್ಯ, ವಿದ್ಯಾಭ್ಯಾಸ ,ಸಾರಿಗೆ ,ಕ್ರೀಡೆ ,ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಭಾರತ ತನ್ನದೇ ಛಾಪನ್ನು ಮೂಡಿಸುತ್ತಿದೆ . ತನ್ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂದು ದಿಟ್ಟತನದಿಂದ ಉತ್ತರ ನೀಡಿದೆ. ಇದೀಗ ಅಮೃತೋತ್ಸವದ ಸುಸಂದರ್ಭದಲ್ಲಿ ಸ್ವಾವಲಂಬನೆಯ ಪರಿಕಲ್ಪನೆಯಡಿಯಲ್ಲಿ ಆತ್ಮ ನಿರ್ಭರದೆಡೆಗೆ ಸಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಪ್ರತಿಯೊಂದು ವಿಚಾರದಲ್ಲೂ ಸ್ವಾವಲಂಬನೆಯ ತತ್ವವನ್ನಿಟ್ಟುಕೊಂಡು ಇನ್ನಿತರ ದೇಶಗಳಿಗೆ ಮಾದರಿಯಾಗುವಂತೆ ಮುನ್ನುಗ್ಗುತ್ತಿದೆ .ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳು ಯಶಸ್ಸನ್ನು ಕಾಣುತ್ತಿದೆ.ಬಾಹ್ಯಾಕಾಶ ಕ್ಷೇತ್ರದಲ್ಲೂ ಹಿಂದೆಂದೂ ಕಾಣದ ಅಭೂತಪೂರ್ವ ಬದಲಾವಣೆಗಳು ಕಾಣುತ್ತಿದ್ದು ಮಂಗಳಯಾನ, ಚಂದ್ರಯಾನ ಮೊದಲಾದ ಬಾಹ್ಯಾಕಾಶ ಯೋಜನೆಗಳು ಯಶಸ್ಸನ್ನು ಕಂಡಿದ್ದು ವಿಶ್ವದಲ್ಲಿ ಭಾರತವು ಮತ್ತೊಮ್ಮೆ ಉತ್ತುಂಗಕ್ಕೇರುವಂತೆ ಮಾಡಿದೆ.

ಅಮೃತ ಮಹೋತ್ಸವದ ಹೊಸ್ತಿಲಲ್ಲಿ ನಾವಿದ್ದೇವೆ. ತಾಯಿ ಭಾರತೀಯೆಡೆಗಿನ ಗೌರವ ನೂರರಷ್ಟು ಹೆಚ್ಚಿದೆ.’ ವಂದೇ ಮಾತರಂ’ ,’ಜನಗಣಮಣ ‘ಧ್ವನಿ ಮೊಳಗುವಾಗ ಮೈ ನವಿರೇಳುತ್ತದೆ .ಜೋರಾಗಿ ‘ಭಾರತ ಮಾತಾ ಕಿ ಜೈ’ ಎಂಬ ಜೈಕಾರ ಕೂಗುವ ಘಳಿಗೆ ಸಮೀಪಿಸುತ್ತಿದೆ. ಮನೆ ಮನೆಯಲ್ಲೂ, ಮನ ಮನದಲ್ಲೂ ತಿರಂಗ ಪತಾಕೆ ರಾರಾಜಿಸಬೇಕಿದೆ .ಸ್ವಾತಂತ್ರ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಮ್ಮೊಳಗೆ ಎಂದೆಂದೂ ಚಿರಸ್ಥಾಯಿಯಾಗಬೇಕಿದೆ. ರಾಷ್ಟ್ರ ಪ್ರೇಮದ ಕಿಚ್ಚು ಪ್ರಜ್ವಲಿಸಲಿ. ಭಾರತವು ವಿಶ್ವಗುರುವಾಗಿ ಅಗ್ರಸ್ಥಾನಕ್ಕೇರಿ ವಿರಾಜಮಾನವಾಗಲಿ.
ಬರಹ :
ಅನ್ನಪೂರ್ಣ ಯನ್ ಕುತ್ತಾಜೆ,  ತೃತೀಯ ಬಿ. ಎಸ್ಸಿ , ವಿವೇಕಾನಂದ ಮಹಾ ವಿದ್ಯಾಲಯ, ಪುತ್ತೂರು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿ, ಸಾಂಪ್ರದಾಯಿಕ ಔಷಧ ಸೇರಿ ಹಲವಾರು ಒಪ್ಪಂದ

ಭಾರತ ಪ್ರವಾಸದಲ್ಲಿರುವ ಅಂಗೋಲಾ ಅಧ್ಯಕ್ಷ ಜೋವೊ ಮ್ಯಾನುಯೆಲ್ ಗೊನ್ಸಾಲ್ವೆಸ್ ಲಾರೆಂಕೊ ಮತ್ತು ಪ್ರಧಾನಿ…

5 hours ago

ಕರಾವಳಿ ಭಾಗದ ಜನರಿಗೆ ವಿಶ್ವಾಸ ಮೂಡಿಸಲು ಕ್ರಮ | ಕರಾವಳಿಯಲ್ಲಿ ಕೋಮು ಚಟುವಟಿಕೆ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ | ಗೃಹ ಸಚಿವ ಡಾ. ಪರಮೇಶ್ವರ್ ಎಚ್ಚರಿಕೆ

ದಕ್ಷಿಣಕನ್ನಡದಲ್ಲಿ ನಡೆದ ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ. ಮುಂದೆ…

5 hours ago

ದಾವಣಗೆರೆಯಲ್ಲಿ ಮಳೆಗೆ ತರಕಾರಿ , ಭತ್ತದ ಬೆಳೆ ನಾಶ

ದಾವಣಗೆರೆ ಜಿಲ್ಲಾದ್ಯಂತ ವ್ಯಾಪಕ ಮಳೆಯಾಗಿದ್ದು, ಕಟಾವಿಗೆ ಸಿದ್ಧವಾಗಿದ್ದ ಭತ್ತ ಮತ್ತು ತರಕಾರಿ ಬೆಳೆಗೆ…

6 hours ago

ಹಾಸನದ ಆಲೂರಿನಲ್ಲಿ ಅರಣ್ಯ ಇಲಾಖೆಯಿಂದ ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಎರಡನೇ ದಿನದ ಕಾಡಾನೆ ಸೆರೆ…

6 hours ago

ದೇಶಾದ್ಯಂತ ನಾಳೆ ನೀಟ್ – ಯುಜಿ ಪರೀಕ್ಷೆ | ರಾಜ್ಯದ 381 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿಭದ್ರತೆ

ದೇಶಾದ್ಯಂತ ನಾಳೆ ನೀಟ್ - ಯುಜಿ ಪರೀಕ್ಷೆ ನಡೆಯಲಿದೆ. ರಾಜ್ಯದ ಬೆಂಗಳೂರು, ಮೈಸೂರು,…

6 hours ago

ಮಂಗಳೂರಿನಲ್ಲಿ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾಟ ಆರಂಭ |

ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾಟವು ಮಂಗಳೂರು ಟೌನ್ ಹಾಲ್ ನಲ್ಲಿ…

13 hours ago