Advertisement
MIRROR FOCUS

ಗಣಿಗಾರಿಕೆ ಭಾರತಕ್ಕೆ ಲಾಭವೇ ಜಾಸ್ತಿ

Share

ಭಾರತ ದೇಶವು ಹೇರಳ ಸಂಪತ್ತುಗಳ ದೇಶ. ಈ ಹಿಂದೆ ಅನೇಕ ರಾಜಗಳು ದಂಡೆತ್ತಿ ಬಂದದ್ದೂ ಅದೇ ಕಾರಣದಿಂದ. ಇದೀಗ ಭಾರತವು ತನ್ನ ನೆಲದಲ್ಲೇ ಲಭ್ಯ ಇರುವ ಹೇರಳ ಖನಿಜ ಸಂಪನ್ಮೂಲವನ್ನು ಉಪಯೋಗಿಸಿಕೊಂಡರೆ ಭಾರತ ಸಾಕಷ್ಟು ಹಣ ಉಳಿಸಲು ಸಾಧ್ಯ ಎಂದು ಸೆಂಟರ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಪ್ರೋಗ್ರೆಸ್ (ಸಿಎಸ್​​ಇಪಿ) ವರದಿಯಲ್ಲಿ ಹೇಳಲಾಗಿದೆ.

ದೇಶದಲ್ಲಿ ಇಲ್ಲಿಯವರೆಗೆ ಶೇ.30ರಷ್ಟು ಮಾತ್ರ ಖನಿಜ ಸಂಪನ್ಮೂಲಗಳನ್ನು ಪತ್ತೆ ಹಚ್ಚಲಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚಿನ ಗಣಿಗಾರಿಕೆ ನಡೆಸಿಲ್ಲ. ತನ್ನ ನೆಲದಲ್ಲೇ ಲಭ್ಯ ವಿರುವ ಹೇರಳ ಖನಿಜ ಸಂಪನ್ಮೂಲವನ್ನು ಉಪಯೋಗಿಸಿಕೊಂಡರೆ ಭಾರತ ಸಾಕಷ್ಟು ಹಣ ಉಳಿಸಲು ಸಾಧ್ಯ ಎಂದು ವರದಿ ತಿಳಿಸಿದೆ. ಖನಿಜ ಸಂಪನ್ಮೂಲಗಳನ್ನು ಹೆಚ್ಚುವರಿ ಮೈನಿಂಗ್ ಮೂಲಕ ಪಡೆದರೆ ಪ್ರತಿ ವರ್ಷ 100 ಬಿಲಿಯನ್ ಡಾಲರ್ ಅಂದರೆ 9 ಲಕ್ಷ ಕೋಟಿ ರೂ ಆಮದು ವೆಚ್ಚವನ್ನು ತಪ್ಪಿಸಬಹುದು ಎಂದು ಹೇಳಿದೆ.

ಆದರೆ, ಸಾಕಷ್ಟು ವೆಚ್ಚ ಮಾಡಿ ಸಂಪನ್ಮೂಲವನ್ನು ಪತ್ತೆ ಮಾಡಿದರೂ, ಆ ನಿಕ್ಷೇಪಗಳ ಮೇಲೆ ಕಂಪನಿಗೆ ಹಕ್ಕು ಇರುವುದಿಲ್ಲ. ಸರ್ಕಾರವು ಹರಾಜುಗಳ ಮೂಲಕ ಮೈನಿಂಗ್ ಲೀಸ್​ಗಳನ್ನು ಹಂಚಿಕೆ ಮಾಡುತ್ತದೆ. ಇದರಿಂದಾಗಿ, ಸಂಪನ್ಮೂಲ ಅನ್ವೇಷಣೆಗೆ ಕಂಪನಿಗಳು ಹಿಂದೇಟು ಹಾಕುತ್ತವೆ ಎಂಬುದನ್ನು ಈ ವರದಿ ಹೇಳಿದೆ.

ಭಾರತಕ್ಕೆ ಸಾಕಷ್ಟು ಖನಿಜ ಮತ್ತು ಲೋಹಗಳ ಅವಶ್ಯಕತೆ ಇದೆ. 2022ರಲ್ಲಿ ಭಾರತವು ಈ ಖನಿಜ ಮತ್ತು ಲೋಹಗಳನ್ನು 157 ಬಿಲಿಯನ್ ಡಾಲರ್ ಮೌಲ್ಯದಷ್ಟು ಆಮದು ಮಾಡಿಕೊಂಡಿತ್ತು. ಆ ವರ್ಷ ಭಾರತದ ಒಟ್ಟು ಆಮದಿನಲ್ಲಿ ಇವುಗಳ ಪಾಲು ಶೇ. 20ಕ್ಕಿಂತಲೂ ಹೆಚ್ಚಿತ್ತು. ಅದರಲ್ಲೂ ಕ್ರಿಟಿಕಲ್ ಮಿನರಲ್ ಎನ್ನಲಾದ ಕಾಪರ್, ನಿಕಲ್, ಲಿಥಿಯಂ, ಕೊಬಾಲ್ಟ್ ಅನ್ನು ಭಾರತ ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

6 hours ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

1 day ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

1 day ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

2 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

2 days ago

ಅಡಿಕೆ ಆಮದು ಎಂಬ ‘ಮಾಯಾಜಾಲ’: ನಡೆಯುತ್ತಿದೆಯೇ ಬೆಳೆಗಾರರ ಮೇಲೆ ಸೈಕಲಾಜಿಕಲ್ ಅಟ್ಯಾಕ್…!?

ಅಡಿಕೆ ದರ ಇಳಿಕೆಗೆ ಆಮದುಗಿಂತ ಅಡಿಕೆ ಕೊಯ್ಲು ಕಾಲದ ಸರಬರಾಜು ಒತ್ತಡ ಮತ್ತು…

2 days ago