ಭಾರತ ಮತ್ತು ಬ್ರೆಜಿಲ್ ನಡುವೆ ಕೃಷಿ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮಹತ್ವದ ಒಪ್ಪಂದ (MoU) ಮಾಡಲು ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಬ್ರೆಜಿಲ್ ಕೃಷಿ ಸಚಿವರು ಮತ್ತು ಅವರ ನಿಯೋಗದೊಂದಿಗೆ ನಡೆಸಿದ ಸಭೆಯಲ್ಲಿ ಈ ಕುರಿತು ಪ್ರಮುಖ ಚರ್ಚೆಗಳು ನಡೆದಿವೆ.
ಈ ಸಭೆಯಲ್ಲಿ ನೈಸರ್ಗಿಕ ಕೃಷಿ, ಇಂಟಿಗ್ರೇಟೆಡ್ ಫಾರ್ಮಿಂಗ್ ವ್ಯವಸ್ಥೆಗಳು, ಪಲ್ಸ್ ಮತ್ತು ಎಣ್ಣೆಬೀಜ ಉತ್ಪಾದನೆ, ಕೃಷಿ ಸಂಶೋಧನೆ ಮತ್ತು ತಂತ್ರಜ್ಞಾನ ವಿನಿಮಯ, ಇತ್ಯಾದಿ ವಿಷಯಗಳ ಕುರಿತು ಸಹಕಾರ ವಿಸ್ತರಿಸುವ ಬಗ್ಗೆ ಚರ್ಚಿಸಲಾಗಿದೆ. ಬ್ರೆಜಿಲ್ ಭಾರತದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಆಫ್ ಎಕ್ಸಲೆಸ್ಸ್ ಸ್ಥಾಪಿಸಲು ಆಸಕ್ತಿ ತೋರಿಸಿದೆ. ಇದು ನೈಸರ್ಗಿಕ ಕೃಷಿ ಮತ್ತು ಸುಸ್ಥಿರ ಕೃಷಿ ತಂತ್ರಜ್ಞಾನಗಳ ಅಭಿವೃದ್ಧಿಗೆ ನೆರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಭಾರತದಲ್ಲಿ ಈಗಾಗಲೇ ನೈಸರ್ಗಿಕ ಕೃಷಿ ಮಿಷನ್ ಅಡಿ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು, ಬ್ರೆಜಿಲ್ ಈ ಅನುಭವದಿಂದ ಕಲಿಯಲು ಆಸಕ್ತಿ ತೋರಿಸಿದೆ.
ಬ್ರೆಜಿಲ್ ಕೃಷಿ ಸಚಿವರು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಸಂಸ್ಥೆಗಳಿಗೆ ಭೇಟಿ ನೀಡಿ ನೈಸರ್ಗಿಕ ಕೃಷಿ ವಿಧಾನಗಳು, ಜೈವಿಕ ಇನ್‌ಪುಟ್ ಬಳಕೆ, ಕಡಿಮೆ ವೆಚ್ಚದ ಕೃಷಿ ತಂತ್ರಜ್ಞಾನಗಳು ಇವುಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ. ಈ ಕ್ರಮವು ಸಣ್ಣ ಮತ್ತು ಅಂಚಿನ ರೈತರ ಆದಾಯ ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಬ್ರೆಜಿಲ್ ನಡುವಿನ ದ್ವಿಪಕ್ಷೀಯ ವ್ಯಾಪಾರ 2025ರಲ್ಲಿ 15.2 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ, ಇದು ಕಳೆದ ವರ್ಷದಿಗಿಂತ 25% ಹೆಚ್ಚು. 2026ರೊಳಗೆ ಈ ಮೊತ್ತವನ್ನು 20 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಬ್ರೆಜಿಲ್‌ನಿಂದ ಭಾರತಕ್ಕೆ ಮುಖ್ಯವಾಗಿ ಸಕ್ಕರೆ, ಕಚ್ಚಾ ತೈಲ, ಹತ್ತಿ, ತರಕಾರಿ ಎಣ್ಣೆ, ಇತ್ಯಾದಿ ಉತ್ಪನ್ನಗಳು ಆಮದು ಆಗುತ್ತಿವೆ. ಈ ಒಪ್ಪಂದದಿಂದ ನೈಸರ್ಗಿಕ ಕೃಷಿ ಉತ್ತೇಜನ, ಹೊಸ ತಂತ್ರಜ್ಞಾನ ಲಭ್ಯತೆ, ಉತ್ಪಾದನೆ ಮತ್ತು ಆದಾಯ ಹೆಚ್ಚಳ, ಅಂತರರಾಷ್ಟ್ರೀಯ ಕೃಷಿ ಸಹಕಾರ, ಮುಂತಾದ ಲಾಭಗಳು ದೊರೆಯುವ ಸಾಧ್ಯತೆ ಇದೆ.
India and Brazil are in discussions to sign an agriculture MoU focusing on natural farming, integrated farming systems, and crop missions like pulses and oilseeds. Brazil has also expressed interest in setting up a Centre of Excellence in India and collaborating with ICAR. The agreement aims to strengthen sustainable farming and increase bilateral agricultural trade, which reached $15.2 billion in 2025.


