Advertisement
MIRROR FOCUS

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

Share

ಭಾರತದ ಅಡುಗೆ ಎಣ್ಣೆ ಆಮದು 2025-26ರ ತೈಲ ವರ್ಷದಲ್ಲಿ (ನವೆಂಬರ್ 2025–ಜೂನ್ 2026) ಮೊದಲ ಎಂಟು ತಿಂಗಳಲ್ಲಿ ಅಂದರೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.7ರಷ್ಟು ಏರಿಕೆಯಾಗಿ 103.88 ಲಕ್ಷ ಟನ್‌ಗೆ ತಲುಪಿದೆ.

ಭಾರತದ ಒಟ್ಟು ಸಸ್ಯಜನ್ಯ ಎಣ್ಣೆ  ಆಮದು ಇದೇ ಅವಧಿಯಲ್ಲಿ 105.71 ಲಕ್ಷ ಟನ್ ದಾಖಲಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.6ರಷ್ಟು ಹೆಚ್ಚಾಗಿದೆ. ಜೂನ್‌ನಲ್ಲಿ ಖರೀದಿ ನಿಧಾನಗೊಂಡಿರುವುದು ಆಮದು ಪ್ರಮಾಣದಲ್ಲಿ ಇಳಿಕೆಗೆ ಪ್ರಮುಖ ಕಾರಣವಾಗಿದೆ.

ಪಾಮ್ ಎಣ್ಣೆಯ ಪ್ರಾಬಲ್ಯ ಹೆಚ್ಚಳ : ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (SEA) ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ 50.12 ಲಕ್ಷ ಟನ್ ಪಾಮ್ ಎಣ್ಣೆ ಆಮದಾಗಿದ್ದು, ಕಳೆದ ವರ್ಷದ 42.94 ಲಕ್ಷ ಟನ್‌ನಿಂದ ಗಮನಾರ್ಹ ಏರಿಕೆಯಾಗಿದೆ. ಇದರೊಂದಿಗೆ ಭಾರತದ ಒಟ್ಟು ಅಡುಗೆ ಎಣ್ಣೆ ಆಮದಿನಲ್ಲಿ ಪಾಮ್ ಎಣ್ಣೆಯ ಪಾಲು 44%ರಿಂದ 48%ಕ್ಕೆ ಏರಿದೆ.

ಇದೇ ವೇಳೆ ಸೋಯಾಬೀನ್ ಹಾಗೂ ಸೂರ್ಯಕಾಂತಿ ಎಣ್ಣೆ ಸೇರಿರುವ ಸಾಫ್ಟ್ ಆಯಿಲ್‌ಗಳ ಆಮದು ಸ್ವಲ್ಪ ಇಳಿಕೆಯಾಗಿದ್ದು, ಅವುಗಳ ಪಾಲು 56%ರಿಂದ 52%ಕ್ಕೆ ಕುಸಿದಿದೆ.

ಜೂನ್‌ನಲ್ಲಿ ಏಕೆ ಇಳಿಕೆ? :  ಜೂನ್ ತಿಂಗಳಲ್ಲಿ ಪಾಮ್ ಎಣ್ಣೆ ಆಮದು 4.88 ಲಕ್ಷ ಟನ್‌ಗೆ ಇಳಿದಿದ್ದು, ಮೇ ತಿಂಗಳಿಗೆ ಹೋಲಿಸಿದರೆ ಶೇ.10.5ರಷ್ಟು ಕಡಿಮೆಯಾಗಿದೆ. ಸೋಯಾಬೀನ್ ಎಣ್ಣೆ ಆಮದು ಕೂಡ 23% ಕುಸಿದು 3.81 ಲಕ್ಷ ಟನ್‌ಗೆ ತಲುಪಿದೆ.

ಜಾಗತಿಕ ಕಾರಣಗಳೇನು? : SEA ಪ್ರಕಾರ, ಪಾಮ್ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆಯ ನಡುವಿನ ಬೆಲೆ ವ್ಯತ್ಯಾಸವು ಟನ್‌ಗೆ 50 ಡಾಲರ್‌ಗಿಂತ ಕಡಿಮೆಯಾಗಿರುವುದು ಪಾಮ್ ಎಣ್ಣೆಯ ಸ್ಪರ್ಧಾತ್ಮಕತೆಯನ್ನು ಕುಗ್ಗಿಸಿದೆ. ಜೊತೆಗೆ ಇಂಡೋನೇಷ್ಯಾ, ಮಲೇಷ್ಯಾ ಮತ್ತು ಅಮೆರಿಕದಲ್ಲಿ ಜೈವಿಕ ಇಂಧನ (ಬಯೋಫ್ಯೂಯೆಲ್) ಮಿಶ್ರಣ ನೀತಿಗಳಿಂದ ಹೆಚ್ಚಿನ ಪ್ರಮಾಣದ ಸಸ್ಯಜನ್ಯ ಎಣ್ಣೆ ಇಂಧನ ಉತ್ಪಾದನೆಗೆ ಬಳಕೆಯಾಗುತ್ತಿದ್ದು, ಜಾಗತಿಕ ಪೂರೈಕೆ ಬಿಗಡಾಯಿಸಿ ಬೆಲೆ ಏರಿಕೆಗೆ ಕಾರಣವಾಗಿದೆ. ದುರ್ಬಲ ರೂಪಾಯಿಯೂ ಆಮದು ವೆಚ್ಚವನ್ನು ಹೆಚ್ಚಿಸಿದೆ. . ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಭಾರತಕ್ಕೆ ಎಚ್ಚರಿಕೆಯ ಸಂದೇಶ :  ಅಡುಗೆ ಎಣ್ಣೆಯಲ್ಲಿ ಭಾರತದ ಆಮದು ಅವಲಂಬನೆ ಮುಂದುವರಿದಿರುವುದು ಆಹಾರ ಭದ್ರತೆ ಹಾಗೂ ಬೆಲೆ ಸ್ಥಿರತೆಗೆ ಸವಾಲಾಗಿ ಪರಿಣಮಿಸಬಹುದು. ಎಣ್ಣೆಕಾಳು ಉತ್ಪಾದನೆ ಹೆಚ್ಚಿಸುವುದು, ಉತ್ಪಾದಕತೆ ಸುಧಾರಿಸುವುದು ಹಾಗೂ ಆಮದು ಅವಲಂಬನೆ ಕಡಿಮೆ ಮಾಡುವ ದೀರ್ಘಕಾಲೀನ ನೀತಿಗಳು ಅಗತ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಭಾರತದಲ್ಲಿಯೇ  ಅಡುಗೆ ಎಣ್ಣೆ ಉತ್ಪಾದನೆಗೆ ಅಗತ್ಯವಾದ ಕೃಷಿಯತ್ತಲೂ ಯೋಚಿಸಬೇಕಿದೆ, ಪ್ರೋತ್ಸಾಹದ ಅಗತ್ಯ ಇದೆ.

India’s edible oil imports rose 7% during the first eight months of the 2025-26 oil year, despite a sharp 29% decline in June imports. Palm oil strengthened its dominance with a 48% share of total imports, while global biofuel policies, rising prices, and a weaker rupee continue to influence India’s edible oil market.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 17 – 08 -2026 | ಕರ್ನಾಟಕದಲ್ಲಿ ಮುಂದಿನ ದಿನಗಳ ಹವಾಮಾನ ಹೇಗಿರಲಿದೆ?

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

2 hours ago

₹2,500 ಕೋಟಿಗೂ ಅಧಿಕ ತೆರಿಗೆ ವಂಚನೆ ಪತ್ತೆ..! ಅಡಿಕೆ ಆಮದು ಜಾಲದ ಹಿಂದೆ ಏನಿತ್ತು?

ದಕ್ಷಿಣ-ಪೂರ್ವ ಏಷ್ಯಾದಿಂದ ಆಮದು ಮಾಡಿದ ಅಡಿಕೆಯನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ತಪ್ಪಾಗಿ ಘೋಷಿಸಿ…

10 hours ago

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

1 day ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

1 day ago

ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…

2 days ago

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

2 days ago