ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಸರಕು ಸಾಗಣೆ ಅಡಚಣೆಗಳು ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಭಾರತದ ರಸಗೊಬ್ಬರ ಭದ್ರತೆ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಹಸಿರು ಕ್ರಾಂತಿಯ ನಂತರ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಸಾಗಿದ್ದರೂ, ರಸಗೊಬ್ಬರ ಕ್ಷೇತ್ರದಲ್ಲಿ ಇನ್ನೂ ಆಮದು ಅವಲಂಬನೆ ಹೆಚ್ಚಿರುವುದು ಆತಂಕದ ವಿಷಯವಾಗಿದೆ.
ಭಾರತ ತನ್ನ ಅಗತ್ಯದ ಸುಮಾರು 20% ಸಾರಜನಕ (Nitrogen), 60% ರಂಜಕ (Phosphorus) ಹಾಗೂ ಶೇ.100ರಷ್ಟು ಪೊಟ್ಯಾಶ್ (Potash) ಅನ್ನು ನೇರವಾಗಿ ಅಥವಾ ಕಚ್ಚಾ ವಸ್ತುಗಳ ರೂಪದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಈ ಅವಲಂಬನೆಯಿಂದ ಜಾಗತಿಕ ಸಂಘರ್ಷ ಅಥವಾ ಸರಬರಾಜು ವ್ಯತ್ಯಯ ಉಂಟಾದಾಗ ದೇಶದ ಕೃಷಿ ವೆಚ್ಚ ಮತ್ತು ಆಹಾರ ಭದ್ರತೆ ಎರಡೂ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ಮಣ್ಣಿನ ಆರೋಗ್ಯವೂ ಕಳವಳ : ದೀರ್ಘಕಾಲದಿಂದ ರಾಸಾಯನಿಕ ಗೊಬ್ಬರಗಳ ಅಸಮತೋಲಿತ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿತ, ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗುವುದು ಹಾಗೂ ಸೂಕ್ಷ್ಮ ಪೋಷಕಾಂಶಗಳ ಕೊರತೆ ಹೆಚ್ಚುತ್ತಿರುವುದು ಕೃಷಿಯ ಸುಸ್ಥಿರತೆಗೆ ಸವಾಲಾಗಿದೆ.
ಪರಿಹಾರವೇನು? : ಭಾರತವು ಕೇವಲ ಆಮದು ಅವಲಂಬನೆ ಕಡಿಮೆ ಮಾಡುವುದಷ್ಟೇ ಅಲ್ಲದೆ, ರಸಗೊಬ್ಬರ ಕ್ಷೇತ್ರದಲ್ಲಿ ದೀರ್ಘಕಾಲೀನ ನೀತಿ ಬದಲಾವಣೆ ಅಗತ್ಯವಿದೆ. ಅವುಗಳಲ್ಲಿ ಪ್ರಮುಖವಾಗಿ ದೇಶೀಯ ರಸಗೊಬ್ಬರ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು , ಪರ್ಯಾಯ ಕಚ್ಚಾ ವಸ್ತುಗಳ ಅಭಿವೃದ್ಧಿ, ಜೈವಿಕ ಗೊಬ್ಬರ ಹಾಗೂ ಬಯೋ-ಇನ್‌ಪುಟ್‌ಗಳ ಬಳಕೆ ವಿಸ್ತರಣೆ , ಸಮತೋಲಿತ ಪೋಷಕಾಂಶ ನಿರ್ವಹಣೆ, ಮಣ್ಣಿನ ಆರೋಗ್ಯ ಆಧಾರಿತ ಗೊಬ್ಬರ ಬಳಕೆ ಅಗತ್ಯವಿದೆ.
ಆಹಾರ ಭದ್ರತೆಗೆ ರಸಗೊಬ್ಬರ ಭದ್ರತೆಯೇ ಆಧಾರ : ಆಹಾರ ಉತ್ಪಾದನೆ ಹೆಚ್ಚಿದರೂ, ರಸಗೊಬ್ಬರಕ್ಕಾಗಿ ವಿದೇಶಗಳ ಮೇಲೆ ಅತಿಯಾದ ಅವಲಂಬನೆ ಮುಂದುವರಿದರೆ ಭವಿಷ್ಯದಲ್ಲಿ ಜಾಗತಿಕ ಬಿಕ್ಕಟ್ಟುಗಳ ಪರಿಣಾಮ ಭಾರತೀಯ ಕೃಷಿಯ ಮೇಲೂ ನೇರವಾಗಿ ಬೀಳಬಹುದು ಎಂದು ಲೇಖಕರು ಎಚ್ಚರಿಸಿದ್ದಾರೆ. ಆದ್ದರಿಂದ ರಸಗೊಬ್ಬರ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುವುದು ರಾಷ್ಟ್ರೀಯ ಭದ್ರತೆಯ ಭಾಗವಾಗಿಯೂ ಪರಿಗಣಿಸಬೇಕಾಗಿದೆ.
India has achieved food self-sufficiency but remains heavily dependent on fertilizer imports, making agriculture vulnerable to geopolitical shocks and supply disruptions. Experts argue that expanding domestic fertilizer production, promoting biofertilizers, improving soil health, and diversifying supply chains can transform this vulnerability into a long-term competitive advantage.

