ಭಾರತದಲ್ಲಿ ಆಹಾರದ ವ್ಯರ್ಥವಾಗುವುದು (food waste) ಬಹುತೇಕವಾಗಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಇತ್ತೀಚಿನ ವರದಿ ಎಚ್ಚರಿಸಿದೆ. ಹಾಳಾದ ಆಹಾರವು ಮಿಥೇನ್ ಗ್ಯಾಸ್ ಅನ್ನು ಬಿಡುಗಡೆ ಮಾಡುತ್ತದೆ. ಇಂದಿನ ಹವಾಮಾನ ಬದಲಾವಣೆ ಹಾಗೂ ವಾತಾವರಣದ ಅಸ್ಥಿರತೆಯ ನಡುವೆ ಈ ಮಿಥೇನ್ ಗ್ಯಾಸ್ ಮುಂದಿನ 20 ವರ್ಷ ಅವಧಿಯಲ್ಲಿ ಕಾರ್ಬನ್ ಡೈಆಕ್ಸೈಡ್‌ಗಿಂತ ಸುಮಾರು 86 ಪಟ್ಟು ಹೆಚ್ಚು ಹಾನಿಕಾರಕ ಎಂದು ಸಂಶೋಧಕರು ಹೇಳಿದ್ದಾರೆ.
ಭಾರತದ ಆಡಳಿತ ಮತ್ತು ಸುಸ್ಥಿರ ಅಭಿವೃದ್ಧಿ ಸಂಸ್ಥೆಯಲ್ಲಿ ಸಂಶೋಧನೆ ಹಾಗೂ ತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ಕೆಲಸ ಮಾಡುವ ಪ್ರಾಂಜಲಿ ಚೌಧರಿ ಹಾಗೂ ವಾಷಿಂಗ್ಟನ್ ಆಡಳಿತ ಮತ್ತು ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಹಿರಿಯ ಫೆಲೋ ಆಗಿದ್ದು, ಪರಿಸರ ಎಂಜಿನಿಯರ್ ಆಗಿ ಕೆಲಸ ಮಾಡುವ ಶಿವಾಂಗ್ ಅಗರ್ವಾಲ್ ಅವರು ನಡೆಸಿದ ಅಧ್ಯಯನದ ವರದಿ ಪ್ರಕಾರ, ಭಾರತವು ಮುಂದಿನ 20 ವರ್ಷಗಳಲ್ಲಿ ಆಹಾರ ವ್ಯರ್ಥವಾಗುವುದು ಹಾಗೂ ಇದರಿಂದ ಆಗುವ ಪರಿಣಾಮಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ಎಚ್ಚರಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಆಹಾರದ ವ್ಯರ್ಥ ಮತ್ತು ಹಾನಿ: ಭಾರತದ ಆಹಾರ ವ್ಯರ್ಥವು ವರ್ಷಕ್ಕೆ ಸುಮಾರು 78.2 ಮಿಲಿಯನ್ ಟನ್ ಆಗಿದೆ. ಇದರ ಮೌಲ್ಯ ಸುಮಾರು ₹92,000 ಕೋಟಿ ಎನ್ನಲಾಗಿದೆ. ಇದರಿಂದಲೇ ಆರೋಗ್ಯಕರ ಆಹಾರದ ಕೊರತೆ ಇರುವ ಪ್ರದೇಶದಲ್ಲಿನ ಆಹಾರ ಕೊರತೆ ನೀಗಿಸಬಹುದಾಗಿದೆ. ಅಂದರೆ, ಸರಾಸರಿ ಭಾರತೀಯ ಕುಟುಂಬವು ವಾರ್ಷಿಕವಾಗಿ 55 ಕೆಜಿ ಆಹಾರವನ್ನು ವ್ಯರ್ಥ ಮಾಡುತ್ತದೆ. ಇದು ಒಟ್ಟು 78.2 ಮಿಲಿಯನ್ ಟನ್‌ಗಳಷ್ಟು ರಾಷ್ಟ್ರೀಯ ನಷ್ಟವನ್ನುಂಟುಮಾಡುತ್ತದೆ, ಇದರ ಮೌಲ್ಯ ₹92,000 ಕೋಟಿಗಳು. ಒಟ್ಟು ಆಹಾರ ಉತ್ಪಾದನೆಯ ಅಂದಾಜು ಶೇಕಡಾ 30-40 ರಷ್ಟು ವ್ಯರ್ಥವಾಗುತ್ತದೆ
ವಿಶ್ವಸಂಸ್ಥೆಯ ಇತ್ತೀಚಿನ ವರದಿ, ‘ ದಿ ಸ್ಟೇಟ್ ಆಫ್ ಫುಡ್ ಸೆಕ್ಯುರಿಟಿ ಅಂಡ್ ನ್ಯೂಟ್ರಿಷನ್ ಇನ್ ದಿ ವರ್ಲ್ಡ್ 2025′ , ಪ್ರಕಾರ ಸುರಕ್ಷಿತ, ಪೌಷ್ಟಿಕ ಆಹಾರವು ಸಾಮಾನ್ಯವಾಗಿ ಕೈಗೆಟುಕುವಂತಿಲ್ಲದ ಕಾರಣ ಲಕ್ಷಾಂತರ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ನಾವು ಆಹಾರ ಸ್ವಾವಲಂಬನೆಗಾಗಿ ಶ್ರಮಿಸುತ್ತಿದ್ದರೂ, 2024 ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 127 ದೇಶಗಳಲ್ಲಿ ಭಾರತ 105 ನೇ ಸ್ಥಾನದಲ್ಲಿದೆ.. ನಮ್ಮ ವೈಫಲ್ಯ ಆಹಾರದ ಕೊರತೆಯಲ್ಲ, ತ್ಯಾಜ್ಯದ ಸಮಸ್ಯೆ…!. ವಿಶ್ವಸಂಸ್ಥೆ ನಡೆಸಿದ ಹೊಸ ಜಾಗತಿಕ ಮೌಲ್ಯಮಾಪನವು ಭಾರತವನ್ನು ವಿಶ್ವದ ಅತಿದೊಡ್ಡ ಮೀಥೇನ್ ಹೊರಸೂಸುವ ದೇಶಗಳಲ್ಲಿ ಒಂದು ಎಂದು ಗುರುತಿಸಿದೆ. ಇದಕ್ಕೆ ಕೃಷಿ, ಬೆಳೆಗಳ ಅವಶೇಷಗಳನ್ನು ಸುಡುವುದು ಮತ್ತು ತುಂಬಿ ತುಳುಕುವ ಕಸದ ತೊಟ್ಟಿಗಳು ಈಗಾಗಲೇ ಹೆಚ್ಚುತ್ತಿರುವ ಹವಾಮಾನ ಪರಿಸ್ಥಿತಿಗೂ ಕಾರಣವಾಗಿದೆ.
ಸಮಸ್ಯೆಯ ಮೂಲ : ಈ ಸಮಸ್ಯೆಗೆ ಹಲವಾರು ಕಾರಣಗಳು ಇವೆ. ಮುಖ್ಯವಾಗಿ ಹಣ್ಣಿನ ಮತ್ತು ತರಕಾರಿಗಳು 16% ದಾಸ್ತಾನು ಅಥವಾ ಕೋಲ್ಡ್ ಸ್ಟೋರೇಜ್ ಕೊರತೆಯಿಂದಾಗಿ ಹಾಳಾಗುತ್ತಿದೆ. ಸಾಗಣೆ ಮತ್ತು ಮೂಲಸೌಕರ್ಯಗಳ ಕೊರತೆಯ ಕಾರಣದಿಂದ ಹೆಚ್ಚಿನ ವ್ಯರ್ಥವಾಗುತ್ತಿದೆ. ಮನೆಗಳಿಂದ ಮತ್ತು ಸಮಾರಂಭಗಳಲ್ಲಿ ಉಳಿದ ಆಹಾರ ಈಚೆಗೆ ಹೆಚ್ಚಾಗುತ್ತಿದೆ. ಈ ಎಲ್ಲಾ ಹಾಳಾದ ಆಹಾರ ಭೂಮಿಯಲ್ಲಿ ಕೊಳೆತು ಮಿಥೇನ್ ಅನ್ನು ಬಿಡುಗಡೆ ಮಾಡುತ್ತಿದ್ದು, ಇದು ಹವಾಮಾನ ಬದಲಾವಣೆಯ ಗಂಭೀರ ಕಾರಣಗಳಲ್ಲಿ ಒಂದಾಗಿದೆ.
ಭಾರತವು ವಿಶ್ವದ ಪ್ರಮುಖ ಮೀಥೇನ್ ಉತ್ಪಾದಕ ದೇಶಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದ್ದು, ಆಹಾರದ ಹೆಸರಿನಲ್ಲಿ ವ್ಯರ್ಥವಾಗುವ ವಸ್ತುಗಳು ಪರಿಸರ ಮೇಲೆ ಹೆಚ್ಚಿನ ಹಾನಿಯನ್ನು ಉಂಟು ಮಾಡುತ್ತಿವೆ. ಹೀಗಾಗಿ ಇಂದು ಆಹಾರ ತ್ಯಾಜ್ಯವನ್ನು ನಿಭಾಯಿಸುವುದು ಅಗತ್ಯವಾಗಿದೆ. ಇದು ಆಹಾರ ಭದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಡೆಯುವ ಮೂಲಕ ರಾಷ್ಟ್ರೀಯ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುತ್ತದೆ.
ಇದಕ್ಕಾಗಿ ಸಾವಯವ ತ್ಯಾಜ್ಯದಿಂದ ಉತ್ಪಾದಿಸುವ ಜೈವಿಕ-CNG ಸ್ಥಾಪರಗಳು ಹೆಚ್ಚಾಗಬೇಕು ಹಾಗೂ ಅಗತ್ಯವಾದ ಮಾರುಕಟ್ಟೆ ಬೇಡಿಕೆಗೂ ಇದು ಕಾರಣವಾಗುವ ಮೂಲಕ ಪರಿಸರದ ಮೇಲಿನ ಒತ್ತಡ ಕಡಿಮೆ ಮಾಡಬಹುದು ಎಂದು ವರದಿ ಹೇಳಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ



