Advertisement
ಆರೋಗ್ಯ

ಭಾರತದಲ್ಲಿ 100 ಮಿಲಿಯನ್ ಮಧುಮೇಹಿಗಳು…! | ಐಸಿಎಂಆರ್ ಅಧ್ಯಯನ

Share

ಇತ್ತೀಚಿನ ದಿನಗಳಲ್ಲಿ ಆರೋಗ್ಯ ರಕ್ಷಣೆಯೇ ದೊಡ್ಡ ಸಮಸ್ಯೆಯಾಗಿದೆ. ಪ್ರತಿ ಮನೆ ಮನೆಯಲ್ಲೂ ರೋಗಿಗಳಿದ್ದಾರೆ. ಅದರಲ್ಲೂ ಬಿಪಿ, ಸಕ್ಕರೆ ಖಾಯಿಲೆಯವರಂತೂ ಮಾಮೂಲು. ಅತೀ ಸಣ್ಣ ವಯಸ್ಸಿನ ಮಕ್ಕಳನ್ನು ಬಿಡುತ್ತಿಲ್ಲ ಈ ಡಯಾಬಿಟೀಸ್. ಇತ್ತೀಚೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್‌) ಸಹಯೋಗದ‍ಲ್ಲಿ ನಡೆಸಲಾದ ಅಧ್ಯಯನವು ಭಾರತ ದೇಶದಲ್ಲಿ ಇರುವ ಡಯಾಬಿಟಿಸ್ ರೋಗಿಗಳ ಬಗ್ಗೆ ಅಂಕಿ ಅಂಶಗಳನ್ನು ಹೊರಹಾಕಿದೆ. 

ಭಾರತ ದೇಶದಲ್ಲಿ 101.3 ಮಿಲಿಯನ್ ಜನರು ಅಥವಾ ಜನಸಂಖ್ಯೆಯ 11.4% ಜನರು ಮಧುಮೇಹವನ್ನು ಹೊಂದಿರುತ್ತಾರೆ ಎಂದು ಅಂದಾಜಿಸಿದೆ. ಭಾರತದಲ್ಲಿ 136 ಮಿಲಿಯನ್ ಜನರು ಅಥವಾ ಜನಸಂಖ್ಯೆಯ 15.3% ಜನರು ಪೂರ್ವ-ಮಧುಮೇಹ (ಪ್ರೀ-ಡಯಾಬಿಟೀಸ್‌) ಹೊಂದಿರಬಹುದು ಎಂದು ಅಧ್ಯಯನ ಬಹಿರಂಗಪಡಿಸಿದೆ.

ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದರೆ ಪೂರ್ವ ಮಧುಮೇಹ ಎಂದು ಕರೆಯಲಾಗುತ್ತದೆ. ಆದರೆ ಮಧುಮೇಹ ಎಂದು ವರ್ಗೀಕರಿಸಲು ಇಷ್ಟು ಸಾಕಾಗುವುದಿಲ್ಲ. ‘ದಿ ಲ್ಯಾನ್ಸೆಟ್ ಡಯಾಬಿಟಿಸ್ ಅಂಡ್ ಎಂಡೋಕ್ರೈನಾಲಜಿ ಮೆಡಿಕಲ್ ಜರ್ನಲ್‌’ನಲ್ಲಿ ಪ್ರಕಟವಾದ ಈ ಅಧ್ಯಯನವು, “ಭಾರತದಲ್ಲಿ ಚಯಾಪಚಯ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹರಡುವಿಕೆ”ಯನ್ನು ಪ್ರಮಾಣೀಕರಿಸಲು ಪ್ರಯತ್ನಿಸಿದೆ.

 

‘ಮೋಹನ್ ಮಧುಮೇಹ ಸ್ಪೆಷಾಲಿಟೀಸ್ ಸೆಂಟರ್‌’ನ ಅಧ್ಯಯನದ ಮುಖ್ಯ ಲೇಖಕಿ, ವ್ಯವಸ್ಥಾಪಕ ನಿರ್ದೇಶಕಿ ಎಂ.ಅಂಜನಾ ಅವರು ಪ್ರತಿಕ್ರಿಯಿಸಿದ್ದು, “ಪ್ರಸ್ತುತ ಮಧುಮೇಹದ ಹರಡುವಿಕೆ ಕಡಿಮೆ ಇರುವ ರಾಜ್ಯಗಳಲ್ಲಿ ಪ್ರಿ-ಡಯಾಬಿಟಿಸ್ ಮಟ್ಟಗಳು ಹೆಚ್ಚಿವೆ” ಎಂದಿರುವುದಾಗಿ  ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಪೂರ್ವ-ಮಧುಮೇಹ ಇದ್ದರೆ, ಅದು ಮಧುಮೇಹಕ್ಕೆ ಅತ್ಯಂತ ವೇಗವಾಗಿ ಪರಿವರ್ತನೆಯಾಗುವ ಸಾಧ್ಯತೆ ಇರುತ್ತದೆ. ಪೂರ್ವ ಮಧುಮೇಹ ಹೊಂದಿರುವ 60% ಕ್ಕಿಂತ ಹೆಚ್ಚು ಜನರು ಮುಂದಿನ ಐದು ವರ್ಷಗಳಲ್ಲಿ ಮಧುಮೇಹಿಗಳಾಗುತ್ತಾರೆ” ಎಂದಿದ್ದಾರೆ ಅಂಜಲಿ.

ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ 39.5% ಜನರು ಹೊಟ್ಟೆಯ ಬೊಜ್ಜು ಹೊಂದಿದ್ದರೆ, 28.6% ಸಾಮಾನ್ಯ ಬೊಜ್ಜು ಹೊಂದಿದ್ದರು ಎಂದು ಸಂಶೋಧನೆ ಹೇಳಿದೆ. ಅಧ್ಯಯನ ಮಾಡಿದವರಲ್ಲಿ 81.2% ರಷ್ಟು ಕೊಲೆಸ್ಟ್ರಾಲ್, ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್‌ನಂತಹ ಅಸಮತೋಲನವನ್ನು ಹೊಂದಿದ್ದಾರೆ ಎಂದಿದೆ. ಈ ಅಧ್ಯಯನವು 2008 ಮತ್ತು 2020ರ ನಡುವೆ ನಡೆದಿದೆ. 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,13,043 ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿ ವೆಚ್ಚ ಕಡಿಮೆ ಮಾಡಲು ಇಲ್ಲಿ ರೈತರ ಹೊಸ ಹೆಜ್ಜೆ…

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಚಿತ್ರಕೂಟದ…

3 hours ago

‘ರೋಸ್ಟೆಡ್ ಅಡಿಕೆ’ ಆಮದು ವರ್ಗೀಕರಣಕ್ಕೆ ಮತ್ತೊಂದು ತಿರುವು – ಹೈಕೋರ್ಟ್ ತೀರ್ಪು ಉಲ್ಲೇಖಿಸಿ ಅರ್ಜಿ ತಿರಸ್ಕರಿಸಿದ ಮುಂಬೈ ಪ್ರಾಧಿಕಾರ

‘ರೋಸ್ಟೆಡ್ ಅಡಿಕೆ’ಯನ್ನು ಯಾವ ಸುಂಕ ವರ್ಗದಡಿ ಪರಿಗಣಿಸಬೇಕು ಎಂಬ ವಿವಾದಕ್ಕೆ ಮುಂಬೈ CAAR…

12 hours ago

ಬರಕ್ಕೆ ರಾಗಿ ಕೂಡ ಸೋಲುತ್ತಿದೆ – ‘ಬರ ನಿರೋಧಕ’ ಎಂದರೆ ಮಳೆ ಇಲ್ಲದಿದ್ದರೂ ಬೆಳೆಯುತ್ತದೆ ಎಂದಲ್ಲ!

ಮಳೆ ಇಲ್ಲದಿದ್ದರೆ ರಾಗಿ ಸೇರಿದಂತೆ ಬರ ಸಹಿಷ್ಣು ಬೆಳೆಗಳೂ ಉಳಿಯುವುದಿಲ್ಲ ಎಂಬುದನ್ನು ಕರ್ನಾಟಕದ…

14 hours ago

₹2,000ಕ್ಕಿಂತ ಹೆಚ್ಚಿನ UPI ವಹಿವಾಟಿನ MDRಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ UPI ವ್ಯಾಪಾರಿ ವಹಿವಾಟುಗಳಿಗೆ MDR ವಿಧಿಸುವ ಕೇಂದ್ರದ ನಿರ್ಧಾರಕ್ಕೆ…

20 hours ago

ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಎರಡು ಪದಕ: ಪುರುಷರಿಗೆ ಬೆಳ್ಳಿ, ಮಹಿಳೆಯರಿಗೆ ಕಂಚು – ಪ್ರಧಾನಿ ಮೋದಿ ಅಭಿನಂದನೆ

ಸಮರ್ಕಂಡ್‌ನಲ್ಲಿ ನಡೆದ ಫಿಡೆ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷರ ತಂಡ ಬೆಳ್ಳಿ ಹಾಗೂ…

21 hours ago

ಮಳೆ ಬದಲಾಗಿದೆಯೇ? ಪ್ರಕೃತಿ ಬದಲಾಗಿದೆಯೇ? ಅಥವಾ ನಾವೇ ಬದಲಾಗಿದ್ದೇವೆಯೇ?

ಕಳೆದ ಕೆಲವು ದಶಕಗಳಲ್ಲಿ ಮಳೆಯ ಸಮಯ, ತೀವ್ರತೆ ಮತ್ತು ಹಂಚಿಕೆಯಲ್ಲಿ ಬದಲಾವಣೆ ಕಂಡುಬರುತ್ತಿರುವುದಕ್ಕೆ…

22 hours ago