ಭಾರತವನ್ನು ಅಮೇರಿಕಾದ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಅಮೇರಿಕಾ ವಿತ್ತ ಸಚಿವೆ ಹೇಳಿದ್ದಾರೆ ಇದೇ ವೇಳೆ ಫ್ರೆಂಡ್ ಶೋರಿಂಗ್ ಬಗ್ಗೆನು ಅವರು ಪ್ರಸ್ತಾಪಿಸಿದ್ದಾರೆ. ಪೂರೈಕೆ ಸರಪಳಿ (ಸಪ್ಲೈ ಚೈನ್) ನ್ನು ಬಲಪಡಿಸುವ ನಿಟ್ಟಿನಲ್ಲಿ ಫ್ರೆಂಡ್ ಶೋರಿಂಗ್ ಬಹಳ ಸಹಕಾರಿಯಾಗಲಿದೆ. ಅಮೇರಿಕ ಅಧ್ಯಕ್ಷ ಜೋ ಬೈಡನ್ ಕೂಡ ಈ ಹಿಂದೆ ಭಾರತವನ್ನು ಅವಿಭಾಜ್ಯ ಪಾಲುದಾರ ರಾಷ್ಟ್ರ ಎಂದು ಹೇಳಿದ್ದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿ-20 ಹಣಕಾಸು ಸಚಿವರು ಹಾಗೂ ಕೇಂದ್ರ ಬ್ಯಾಂಕ್ ಗೌರ್ನರ್ ಗಳ ಸಭೆಯಲ್ಲಿ ಅಮೇರಿಕ ಹಾಗೂ ಭಾರತದ ಟೆಕ್ ಉದ್ಯಮದ ನಾಯಕರು ಭಾಗಿಯಾಗಿದ್ದರು.
2021ರಲ್ಲಿ ಇಂಡೋ-ಅಮೇರಿಕಾ ದ್ವಿಪಕ್ಷೀಯ ವ್ಯಾಪಾರ 150 ಬಿಲಿಯನ್ ಡಾಲರ್ ನಷ್ಟಿತ್ತು. ನಮ್ಮ ಜನರ ನಡುವಿನ ಸಂಬಂಧಗಳು ನಮ್ಮ ದೇಶಗಳ ಸಂಬಂಧದ ನಿಕಟತೆಯನ್ನು ದೃಢೀಕರಿಸುತ್ತವೆ. 2 ಲಕ್ಷ ಭಾರತೀಯರು ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದ ಅಮೇರಿಕಾ ಶಾಲೆ ಮತ್ತು ವಿಶ್ವವಿದ್ಯಾಲಯಗಳನ್ನು ವಿದ್ಯಾರ್ಥಿಗಳು ಶ್ರೀಮಂತಗೊಳಿಸುತ್ತಿದ್ದಾರೆ. ಭಾರತೀಯರು ತಮ್ಮ ನಡುವೆ ಸಂವಹನ ನಡೆಸಲು ವಾಟ್ಸ್ ಆಪ್ ನ್ನು ಬಳಕೆ ಮಾಡುತ್ತಿದ್ದು ಹಲವು ಅಮೇರಿಕ ಸಂಸ್ಥೆಗಳು ಕಾರ್ಯನಿರ್ವಹಿಸುವುದಕ್ಕೆ ಇನ್ಫೋಸಿಸ್ ಮೇಲೆ ಅವಲಂಬಿತವಾಗಿದೆ ಎಂದು ಅಮೇರಿಕಾ ವಿತ್ತ ಸಚಿವರು ಹೇಳಿದರು.
ಇನ್ಫೋಸಿಸ್ ನ ಅಧ್ಯಕ್ಷ ನಂದನ್ ನಿಲೇಕಣಿ, ಐಬಿಎಂ ಇಂಡಿಯಾದ ಎಂಡಿ ಸಂದೀಪ್ ಪಟೇಲ್, ಇಂಟೆಲ್ ಇಂಡಿಯಾ ಮುಖ್ಯಸ್ಥ ನಿವೃತಿ ರೈ, ಫಾಕ್ಸ್ ಕಾನ್ ಇಂಡಿಯಾ ಮುಖ್ಯಸ್ಥ ಜೋಷ್ ಫೌಲ್ಗರ್ ಮತ್ತು ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್ಜಿ ಸಹ ಭಾಗವಹಿಸಿದ್ದರು.
ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಾಗರಿಕರನ್ನು ಮತ್ತು…
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಂಭವನೀಯ ದಾಳಿಯ ಬಗ್ಗೆ…
ಹಿಂದೂ ಧರ್ಮದ ವಿಶೇಷತೆ ಎಂದರೆ ಅದು ಸ್ವ ವಿಮರ್ಶೆಯ (self -criticism) ಸ್ವಾತಂತ್ರ್ಯ…
ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಹೊಸತನದ ಶೋರೂಮ್ ಅನಾವರಣದ ಅಂಗವಾಗಿ ಮೇ 9…
ಮುಳಿಯ ನೂತನ ನವೀಕೃತ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಕೃಷಿ ಬೆಳವಣಿಗೆಗೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490