ಸಂಪರ್ಕ ಕ್ಷೇತ್ರ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಮುನ್ನುಗ್ಗುತ್ತಿದೆ. 2ಜಿ ನಂತರ, 3ಜಿ , 4ಜಿ, 5ಜಿ ಯಲ್ಲಿ ನಿಧಾನಗತಿಯಲ್ಲಿದ್ದ ಭಾರತವು ಇದೀಗ 6 ಜಿ ಟೆಕ್ನಾಲಜಿಗೆ ಸಂಬಂಧಿಸಿದಂತೆ ಸಲ್ಲಿಕೆ ಆಗುತ್ತಿರುವ ಪೇಟೆಂಟ್ಗಳಲ್ಲಿ ಭಾರತದ ಪಾಲು ಗಮನಾರ್ಹವಾಗಿದೆ. ಜಾಗತಿಕವಾಗಿ ಅತಿಹೆಚ್ಚು 6ಜಿ ಪೇಟೆಂಟ್ಗಳನ್ನು ಸಲ್ಲಿರುವ ದೇಶಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಈ ನಡುವೆಯೇ ಭಾರತ್ 6ಜಿ ಅಲೈಯನ್ಸ್ ಮತ್ತು ವಿವಿಧ ಪಾಲುದಾರರ ನಡುವೆ ಐದು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
5ಜಿ ಗಿಂತ 100 ಪಟ್ಟು ವೇಗವಾದ 6ಜಿ ತಂತ್ರಜ್ಞಾನವು ಭವಿಷ್ಯದ ಸಂಪರ್ಕ ವ್ಯವಸ್ಥೆಯನ್ನು ರೂಪಿಸುತ್ತಿದೆ. ಈ ಪ್ರಗತಿಯನ್ನು ಚರ್ಚಿಸಲು, ಈಚೆಗೆ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ನಡೆಸಲಾಯಿತು. ಈ ಸಂದರ್ಭ ಅಲ್ಲಿ ಭಾರತ್ 6ಜಿ ಅಲೈಯನ್ಸ್ ಮತ್ತು ವಿವಿಧ ಪಾಲುದಾರರ ನಡುವೆ ಐದು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತವು ಜಾಗತಿಕವಾಗಿ 5ಜಿ ನೆಟ್‌ವರ್ಕ್‌ಗಳ ವೇಗಕ್ಕಿಂತಲೂ ಹೆಚ್ಚಿನ ವೇಗವನ್ನು ಬಯಸುತ್ತಿದೆ. ಹೀಗಾಗಿ ಭಾರತವು ಈಗ 6ಜಿ ಕ್ರಾಂತಿಗೆ ಪ್ರಮುಖ ಕೊಡುಗೆ ನೀಡುವ ಉತ್ಸಾಹದಲ್ಲಿದೆ. ಭಾರತದಲ್ಲಿ ಈಗ ತಂತ್ರಜ್ಞಾನಗಳು ಬಹುವೇಗವಾಗಿ ಮುನ್ನಡೆಯುತ್ತಿದೆ. ಹೀಗಾಗಿ ನೂತನ ವಿಧಾನಗಳೂ ಅಗತ್ಯವಾಗಿದೆ.
2030ರೊಳಗೆ 6ಜಿ ತಂತ್ರಜ್ಞಾನದ ವಿನ್ಯಾಸ, ಅಭಿವೃದ್ಧಿ ಮತ್ತು ಅಳವಡಿಕೆಯಲ್ಲಿ ಭಾರತ ಮುಂಚೂಣಿಯಲ್ಲಿರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಇದಕ್ಕಾಗಿಯೇ ಭಾರತ್ 6ಜಿ ವಿಶನ್ ಅನ್ನು ಸರ್ಕಾರ ರೂಪಿಸಿದೆ. 6ಜಿ ಇಕೋಸಿಸ್ಟಂ ಸಂಶೋಧನೆಯ ಮೇಲೆ ಸಲ್ಲಿಕೆಯಾಗಿರುವ 470 ಪ್ರಸ್ತಾವಗಳನ್ನು ಸರ್ಕಾರ ಅವಲೋಕಿಸುತ್ತಿದೆ. 6ಜಿ ಸಂಶೋಧನೆಯನ್ನು ತೀವ್ರಗೊಳಿಸಲು ಎರಡು ಸುಧಾರಿತ ಪ್ರಯೋಗಕೇಂದ್ರಗಳಿಗೆ ದೂರಸಂಪರ್ಕ ಇಲಾಖೆಯಿಂದ ಧನಸಹಾಯ ನೀಡಲಾಗಿದೆ. ಈ ನಡುವೆ 5ಜಿ ಸೇವೆಯನ್ನು ವಿಸ್ತರಿಸುತ್ತಾ ಅಪ್ಡೇಟ್‌ಗೆ ಸಿದ್ಧತೆ ನಡೆಯುತ್ತಿದೆ.
ಈ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕೂಡಾ ಖಾಸಗಿ ನೆಟ್ವರ್ಕ್‌ಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಇದೀಗ ತನ್ನ ವೇಗದ 5ಜಿ ಇಂಟರ್‌ನೆಟ್ ಸೇವೆ ಒದಗಿಸುವ ಯೋಜನೆಗೆ ಬೇಕಾದ ಎಲ್ಲ ಅಗತ್ಯ ಸಿದ್ಧತೆಗಳನ್ನು ಕಂಪನಿ ಪೂರ್ಣಗೊಳಿಸಿದೆ. ಮುಂದಿನ 6 ಜಿ ಸೇವೆಗೆ ಅಗತ್ಯವಾದ ರೂಪುರೇಷೆಗಳೊಂದಿಗೆ ವ್ಯವಸ್ಥೆಗಳು ಸಿದ್ಧವಾಗುತ್ತಿದೆ.
ಬಿಎಸ್‌ಎನ್‌ಎಲ್ ಗ್ರಾಹಕರು ಪರಿಪೂರ್ಣ 4ಜಿ ಸೇವೆಗಾಗಿ ಕಾಯುತ್ತಿರುವ ಮಧ್ಯೆಯೇ ಬಿಎಎಸ್‌ಎನ್‌ಎಲ್ 5ಜಿ ಸೇವೆಯ ಬಗ್ಗೆ ಕೇಂದ್ರ ಟೆಲಿಕಾಂ ಸಚಿವರು 5ಜಿ ಸೇವೆಯನ್ನೂ ನೀಡುವ ಬಗ್ಗೆ ಹೇಳಿದ್ದಾರೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್‌ನ 4ಜಿ ಸೇವೆಯನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರುವ ಜೊತೆಗೆ 5ಜಿ ಸೇವೆ ನೀಡಲು ಯೋಜಿಸಿದೆ. ಈ ಸೇವೆ ಆರಂಭಿಸುವ ದಿನಾಂಕವನ್ನು ಕೂಡಾ ಸಚಿವರು ತಿಳಿಸುತ್ತೇನೆ ಎಂದು ಹೇಳಿದ್ದಾರೆ.ಮುಂದಿನ ವರ್ಷ ಜೂನ್ 2025 ರ ಹೊತ್ತಿಗೆ 5 ಜಿ ಸೇವೆ ಬಿಎಸ್ ಎನ್‌ಎಲ್ ನೀಡಲಿದೆ. ಈ ಎಲ್ಲಾ ಉದ್ದೇಶಗಳಿಂದಲೇ ಬಿಎಸ್‌ಎನ್ ಎಲ್ ಹಳ್ಳಿ ಹಳ್ಳಿಗಳಲ್ಲೂ ಸಾವಿರಾರು ಟವರ್ ಸ್ಥಾಪಿಸಿದೆ. 22 ತಿಂಗಳಲ್ಲಿ 4.5 ಲಕ್ಷ ಟವರ್ ಬಿಎಸ್‌ಎನ್‌ಎಲ್ ಪರಿಣಾಮಕಾರಿಗೆ 4ಜಿ ಇಂಟರ್‌ನೆಟ್ ಸೇವೆ ನೀಡಲಿದೆ. ಹಳ್ಳಿಗಳಲ್ಲೂ ಈ ಸೇವೆಗೆ ತಯಾರಿ ನಡೆಸಲು ಸೂಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಉತ್ಯುತ್ತಮ ನೆಟ್ವರ್ಕ್ ಇದಾಗಲಿದೆ.
6 ಜಿ ಗಾಗಿ, ಭಾರತ ಸರ್ಕಾರವು ಮುಂದಿನ ದಿನಗಳಲ್ಲಿ ಸಂಶೋಧನೆಗಾಗಿಯೇ 10,000 ಕೋಟಿಗಳನ್ನು ನಿಗದಿಪಡಿಸಿದೆ.ಚೀನಾದಲ್ಲಿ ಟೆಲಿಕಾಂ ದೈತ್ಯ ಹುವೈ 2019 ರಲ್ಲಿ 6ಜಿ ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು 22 ಶತಕೋಟಿಗೂ ಹೆಚ್ಚು ಈಗಾಗಲೇ ಸಂಶೋಧನೆಗೆ ಖರ್ಚು ಮಾಡಿದೆ. ಹಾಗಾಗಿ ಭಾರತವು 6ಜಿ ಸಂಶೋಧನೆಗೆ ಈಗಲೇ ಹೆಚ್ಚಿನ ಆದ್ಯತೆಯನ್ನು ನೀಡಿದೆ.
6ಜಿ ನೆಟ್‌ವರ್ಕ್ ನಿರ್ಮಿಸಲು ಮತ್ತು ನಿರ್ವಹಿಸಲು ಹೆಚ್ಚು ತರಬೇತಿ ಪಡೆದ ಎಂಜಿನಿಯರ್‌ಗಳು, ಎಐ ತಜ್ಞರು ಮತ್ತು ಟೆಲಿಕಾಂ ತಜ್ಞರ ಕಾರ್ಯಪಡೆಯ ಅಗತ್ಯವಿದೆ. ಭಾರತವು ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಇಂಜಿನಿಯರಿಂಗ್ ಪದವೀಧರರನ್ನು ನಿರ್ಮಿಸುತ್ತಿದೆಯಾದರೂ, ಅವರಲ್ಲಿ ಶೇ.48 ರಷ್ಟು ನಿರುದ್ಯೋಗಿಗಳಾಗಿಯೇ ಉಳಿಯುತ್ತಿದ್ದಾರೆ. ಕಾರಣ ಭಾರತದ ತಂತ್ರಜ್ಞಾನದ ಬೆಳವಣಿಗೆಯಲ್ಲಿನ ಹಿನ್ನಡೆ. ಹೀಗಾಗಿ ಅನೇಕ ಪ್ರತಿಭೆಗಳು ಇದು ಉತ್ತಮ ತಂತ್ರಜ್ಞಾನವನ್ನು ಹೊಂದಿರುವ ದೇಶಗಳಿಗೆ ವಲಸೆ ಹೋಗಲು ಕಾರಣವಾಗುತ್ತದೆ. ಇದಕ್ಕಾಗಿಯೇ ಭಾರತದಲ್ಲಿ ತಂತ್ರಜ್ಞಾನಗಳು ವೇಗವಾಗಿ ಮುನ್ನಡೆಯಬೇಕಿದೆ.ಹಳ್ಳಿಯಲ್ಲೂ ವೇಗದ ಇಂಟರ್ನೆಟ್ ಅಗತ್ಯ ಇದೆ. ಇಂದು ಹಳ್ಳಿಯಿಂದ ಸ್ಮಾರ್ಟ್ ಸಿಟಿಯವರೆಗೂ ವೇಗದ ನೆಟ್ವರ್ಕ್ ಅಗತ್ಯ ಇದೆ. ಹಾಗಾಗಿಯೇ 6ಜಿ ನಿರ್ಣಾಯಕವಾಗಲಿದೆ.
ಭಾರತದಲ್ಲಿ ಮೊಬೈಲ್ ಸಂಪರ್ಕಗಳು 904 ಮಿಲಿಯನ್‌ನಿಂದ 1.16 ಬಿಲಿಯನ್‌ಗೆ ಏರಿದೆ, ಬ್ರಾಡ್‌ಬ್ಯಾಂಡ್ ಬಳಕೆದಾರರು 60 ಮಿಲಿಯನ್‌ನಿಂದ 924 ಮಿಲಿಯನ್‌ಗೆ ಜಿಗಿದಿದ್ದಾರೆ ಮತ್ತು ಫೈಬರ್ ಆಪ್ಟಿಕ್ ನೆಟ್‌ವರ್ಕ್ 11 ಮಿಲಿಯನ್‌ನಿಂದ 41 ಮಿಲಿಯನ್ ಕಿಲೋಮೀಟರ್‌ಗಳಿಗೆ ವಿಸ್ತರಿಸಿದೆ. ಹಾಗಾಗಿ ಭಾರತ ಈಗ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ. ಹಳ್ಳಿಗಳಲ್ಲೂ ಬೇಡಿಕೆ ಇದೆ. ಉದ್ಯೋಗಗಳು ಹಳ್ಳಿಯಲ್ಲೂ ಆರಂಭಗೊಳ್ಳುತ್ತಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…