ಭಾರತದಲ್ಲಿ ಪಾನ್ ಮಸಾಲಾ ವ್ಯಾಪಾರವು ಹೆಚ್ಚುತ್ತಿದೆ. ಗ್ರಾಮೀಣ ಹಾಗೂ ಅರೆ ನಗರ ಪ್ರದೇಶದಲ್ಲಿ ಹೆಚ್ಚಾಗಿ ಪಾನ್ ಮಸಾಲಾ ಬಳಕೆಯಾಗುತ್ತಿದ್ದು 2022-2027 ರ ಅವಧಿಯಲ್ಲಿ ಈ ಬಳಕೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಭಾರತದ ಪಾನ್ ಮಸಾಲಾ ಮಾರುಕಟ್ಟೆ ಸಮೀಕ್ಷೆ ಹೇಳಿದೆ. ಹೀಗಾಗಿ ಅಡಿಕೆ ಬೇಡಿಕೆಯೂ ಹೆಚ್ಚಲಿದೆ.
ಎಕ್ಸ್‌ಪರ್ಟ್ ಮಾರ್ಕೆಟ್ ರಿಸರ್ಚ್ ಇದರ ವರದಿ ಪ್ರಕಾರ ಭಾರತದಲ್ಲಿ ಪಾನ್ ಮಸಾಲಾ ಮಾರುಕಟ್ಟೆಯು ಏರುಗತಿಯಲ್ಲಿದೆ. ಮುಂದಿನ 5 ವರ್ಷದಲ್ಲಿ ಈ ಬೇಡಿಕೆಯು ಇರಲಿದೆ. ಅನೇಕ ರಾಜ್ಯಗಳಲ್ಲಿ ಈ ಬೇಡಿಕೆ ಇದೆ. ಅದರಲ್ಲೂ ಭಾರತದ ಗ್ರಾಮೀಣ ಹಾಗೂ ಅರೆ ನಗರ ಪ್ರದೇಶದಲ್ಲಿ ಪಾನ್ ಮಸಾಲಾಗಳಿಗೆ ಬೇಡಿಕೆ ಹೆಚ್ಚಿದೆ. ದೇಶಾದ್ಯಂತ ಹಲವಾರು ಸುವಾಸನೆಗಳಲ್ಲಿ ಪಾನ್ ಮಸಾಲಾ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿದೆ. ಮಸಾಲೆಯುಕ್ತ ಊಟದ ನಂತರ ಸೇವನೆಯ ಮೌತ್ ಫ್ರೆಶ್ನರ್ ಪಾನ್ ಮಸಾಲಾ ಜನಪ್ರಿಯತೆಯು ಮಾರುಕಟ್ಟೆಯಲ್ಲಿ ಈಗ ಪ್ರಮುಖ ಅಂಶವಾಗಿದೆ ಎಂದು ನಿರೀಕ್ಷಿಸಲಾಗಿದೆ.
ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳು ಪಾನ್ ಮಸಾಲದ ಅತಿ ಹೆಚ್ಚು ಗ್ರಾಹಕರು. ಇಲ್ಲಿ ಮಸಾಲಾ ಉತ್ಪನ್ನವನ್ನು ಸಾಂಪ್ರದಾಯಿಕವಾಗಿ ಸೇವಿಸಲಾಗುತ್ತದೆ. ಈ ರಾಜ್ಯಗಳಲ್ಲಿನ ಸ್ಟಾಲ್‌ಗಳಲ್ಲಿ ಪಾನ್ ಮಸಾಲಾ ಸುಲಭವಾಗಿ ಲಭ್ಯವಾಗುವುದರಿಂದ ಮುಂಬರುವ ವರ್ಷಗಳಲ್ಲಿ ಉತ್ಪನ್ನದ ಬೇಡಿಕೆ ಹೆಚ್ಚಿಸುವ ನಿರೀಕ್ಷೆಯಿದೆ. ಪಾನ್ ಮಸಾಲಾದಲ್ಲಿ ಅಡಿಕೆಯೂ ಒಂದು ಪ್ರಮುಖ ವಸ್ತುವಾದ್ದರಿಂದ ಅಡಿಕೆಯ ಬೇಡಿಕೆ ಇನ್ನಷ್ಟು ಹೆಚ್ಚಲಿದೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.